ಮೇ 21 ರಂದು ನಿಗದಿಯಾಗಿರುವ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಐಎಂಎ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಲ್ಲಿ ಮನವಿ ಮಾಡಿಕೊಂಡಿದೆ.
ನವದೆಹಲಿ (ಮೇ.13): ಮೇ 21 ರಂದು ನಿಗದಿಯಾಗಿರುವ ನೀಟ್-ಪಿಜಿ ಪರೀಕ್ಷೆಯನ್ನು (NEET-PG exam) ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘ (Indian Medical Association- ಐಎಂಎ) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union health minister Mansukh Mandaviya) ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
Letter to Honourable Health Minister Shri Ji requesting rescheduling of the NEET Exam pic.twitter.com/Gmtb4i2Hv5
— Indian Medical Association (@IMAIndiaOrg)ಪತ್ರದಲ್ಲಿ, ನೀಟ್-ಪಿಜಿ 2021 ರ ಪರೀಕ್ಷೆಯನ್ನು ಸೆಪ್ಟೆಂಬರ್ 2021 ರಲ್ಲಿ ನಿಗದಿತ ದಿನಾಂಕದ 5 ತಿಂಗಳ ನಂತರ ನಡೆಸಲಾಯಿತು ಎಂದು ಐಎಂಎ ಹೇಳಿದೆ. ನಂತರ ಅಕ್ಟೋಬರ್ 25, 2021 ರಿಂದ ಪ್ರಾರಂಭವಾಗಬೇಕಿದ್ದ ಕೌನ್ಸೆಲಿಂಗ್ ಅನ್ನು ಸೀಟ್ ಗಳ ಮೀಸಲಾತಿ ಘೋಷಣೆ ಬಾಕಿ ಇದ್ದ ಕಾರಣ ವಿಳಂಬವಾಗಿ (ಜನವರಿ, 2022 ರಲ್ಲಿ) ಪ್ರಾರಂಭಿಸಲಾಯಿತು. ನೀಟ್ ಪಿಜಿ 2021ರ ಅಖಿಲ ಭಾರತ ಕೋಟಾ ಕೌನ್ಸೆಲಿಂಗ್ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ವೈದ್ಯಕೀಯ ಸಂಘ ಕೇಂದ್ರ ಸಚಿವರಿಗೆ ಮನವಿ ಮಾಡಿದೆ.
IOCL Recruitment 2022: ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ
ನೀಟ್ ಪಿಜಿ 2022 ರ ಪರೀಕ್ಷೆ ಮೇ 21ಕ್ಕೆ ನಿಗದಿಯಾಗಿದೆ. ತಾವು ಸಕಾಲದಲ್ಲಿ ಮಧ್ಯಪ್ರವೇಶಿಸಿ, ಪರೀಕ್ಷೆಗಳನ್ನು ಸೂಕ್ತ ರೀತಿಯಲ್ಲಿ ಮುಂದೂಡಬೇಕು. ಆಗ ಮಾತ್ರ ನೀಟ್ 2021ರ ಅಭ್ಯರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಮತ್ತು ನೀಟ್ ಪಿಜಿ 2022ರ ಪರೀಕ್ಷೆಗಳನ್ನು ಬರೆಯಲು ಇಂಟರ್ನಿಗಳಿಗೆ ಅರ್ಹತೆ ಸಿಗುತ್ತದೆ ಎಂದು ಐಎಂಎ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದ ಸುಮಾರು 5 ಸಾವಿರದಿಂದ 10 ಸಾವಿರ ಮಂದಿ ಇಂಟರ್ನಿಗಳು ತಮ್ಮ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿಳಂಬವಾದ ಕಾರಣ NEET-PG ಗೆ ಹಾಜರಾಗಲು ಅನರ್ಹರಾಗಿದ್ದಾರೆ ಮತ್ತು ಹೆಚ್ಚೆಂದರೆ ಪರೀಕ್ಷೆಗೆ ನಿಗದಿಪಡಿಸಿದ ಅರ್ಹತೆಯ ಮಾನದಂಡಗಳನ್ನು ಮೀರಿ ಅವರು ಇಂಟರ್ನ್‌ಶಿಪ್ ಮಾಡಿದ್ದಾರೆ ಎಂದು IMA ಹೇಳಿದೆ.
Eastern Railway Recruitment 2022: ಬರೋಬ್ಬರಿ 1201 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ನಾತಕೋತ್ತರ ಕೋರ್ಸ್‌ಗಳ ವೇಳಾಪಟ್ಟಿ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, NEET 2022 ಪರೀಕ್ಷೆಗಳನ್ನು ಮುಂದೂಡುವ ಅಗತ್ಯವನ್ನು IMA ಒತ್ತಿಹೇಳಿತು ಏಕೆಂದರೆ ಇದು "ಲಕ್ಷಗಟ್ಟಲೆ ವೈದ್ಯಕೀಯ ಪದವೀಧರರ ವೃತ್ತಿ ಮಾರ್ಗಗಳಿಗೆ ಸಂಬಂಧಿಸಿದೆ".
NEET PG 2022 ರ ಪರೀಕ್ಷೆಯ ದಿನಾಂಕವು 21 ನೇ ಮೇ 2022 ಆಗಿರುವುದರಿಂದ, ನಿಮ್ಮ ಸಮಯೋಚಿತ ಮಧ್ಯಸ್ಥಿಕೆ ಮತ್ತು NEET PG 2022 ಅನ್ನು ಸಮಂಜಸವಾದ ಅವಧಿಗೆ ಮುಂದೂಡುವುದನ್ನು ನಾವು ವಿನಂತಿಸುತ್ತೇವೆ, ಆದ್ದರಿಂದ ಪ್ರಸ್ತುತ NEET PG 2021 ಆಕಾಂಕ್ಷಿಗಳು ತಯಾರಾಗಲು ಮತ್ತು ಕಾಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ಹೊಂದಿರುತ್ತಾರೆ. ಮುಂಬರುವ NEET-PG 2022 ಪರೀಕ್ಷೆಗೆ ಮತ್ತು ಎಲ್ಲಾ ಇಂಟರ್ನ್‌ಗಳ ಅರ್ಹತೆಯನ್ನು ಸಹ ಖಾತ್ರಿಪಡಿಸಲಾಗಿದೆ" ಎಂದು IMA ಹೇಳಿದೆ.
SSC Recruitment 2022: ಬರೋಬ್ಬರಿ 1920 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೇ.19 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧ್ಯತೆ: ಮೇ 15ರ ವೇಳೆಗೆ ನಿರೀಕ್ಷಿಸಿದ್ದ ಎಸ್ಸೆಸ್ಸೆಲ್ಸಿ (SSLC) ಫಲಿತಾಂಶ ಮೌಲ್ಯಮಾಪನದಲ್ಲಿ ಸಣ್ಣಪುಟ್ಟದೋಷ ಸರಿಪಡಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೂರ್ನಾಲ್ಕು ದಿನ ತಡವಾಗಲಿದ್ದು, ಮೇ 19ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಪರಿಕ್ಷಾ ಫಲಿತಾಂಶವನ್ನು, ದಿನಾಂಕ ಸಮಯ ಎಲ್ಲಾ ಮಾಹಿತಿಯನ್ನು (Karnataka SSLC Result date time) https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ ಚೆಕ್ ಮಾಡಬಹುದು.