
ಬೆಂಗಳೂರು(ಜ. 28) ಒಂದೆಡೆ ಶಾಲಾ-ಕಾಲೇಜುಗಳ ಎಲ್ಲ ತರಗತಿಯನ್ನು ಆರಂಭಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿರುವಾಗಲೇ ಸಾರಿಗೆ ನಿಗಮ ಸಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಳೆ ಬಸ್ ಪಾಸ್ ನಲ್ಲೇ ಓಡಾಟ ನಡೆಸಲು ಅವಕಾಶ ಮಾಡಿಕೊಡಲಾಗಿದೆ 2020- 21 ನೇ ಸಾಲಿನ ಶಾಲಾ ಕಾಲೇಜು ಆರಂಭವಾದ ಕಾರಣಕ್ಕೆ ಫೆಬ್ರವರಿ 28 ರವರೆಗೆ ಹಳೆ ಬಸ್ ಪಾಸ್ ನಲ್ಲೇ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಫೆ. 1ರಿಂದ ಈ ಕ್ಲಾಸ್‌ಗಳು ಪೂರ್ತಿ ದಿನ; ಸುರೇಶ್ ಕುಮಾರ್
ಪ್ರಸ್ತುತ ಸಾಲಿನಲ್ಲಿ ಶಾಲೆ ಮತ್ತು ಕಾಲೇಜಿಗೆ ಹಣ ಪಾವತಿಸಿದ ರಸೀದಿ ಜೊತೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕೃತ ಪ್ರಕಟಣೆ ಹೊರಡಿಸಿದೆ.