ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶ ಆರಂಭ: BPL ಕಾರ್ಡುದಾರರಿಗೆ ಶುಲ್ಕದಲ್ಲಿ ವಿನಾಯಿತಿ

By Suvarna News  |  First Published Oct 12, 2021, 8:54 PM IST

* ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವೇಶಾತಿ ಆರಂಭ
* 2021-22ರ ಜುಲೈ (ನವೆಂಬರ್) ಆವೃತ್ತಿಯ ಪ್ರವೇಶಾತಿಗೆ ಪ್ರಕಟಣೆ 
* ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ವಿನಾಯಿತಿ


ಬೆಂಗಳೂರು, (ಅ.12): ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (Karnataka State Open University ) 2021-22ನೇ ಶೈಕ್ಷಣಿಕ ಸಾಲಿನ ಜುಲೈ (ನವೆಂಬರ್) ಆವೃತ್ತಿ ಪ್ರವೇಶಾತಿ ಆರಂಭವಾಗಿದೆ. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರಿನ 2021-22ರ ಜುಲೈ (ನವೆಂಬರ್) ಆವೃತ್ತಿಯ ಪ್ರವೇಶಾತಿಗೆ 9Admission) ಪ್ರಕಟಣೆ ಹೊರಡಿಸಿದೆ. 

Tap to resize

Latest Videos

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀನಿವಾಸ್​ ಪೂಜಾರಿ

ಬಿಎ / ಬಿ.ಕಾಂ / ಬಿ.ಬಿ.ಎ / ಬಿ.ಎಸ್ಸಿ/ ಬಿ.ಸಿ.ಎ/ ಎಂಎ/ಎಂ.ಕಾಂ/ಎಂ.ಎಸ್ಸಿ/ಬಿ.ಲಿಬ್.ಐ.ಎಸ್ಸಿ/ ಎಂ.ಲಿಬ್.ಐ.ಎಸ್ಸಿ / ಡಿಪ್ಲೊಮ / ಪಿಜಿ ಡಿಪ್ಲೊಮ / ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ 18/11/2021ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ  ಮತ್ತು ಎಕ್ಸ್ ಸರ್ವಿಸ್ ಮನ್ ಹಾಗೂ ಡಿಫೆನ್ಸ್ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 15ರಷ್ಟು ಹಾಗೂ  ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ಪ್ರವೇಶ ಪ್ರಕ್ರಿಯೆ ಶುಲ್ಕವನ್ನು ಆನ್‌ಲೈನ್‌ ಮುಖಾಂತರ ಮಾತ್ರ ಪಾವತಿಸಬಹುದಾಗಿದೆ. ಪ್ರವೇಶಾತಿಯ ನಂತರ ಐಡಿ ಕಾರ್ಡ್‌ ಮತ್ತು ಶೈಕ್ಷಣಿಕ ಕೋರ್ಸ್‌ ಸಿದ್ಧಪಾಠಗಳನ್ನು ತಾವು ಆಯ್ಕೆ ಮಾಡಿಕೊಂಡಿರುವ ಪ್ರಾದೇಶಿಕ ಕೇಂದ್ರದಲ್ಲಿಯೇ ಪಡೆಯಬಹುದಾಗಿದೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿದ್ದು,  ಕೆಎಸ್‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ.

ವಿವಿಯು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಂಪೂರ್ಣ ವಿವರಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ. 

ವಿವಿಧ ಶೈಕ್ಷಣಿಕ ಕೋರ್ಸ್‌ಗಳು - 
* ಸ್ನಾತಕ ಪದವಿ - ಬಿ.ಎ,- ಬಿ.ಕಾಂ,- ಬಿ.ಬಿ.ಎ (Marketing Management),- ಬಿ.ಸಿ.ಎ,- ಬಿ.ಲಿಬ್.ಐ ಎಸ್ಸಿ., ಬಿ.ಎಸ್ಸಿ (General, Home Science, IT)
 
* ಸ್ನಾತಕೋತ್ತರ ಪದವಿ MA ವಿಷಯಗಳು - ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತ, ತೆಲುಗು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಮಾಜಶಾಸ್ತ್ರ, ಶಿಕ್ಷಣ ಶಾಸ್ತ್ರ., ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ. 

*  ಎಂ.ಕಾಂ, (Dual Specialization - 1.Accounting and Finance/HRM., 2. Marketing Management and HRM/ Finance)

* ಎಂ.ಬಿ.ಎ ( AICTE Approved) (Specialization - •Finance • HRM • Marketing Management • Operations • Tourism • Corporate Law • Information Technology)

* M.Sc ಕೋರ್ಸ್‌ಗಳು - ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫುಡ್ ಅಂಡ್ ನ್ಯೂಟ್ರಿಷನ್ ಸೈನ್ಸ್.

* ಪಿ.ಜಿ ಡಿಪ್ಲೊಮಾ (Graduate Based)
ಕಮ್ಯೂನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಇಂಗ್ಲಿಷ್, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ವ್ಯವಹಾರಿಕ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣಾಶಾಸ್ತ್ರ, ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್‌ , ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್. 

* ಡಿಪ್ಲೊಮಾ- (10+2 Based)
ಡಿಪ್ಲೊಮಾ -ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್. 

* ಸರ್ಟಿಫಿಕೇಟ್ -
ಕನ್ನಡ, ಪಂಚಾಯತ್ ರಾಜ್, ಮಾಹಿತಿ ಸಂವಹನ ತಂತ್ರಜ್ಞಾನ, ನ್ಯೂಟ್ರಿಷನ್ ಅಂಡ್ ಫುಡ್.

* 200ರೂ ದಂಡ ಶುಲ್ಕದೊಂದಿಗೆ ಕೊನೆ ದಿನಾಂಕ : 30/11/2021 
* 400ರೂ ದಂಡ ಶುಲ್ಕದೊಂದಿಗೆ ಕೊನೆ ದಿನಾಂಕ: 15/12/2021 

ಅರ್ಜಿ ಸಲ್ಲಿಕೆ ಹೇಗೆ? 
ಮೇಲೆ ತಿಳಿಸಿದ ಯಾವುದೇ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಆನ್‌ಲೈನ್‌ನಲ್ಲಿ ನೇರವಾಗಿ ಪಡೆದುಕೊಳ್ಳಬಹುದು. ಅಥವಾ KSOU ಕೇಂದ್ರ ಕಚೇರಿ ಮೈಸೂರು, ಅಥವಾ ಹತ್ತಿರದ ಪ್ರಾದೇಶಿಕ ಕೇಂದ್ರಗಳಿಗೆ ಭೇಟಿ ನೀಡಿ ಪಡೆದುಕೋಳ್ಳಬಹುದು. 
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕರಾಮುವಿ ಆನ್‌ಲೈನ್‌ ಪೋರ್ಟಲ್ ಡೈರೆಕ್ಟ್‌ ಲಿಂಕ್‌ ಈ ಕೆಳಗಿನಂತಿದೆ. 
KSOU Online Admission Portal http://ksouportal.com/views/StudentHome.aspx or www.ksoumysuru.ac.in 

ಮಾಹಿತಿಗಾಗಿ:- ಡಾ. ಲೋಕೇಶ ಆರ್ , ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಮಹಿಳಾ ಪ್ರಾದೇಶಿಕ ಕೇಂದ್ರ, 13ನೇ ಅಡ್ಡ ರಸ್ತೆ,  4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು. ☎080-23448811. 📱9844506629 
E Mail ID- rdwrcksou@gmail.com 
Time - 10:00 am to 5:30 pm. 

ಪ್ರಾದೇಶಿಕ ಕೇಂದ್ರಗಳ ವಿಳಾಸ,👇
https://www.ksoumysuru.ac.in/documents/KSOU%20Regional%20Centres%202019-20%20English.pdf

click me!