ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; ಬಾಲಕಿಯರದ್ದೇ ಮೇಲುಗೈ!

By Suvarna NewsFirst Published Oct 9, 2020, 6:55 PM IST
Highlights

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. 2.12 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದು, 41.28% ಶೇಕಡಾವಾರು ಫಲಿತಾಂಶ ಬಂದಿದೆ.

ಬೆಂಗಳೂರು(ಅ.09): ಕೊರೋನಾ ವೈರಸ್ ಕಾರಣ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಲವು ಅಡೆ ತಡೆ ಎದುರಿಸಿದ್ದರು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲಾಗಿತ್ತು. ಇದೀಗ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಕಾಲೇಜು ಹಾಗೂ ಶಿಕ್ಷಣ ಇಲಾಖೆಯ ಅಧೀಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.

ಕೊರೋನಾ ನಡುವೆ ಶಾಲಾ ಕಾಲೇಜು ಆರಂಭ: ಉಲ್ಟಾ ಹೊಡೆದ ಮಕ್ಕಳ ಹಕ್ಕು ಆಯೋಗ!.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ 2,12,678 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 87, 784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 41.28% ಶೇಕಡಾವಾರು ಫಲಿತಾಂಶ ಬಂದಿದೆ.

1,29,989 ಬಾಲಕರು ಪೂರಕ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 47,970 ಬಾಲಕರು ಉತ್ತೀರ್ಣರಾಗಿದ್ದಾರೆ. ಬಾಲಕರ ಶೇಕಡಾವಾರು ಫಲಿತಾಂಶ 38.30%. ಇನ್ನು 82,689 ಬಾಲಕಿಯರು ಪೂರಕ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 37,994 ಬಾಲಕಿಯರು ಪಾಸ್ ಆಗಿದ್ದಾರೆ. ಬಾಲಕಿಯರ ಶೇಕಡಾವಾರು ಫಲಿತಾಂಶ 45.95%.

ಶಾಲೆ ಆರಂಭ ಬೇಡ, ಎಲ್ಲರನ್ನು ಪಾಸ್ ಮಾಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ವಿಭಾಗದ ಫಲಿತಾಂಶ ವಿವರ
ಕಲಾ ವಿಭಾಗದಲ್ಲಿ ಶೇ.45.14%
ವಾಣಿಜ್ಯ ವಿಭಾಗ 39.02%
ವಿಜ್ಞಾನ ವಿಭಾಗ 37.45%

 

ಮಾಧ್ಯಮವಾರು ಫಲಿತಾಂಶ ವಿವರ
ಕನ್ನಡ 45.41%
ಇಂಗ್ಲೀಷ್ 35,81%

ಪೂರಕ ಪರೀಕ್ಷೆಯ ಉತ್ತರ ಪತ್ರಿಕೆ ಮರು ಮೌಲ್ಯ ಮಾಪನ, ಸ್ಕಾನಿಂಗ್ ಮತ್ತು ಮರು ಏಣಿಕೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 10 ರಿಂದ  16ರ ವರೆಗೆ ಉತ್ತರ ಪ್ರತಿ ಸ್ಕಾನಿಂಗ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

click me!