SSLC ಪರೀಕ್ಷೆ-2 ದಿನಾಂಕ ಘೋಷಣೆ ಇಲ್ಲಿದೆ ಡೀಟೆಲ್ಸ್, ಒಟ್ಟು 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ!

Published : May 02, 2025, 04:10 PM ISTUpdated : May 02, 2025, 04:16 PM IST
SSLC ಪರೀಕ್ಷೆ-2 ದಿನಾಂಕ ಘೋಷಣೆ ಇಲ್ಲಿದೆ ಡೀಟೆಲ್ಸ್, ಒಟ್ಟು 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ!

ಸಾರಾಂಶ

2024-25ನೇ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಶೇ.66.14 ಉತ್ತೀರ್ಣತೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಮೇ 26 ರಿಂದ ಜೂನ್ 2ರ ವರೆಗೆ ಪರೀಕ್ಷೆ-2 ಮತ್ತು ಜೂನ್ 23 ರಿಂದ 30ರ ವರೆಗೆ ಪರೀಕ್ಷೆ-3 ನಡೆಯಲಿದೆ. ಅನುತ್ತೀರ್ಣರಿಗೆ ಪೂರಕ ಪರೀಕ್ಷೆ ಮತ್ತು ಮರುಮೌಲ್ಯಮಾಪನದ ಅವಕಾಶವಿದೆ. ಫಲಿತಾಂಶ karresults.nic.in ನಲ್ಲಿ ಲಭ್ಯ.

ಕಳೆದ ಮಾರ್ಚ್‌/ಏಪ್ರಿಲ್‌ನಲ್ಲಿ ನಡೆದಿದ್ದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ರಾಜ್ಯದಲ್ಲಿ 66.14% ಫಲಿತಾಂಶ ಬಂದಿದೆ. ಅನುತ್ತೀಣರಾದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವಿದೆ. SSLC ಪರೀಕ್ಷೆ 2 ದಿನಾಂಕ ಘೋಷಣೆಯಾಗಿದೆ. ಮೇ 26 ರಿಂದ ಜೂನ್ 2 ವೆರೆಗೆ ಪರೀಕ್ಷೆ - 2  ನಡೆಯಲಿದ್ದು, ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ. ಇದರ ಜೊತೆಗೆ ಜೂನ್ 23 ರಿಂದ ಜೂನ್ 30ರ ವರೆಗೆ ಪರೀಕ್ಷೆ - 3 ಕೂಡ ನಡೆಯಲಿದೆ. ಪಾಸಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ (Supplementary Exam) ಅಥವಾ ಮರುಮೌಲ್ಯಮಾಪನ (Revaluation) ಅವಕಾಶಗಳು ಲಭ್ಯವಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. https://karresults.nic.in ನಲ್ಲಿ ಫಲಿತಾಂಶ ಲಭ್ಯವಿದೆ. 

ಈ ಬಾರಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ (91.12%) , ಉಡುಪಿ ದ್ವಿತೀಯ (89.96%)  ಮತ್ತು ಉತ್ತರ ಕನ್ನಡ (83.19%) ತೃತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಕರಾವಳಿ ಜಿಲ್ಲೆಗಳು ಕಿಂಗ್‌ ಎನಿಸಿಕೊಂಡಿದೆ.  ಕಲಬುರಗಿಗೆ ಕೊನೆ ಸ್ಥಾನ (42.43 %) ಲಭಿಸಿದೆ. ಈ ಬಾರಿ 22 ಮಂದಿ 625 ಕ್ಕೆ 625 ಅಂಕ ಪಡೆದು   ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. 65 ಮಂದಿ ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದ ಸೆಕೆಂಡ್ ರ‍್ಯಾಂಕ್  ಪಡೆದಿದ್ದಾರೆ. 623 ಅಂಕಗಳನ್ನು ಪಡೆದ ಮೂರನೇ ರ‍್ಯಾಂಕ್ ವಿದ್ಯಾರ್ಥಿಗಳು  ಸಂಖ್ಯೆ 108. 622 ಅಂಕಗಳನ್ನು ಪಡೆದು  ನಾಲ್ಕನೇ ಸ್ಥಾನ ಪಡೆದ  ವಿದ್ಯಾರ್ಥಿಗಳ ಸಂಖ್ಯೆ 189 ಮತ್ತು 289 ವಿದ್ಯಾರ್ಥಿಗಳು 621 ಅಂಕಗಳನ್ನು ಪಡೆದು ಐದನೇ ಸ್ಥಾನ ಪಡೆದಿದ್ದಾರೆ.

ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲು ಗೈ ಸಾಧಿಸಿದ್ದು, ಶೇಕಾಡ 74 ವಿದ್ಯಾರ್ಥಿನಿಯರು ಮತ್ತು ಶೇಕಾಡ 58.07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಅನುದಾನ ರಹಿತ ಶಾಲೆ - 108 , ಅನುದಾನಿತ ಶಾಲೆ - 30 ಸರ್ಕಾರಿ ಶಾಲೆ - 6 ಹೀಗೆ ಒಟ್ಟು 144 ಶಾಲೆಗಳಲ್ಲಿ ಶೇಕಾಡ 0% ಫಲಿತಾಂಶ ಬಂದಿದೆ. ಅನುದಾನ ರಹಿತ ಶಾಲೆ - 530, ಸರ್ಕಾರಿ ಶಾಲೆ - 329, ಅನುದಾನಿತ ಶಾಲೆ - 53 ಹೀಗೆ ಒಟ್ಟು 921 ಶಾಲೆಗಳಲ್ಲಿ ಶೇಕಾಡ 100 ರಷ್ಟು ಫಲಿತಾಂಶ ಬಂದಿದೆ.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? 
1 ದಕ್ಷಿಣ ಕನ್ನಡ -91.12%
2 ಉಡುಪಿ-89.96%
3 ಉತ್ತರ ಕನ್ನಡ- 83.19%
4 ಶಿವಮೊಗ್ಗ- 82.29%
5 ಕೊಡಗು - 82.21%
6 ಹಾಸನ - 82.12%
7 ಶಿರಸಿ- 80.47%
8 ಚಿಕ್ಕಮಗಳೂರು - 77.9%
9 ಬೆಂಗಳೂರು ಗ್ರಾಮಾಂತರ-7 4.02%
10 ಬೆಂಗಳೂರು ದಕ್ಷಿಣ - 72.3%
11 ಬೆಂಗಳೂರು ಉತ್ತರ - 72.27%
12 ಮಂಡ್ಯ- 69.27%
13 ಹಾವೇರಿ - 69.03%
14 ಕೋಲಾರ - 68.47%
15 ಮೈಸೂರು - 68.39%
16 ಬಾಗಲಕೋಟೆ - 68.29%
17 ಗದಗ -67.72%
18 ಧಾರವಾಡ - 67.62%
19 ವಿಜಯನಗರ - 67.62%
20 ತುಮಕೂರು - 67.03%
21 ದಾವಣಗೆರೆ - 66.09%
22 ಚಿಕ್ಕಬಳ್ಳಾಪುರ - 63.64%
23 ಚಿತ್ರದುರ್ಗ- 63.21%
24 ರಾಮನಗರ - 63.12%
25 ಬೆಳಗಾವಿ - 62.16%
26 ಚಿಕ್ಕೋಡಿ - 62.12%
27 ಚಾಮರಾಜನಗರ -61.45%
28 ಮಧುಗಿರಿ- 60.65%
29 ಬಳ್ಳಾರಿ -60.26%
30 ಕೊಪ್ಪಳ -57.32%
31 ಬಿದರ್ - 53.25%
32 ರಾಯಚೂರು-52.05%
33 ಯಾದಗಿರಿ - 51.6%
34 ವಿಜಯಪುರ -49.58%
35 ಕಲಬುರಗಿ- 42.43%

 

PREV
Read more Articles on
click me!

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!