Karnataka SSLC Result 2023: ನಾಳೆ ಬೆಳಗ್ಗೆ 10 ನೇ ತರಗತಿ ಫಲಿತಾಂಶ ಪ್ರಕಟ

Published : May 07, 2023, 03:19 PM ISTUpdated : May 07, 2023, 03:30 PM IST
Karnataka SSLC Result 2023: ನಾಳೆ ಬೆಳಗ್ಗೆ 10 ನೇ ತರಗತಿ ಫಲಿತಾಂಶ ಪ್ರಕಟ

ಸಾರಾಂಶ

ಕರ್ನಾಟಕ SSLC ಫಲಿತಾಂಶ 2023 ಮೇ 8 ರಂದು ಅಂದರೆ ನಾಳೆ ಪ್ರಕಟಗೊಳ್ಳಲಿದೆ. ನಾಳೆ 10 ಗಂಟೆಗೆ SSLC ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು (ಮೇ.7): ಕರ್ನಾಟಕ SSLC ಫಲಿತಾಂಶ 2023 ಮೇ 8 ರಂದು ಅಂದರೆ ನಾಳೆ ಪ್ರಕಟಗೊಳ್ಳಲಿದೆ. ನಾಳೆ 10 ಗಂಟೆಗೆ SSLC ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ನಾಳೆ 11 ಗಂಟೆಯ ನಂತರ ಫಲಿತಾಂಶ ಜಾಲಾತಾಣದಲ್ಲಿ ಲಭ್ಯ www.karresults.nic.in ಅಥವಾ  ಲಭ್ಯವಾಗಲಿದೆ. ಕರ್ನಾಟಕ SSLC ಬೋರ್ಡ್ ಪರೀಕ್ಷೆಯಲ್ಲಿ ಈ ಬಾರಿ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

ಪರೀಕ್ಷಾ ಫಲಿತಾಂಶ ನೋಡಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾಹಿತಿ ಇಲ್ಲಿದೆ.
ಅಧಿಕೃತ ವೆಬ್‌ಸೈಟ್  www.karresults.nic.in ಗೆ ಭೇಟಿ 
ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಒತ್ತಿರಿ
ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ
ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ

10 ನೇ ತರಗತಿ ಪರೀಕ್ಷೆಯಲ್ಲಿ  ವಿದ್ಯಾರ್ಥಿಗಳು ಒಟ್ಟು 35 ಪ್ರತಿಶತ ಅಂಕಗಳನ್ನು ಗಳಿಸಬೇಕು. ಅನುತ್ತೀರ್ಣರಾದರೆ ಭಯಬೇಡ ವಿದ್ಯಾರ್ಥಿಗಳು  ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿದೆ. ಕಳೆದ ಬಾರಿ ಅಂದರೆ 2022 ರಲ್ಲಿ, ಒಟ್ಟಾರೆ ಉತ್ತೀರ್ಣ ಶೇಕಡಾ 85.63 ರಷ್ಟು ದಾಖಲಾಗಿತ್ತು. ಇದರಲ್ಲಿ 145 ವಿದ್ಯಾರ್ಥಿಗಳು ಶೇ 100 ಅಂಕ ಗಳಿಸಿದ್ದರು. ಈ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 28ನೇ ಮಾರ್ಚ್‌ನಿಂದ 11ನೇ ಏಪ್ರಿಲ್ 2023 ರವರೆಗೆ ನಡೆದಿತ್ತು. ಏಪ್ರಿಲ್ 17 ರಂದು  ಕೀ ಉತ್ತರ ಬಿಡುಗಡೆಯಾಗಿತ್ತು. 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ