ಕೂಲಿ ಮಾಡಿಕೊಂಡೇ SSLC ಪರೀಕ್ಷೆಯಲ್ಲಿ ಟಾಪರ್ ಹಾವೇರಿಯ ಪ್ರವೀಣ್

By Suvarna News  |  First Published May 19, 2022, 5:52 PM IST

ಹಾವೇರಿ ಜಿಲ್ಲೆ ಸವಣೂರು ತಾಲೂಕು ಹಳೆ ಮನ್ನಂಗಿ ಗ್ರಾಮದ ವಿದ್ಯಾರ್ಥಿ ಪ್ರವೀಣ್ ಬಸನಗೌಡ ನೀರಲಗಿ ಈ ಅದ್ವಿತಿಯ ಸಾಧನೆ ಮಾಡಿದ ವಿದ್ಯಾರ್ಥಿ.


ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಮೇ.19): ಸಾಧನೆಗೆ ಬಡತನ ಅಡ್ಡಿ ಬರಲಿಲ್ಲ. ಕೂಲಿ ನಾಲಿ ಮಾಡಿ ಮಕ್ಕಳು ಕಷ್ಟ ಪಟ್ಟು ಓದಿ ರ್ಯಾಂಕ್ ಬಂದಾಗ ಹೆತ್ತವರಿಗೆ ಆಗೋ ಆನಂದ ವರ್ಣಿಸೋಕೆ ಆಗಲ್ಲ ಬಿಡಿ. ಕೂಲಿ  ಮಾಡಿಕೊಂಡು ದುಡಿಯುತ್ತಲೇ ಇಲ್ಲೊಬ್ಬ ಹುಡುಗ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಹಳೆ ಮನ್ನಂಗಿ ಗ್ರಾಮದ ವಿದ್ಯಾರ್ಥಿ ಪ್ರವೀಣ್ ಬಸನಗೌಡ ನೀರಲಗಿ ಈ ಅದ್ವಿತಿಯ ಸಾಧನೆ ಮಾಡಿದ ವಿದ್ಯಾರ್ಥಿ. 625 ಕ್ಕೆ 625 ಮಾರ್ಕ್ಸ್ ತೆಗೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

Tap to resize

Latest Videos

undefined

ಚಿಕ್ಕ ಗ್ರಾಮದ ಬಡ ಕುಟುಂಬದ  ಸರ್ಕಾರಿ ಶಾಲೆಯ ಹುಡುಗ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಇಡೀ ಜಿಲ್ಲೆಗೇ ಹೆಮ್ಮೆ ಎನಿಸಿದೆ. ಕಡು ಬಡತನದಲ್ಲಿ ಓದಿ ಸೈ ಎನಿಸಿಕೊಂಡ ಈ ಹುಡುಗನಿಗೆ ಡಾಕ್ಟರ್ ಆಗೋ ಆಸೆ. ಮುಂದಿನ ವಿಧ್ಯಾಭ್ಯಾಸಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಆಶೀರ್ವಾದ ಕೇಳಿದ್ದಾನೆ ಈ ವಿದ್ಯಾರ್ಥಿ. ಹಳೆ ಮನ್ನಂಗಿ ಗ್ರಾಮದ ಪ್ರವೀಣ್ ಕುಟುಂಬ ಬಡ ಕುಟುಂಬ. ತಂದೆ ಬಸನಗೌಡ ಹಾಗೂ ಚೈತ್ರಾ ದಂಪತಿ ಪುತ್ರ ಪ್ರವೀಣ್  ಕಷ್ಟ ನೋಡಿ, ಅನುಭವಿಸಿಯೇ  ಬೆಳೆದ ಹುಡುಗ. ಈ ಬಾರಿ ಪೋಷಕರು ಮಗ ಚೆನ್ನಾಗಿ ಓದಲಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಅಂತ  ಬೆನ್ನೆಲುಬಾಗಿ ನಿಂತರು. 

ಮೀನು ಹೆಕ್ಕುವ ಹುಡುಗನಿಗೆ DCಯಾಗೋ ಆಸೆ, ಗಾರೆ ಕೆಲಸದವನ ಮಗಳಿಗೆ ವೈದ್ಯೆಯಾಗೋ ಕನಸು

ತಂದೆ- ತಾಯಿ ಆಸೆಯಂತೆ ಪ್ರವೀಣ್ ಇಡೀ ರಾಜ್ಯಕ್ಕೆ ಮೊದಲ  ರ್ಯಾಂಕ್  ಪಡೆದಿದ್ದಾನೆ. ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದ ನೂರಾರು ವಿದ್ಯಾರ್ಥಿಗಳು ಇರಬಹುದು. ಆದರೆ ಬಡತನದಲ್ಲಿ ಅರಳಿರೋ ಪ್ರತಿಭೆ ಈ ಪ್ರವೀಣ್. ಇಂದು ಹಳೆ ಮನ್ನಂಗಿ ಪ್ರೌಢ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಶಿಕ್ಷಕರೆಲ್ಲಾ ಸೇರಿ ಪ್ರವೀಣ್ ಗೆ ಅಭಿನಂದನೆ ಸಲ್ಲಿಸಿದರು. ತಂದೆ - ತಾಯಿ ಮಗನ ಸಾಧನೆ ನೋಡಿ ಆನಂದ ಬಾಷ್ಪ ಸುರಿಸಿದರು. 

ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ: 2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ  ಫಲಿತಾಂಶ (karnataka sslc result 2022) ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ.  ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ವಿಶೇಷವೆಂದರೆ ಈ ಬಾರಿ 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

SSLC Result 2022 Declared ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

 

SSLC ಫಲಿತಾಂಶ ಪ್ರಕಟ.

ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.

ಉತ್ತೀರ್ಣ ಪ್ರಮಾಣ:
ಬಾಲಕಿಯರು- ಶೇ. 90.29
ಬಾಲಕರು- ಶೇ. 81.30.

8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
7,30,881 ವಿದ್ಯಾರ್ಥಿಗಳು ಉತ್ತೀರ್ಣ.

ಪೂರಕ ಪರೀಕ್ಷೆ- ಜೂನ್ 27, 2022.

— B.C Nagesh (@BCNagesh_bjp)

ಇದರ ನಡುವೆಯೇ ಅನುತ್ತೀರ್ಣರಾದವರಿಗೆ, ಮೊದಲ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದವರರಿಗೆ  ಜೂ. 27 ರಿಂದ ಜುಲೈ 4ರ ತನಕ ಪೂರಕ ಪರೀಕ್ಷೆ  ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಮಾಹಿತಿ ನೀಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪೂರಕ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಮೇ.20 ರಿಂದ ಮೇ 30ರವರೆಗೆ ಸಮಯಾವಕಾಶ ಇರಲಿದೆ. ನಂತರ ಪರೀಕ್ಷೆ ನಡೆಯಲಿದೆ.

click me!