* ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
* ಓರ್ವ ವಿದ್ಯಾರ್ಥಿ ಬಿಟ್ಟು ಎಲ್ಲರೂ ಪಾಸ್
* ಯಾವ ಜಿಲ್ಲೆ ಎಷ್ಟನೇ ಸ್ಥಾನ, ಗ್ರೇಡ್ ವಿವರ ಇಲ್ಲಿದೆ
ಬೆಂಗಳೂರು, (ಆ.09): 2020-21ನೇ ಸಾಲಿನ SSLC ಪರೀಕ್ಷೆ ಫಲಿತಾಂಶವು ಇಂದು (ಆ.09)ಪ್ರಕಟವಾಗಿದ್ದು, ಓರ್ವ ವಿದ್ಯಾರ್ಥಿ ಹೊರತುಪಡಿಸಿ ಇನ್ನುಳಿದಂತೆ ಎಲ್ಲ ವಿದ್ಯಾರ್ಥಿಗಳೂ ಪಾಸ್ ಆಗಿದ್ದಾರೆ.
undefined
ಕಳೆದ ಜುಲೈ 29 ಮತ್ತು 31ರಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8.71 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ. 99.9 ಮಕ್ಕಳು ಪಾಸ್ ಆಗಿದ್ದಾರೆ. ಕೊರೋನಾನಾ ಹಿನ್ನೆಲೆ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವುದಾಗಿ ನಿರ್ಧರಿಸಿದ್ದೆವು. ಆದರೆ, ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿ ಬದಲಿ ಪರೀಕ್ಷೆ ಬರೆದು ಡಿಬಾರ್ ಆಗಿದ್ದ ಹಿನ್ನೆಲೆಯಲ್ಲಿ ಶೇ.100 ಫಲಿತಾಂಶ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದರು.
4,70,160 SSLC ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 4,01,280 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಇನ್ನು ಜಿಲ್ಲಾವಾರು ಫಲಿತಾಂಶ ನೋಡುವುದಾದ್ರೆ ಬಹುತೇಕ ಸಮಾನವಾಗಿವೆ. ಆದರೂ ಸಂಖ್ಯೆಯಲ್ಲಿ ನೋಡುವುದಾದರೆ ಬೆಂಗಳೂರು ಉತ್ತರ ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರಕ್ಕೆ ತೃತೀಯ ಸ್ಥಾನ ಲಭಿಸಿದೆ. ಇನ್ನು ಬಳ್ಳಾರಿ ಕೊನೆ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮದುಗಿರಿ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಉಡುಪಿ, ಮಂಗಳೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ಗದಗ, ಧಾರವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಶಿರಸಿ, ಉತ್ತರ ಕನ್ನಡ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಬಳ್ಳಾರಿ ಕೊನೆಯ ಸ್ಥಾನವನ್ನು ಗಳಿಸಿದೆ.
ಗ್ರೇಡ್ ವಾರು ಪಾಸಾದ ವಿದ್ಯಾರ್ಥಿಗಳ ಸಂಖ್ಯೆ
A+ ಗ್ರೇಡ್‌ನಲ್ಲಿ 128931 ವಿದ್ಯಾರ್ಥಿಗಳು ಪಾಸ್ ಆಗಿದ್ರೆ, A ಗ್ರೇಡ್‌ನಲ್ಲಿ 250317 ಸ್ಟೂಡೆಂಟ್ಸ್ ಉತ್ತೀರ್ಣರಾಗಿದ್ದಾರೆ. B ಗ್ರೇಡ್‌ನಲ್ಲಿ 287684 ಹಾಗೂ ಸಿ ಗ್ರೇಡ್- 1 ಲಕ್ಷದ 13 ಸಾವಿರದ 610 ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ಇನ್ನು ಶೇ.9 ರಷ್ಟು ಮಕ್ಕಳಿಗೆ ಮಾತ್ರ ಗೇಸ್ ಅಂಕ ನೀಡಿ ಪಾಸ್ ಮಾಡಲಾಗಿದೆ.
Out of Out ಅಂಕ ಪಡೆದ ಮಕ್ಕಳ ಸಂಖ್ಯೆ:
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು 25 ಸಾವಿರದ 702.
* ದ್ವಿತೀಯ 100ಕ್ಕೆ 100 ಮಾರ್ಕ್ಸ್ ಅನ್ನು- 36ಸಾವಿರದ 628 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
* ಹಿಂದಿ 100ಕ್ಕೆ 100 ಅಂಕ ಪಡೆದವರು 36 776 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 6321 ವಿದ್ಯಾರ್ಥಿಗಳು ಪಡೆದಿದ್ದಾರೆ.
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 3649
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 9367