SSLC ರಿಸಲ್ಟ್ ಜತೆಗೆ ಶಾಲೆ ಪ್ರಾರಂಭದ ದಿನಾಂಕ ಘೋಷಿಸಿದ ಶಿಕ್ಷಣ ಸಚಿವ ನಾಗೇಶ್

By Suvarna News  |  First Published Aug 9, 2021, 4:29 PM IST

* ರಾಜ್ಯದಲ್ಲಿ ಪ್ರಾರಂಭಿಸುವ ಬಗ್ಗೆ ನೂತನ ಶಿಕ್ಷಣ ಸಚಿವ ಪ್ರತಿಕ್ರಿಯೆ
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ
* ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟಿಸವ ವೇಳೆ ಶಾಲೆ ಆರಂಭಿಸುವ ಬಗ್ಗೆ ಮಾಹಿತಿ


ಬೆಂಗಳೂರು, (ಆ.09): 2021-22ನೇ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿದೆ.  ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದರು.

"

Tap to resize

Latest Videos

ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಆತ ತನ್ನ ಬದಲು ಬೇರೆಯವರಿಂದ ಪರೀಕ್ಷೆ ಬರೆಸಿದ್ದ. ಹೀಗಾಗಿ ಆತನನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

SSLC ಫಲಿತಾಂಶ ಪ್ರಕಟ: ಚೆಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಇದೇ ವೇಳೆ ಶಾಲೆ ಪ್ರಾರಂಭದ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆಗಸ್ಟ್‌ 23ರಿಂದ ಶುರುವಾಗಲಿದೆ. ಇನ್ನು ಗಡಿ ಜಿಲ್ಲೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಲೆ ಓಪನ್ ಮಾಡಲಾಗುವುದು ಎಂದು ತಿಳಿಸಿದರು.

23 ರಿಂದ ಶಾಲೆ ಓಪನ್ ಹಿನ್ನೆಲೆಯಲ್ಲಿ ಆನ್ ಲೈನ್ , ಅಫ್ ಲೈನ್ ಎರಡರಲ್ಲೂ ತರಗತಗಳು ನಡೆಯಲಿದ್ದು, ಹಾಜರಾತಿ ಕಡ್ಡಾಯ ಇರಲಿದೆ ಎಂದರು.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಸ್ತುತ  9 ರಿಂದ 12ನೇ ತರಗತಿ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಇನ್ನು LKGಯಿಂದ 8ನೇ ಕ್ಲಾಸ್ ಪ್ರಾರಂಭಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು ಎಂದು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

click me!