ಎಲ್ಲರೂ ಪಾಸಾಗಿರುವ SSLC ಫಲಿತಾಂಶ ಇಂದು ಪ್ರಕಟ!

By Kannadaprabha News  |  First Published Aug 9, 2021, 7:10 AM IST

* ಕೊರೋನಾ ಮಧ್ಯೆ SSLC ಫಲಿತಾಂಶ

* ಎಲ್ಲರೂ ಪಾಸಾಗಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟ

* ಮಧ್ಯಾಹ್ನ 3.30ಕ್ಕೆ sslc.karnataka.gov.inನಲ್ಲಿ ಲಭ್ಯ


ಬೆಂಗಳೂರು(ಆ.09): ಕಳೆದ ಜುಲೈನಲ್ಲಿ ನಡೆದಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಪರೀಕ್ಷೆ ಬರೆದಿರುವ ಎಲ್ಲರನ್ನೂ ಉತ್ತೀರ್ಣಗೊಳಿಸುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದ್ದು, ಅಂಕ ಆಧಾರಿತ ಫಲಿತಾಂಶ ಪ್ರಕಟವಾಗಲಿದೆ.

SSLC ಫಲಿತಾಂಶ: ಮಾಜಿ ಸಚಿವ ಸುರೇಶ್ ಕುಮಾರ್ ಮಾತು ನಡೆಸಿಕೊಟ್ರು ಹಾಲಿ ಶಿಕ್ಷಣ ಮಿನಿಸ್ಟರ್

Tap to resize

Latest Videos

ಪರೀಕ್ಷೆ ಬರೆದಿರುವ 8.76 ಲಕ್ಷ ವಿದ್ಯಾರ್ಥಿಗಳ ಪೈಕಿ ಯಾರು ಎಷ್ಟುಪ್ರಮಾಣದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿರುತ್ತಾರೋ ಅದರ ಆಧಾರದ ಮೇಲೆ ಪ್ರತಿಯೊಬ್ಬರ ಅಂಕ ಆಧಾರಿತ ಫಲಿತಾಂಶ https://ssslc.karnataka.gov.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 3.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನೂತನ ಸಚಿವ ಬಿ.ಸಿ.ನಾಗೇಶ್‌ ಅವರು ಮಲ್ಲೇಶ್ವರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ.

click me!