ಬೆಂಗಳೂರು(ಡಿ.28): ರಾಜ್ಯದ 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ದಿನಾಂಕ ಇನ್ನೂ ಕೂಡ ಪ್ರಕಟಗೊಂಡಿಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board -KSEEB) ಈ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಂದೆಡೆ ಕೊರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಭೀತಿ ಎದುರಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಒಮಿಕ್ರಾನ್ ಕೇಸ್ ಗಳ ಸಂಖ್ಯೆ ಲಕ್ಷ ಗಡಿ ದಾಟಲಿದೆ ಎಂದು ತಜ್ಞರು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಇಷ್ಟಿದ್ರು ಶಿಕ್ಷಣ ಇಲಾಖೆ ಮಕ್ಕಳ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಣ ಇಲಾಖೆ ಗಮನ ಕೊಡಲಿ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
2021-22 ನೇ ಸಾಲಿನ SSLC ಪರೀಕ್ಷೆಯ ದಿನಾಂಕ ಪ್ರಕಟ ಮಾತ್ರವಲ್ಲ. SSLC ಅರ್ಧವಾರ್ಷಿಕ ಪರೀಕ್ಷೆ ಕೂಡ ಇಲಾಖೆ ನಡೆಸಿಲ್ಲ. ಇದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ CBSE ಹಾಗೂ ICSE ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದಿದೆ. ಆದ್ರೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಕೂಡ ನಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ.
ಕೊರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಒಮಿಕ್ರಾನ್ ಕೇಸ್ ಗಳ ಸಂಖ್ಯೆ ಲಕ್ಷ ಗಡಿ ದಾಟಲಿದೆ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಮೇಲೆ ಒಮಿಕ್ರಾನ್ ಕರಿನೆರಳು ಬೀರುತ್ತಾ ಅನ್ನೋ ಅನುಮಾನವಿದೆ.
PUC MIDTERM EXAMINATION : ತಪ್ಪು ಪ್ರಶ್ನೆ ಮೌಲ್ಯಮಾಪನವಿಲ್ಲ
ತಜ್ಞರು ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಕೂಡ ಶಿಕ್ಷಣ ಇಲಾಖೆ ಮಕ್ಕಳ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಿಲ್ಲ. ಪರೀಕ್ಷೆ ನಡೆಸಬೇಕಾದ್ರೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಪರೀಕ್ಷಾ ದಿನಾಂಕ ಪ್ರಕಟ ಮಾಡಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಲೂ ಕನಿಷ್ಟವೆಂದರೂ 3 ತಿಂಗಳು ಬೇಕು. ಆದರೆ ಅಂತಹ ಬೆಳವಣಿಗೆ ಇದುವರೆಗೂ ಕಂಡಿಲ್ಲ.
ಶಾಲೆಗಳ ಮಾನ್ಯತೆ ನವೀಕರಣ ಮಾಡುವ ವಿಚಾರದಲ್ಲಿ ಅಧಿಕಾರಿಗಳು ತುಂಬಾ ಮಗ್ನರಾಗಿದ್ದಾರೆ. ಅಧಿಕಾರಿಗಳಿಗೆ ಹಣ ಮಾಡಿಕೊಳ್ಳುವ ಚಿಂತೆ ಬಿಟ್ಟು ಮಕ್ಕಳ ಭವಿಷ್ಯದ ಚಿಂತೆ ಇಲ್ಲ ಎಂದು ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
ಕೂಡಲೇ ಶಿಕ್ಷಣ ಇಲಾಖೆ SSLC ಪರೀಕ್ಷೆ ಕುರಿತು ದಿನಾಂಕ ಪ್ರಕಟ ಮಾಡಬೇಕು. ಮಕ್ಕಳ ಭವಿಷ್ಯದ ಕಡೆ ಶಿಕ್ಷಣ ಇಲಾಖೆ ಗಮನಹರಿಸ ಬೇಕು ಎಂದು ಒತ್ತಾಯಿಸಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.
Karnataka Education : ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ
SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ: ರಾಜ್ಯದ 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಣೆ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಪ್ರಕಟಿಸಿದೆ. ಕ್ರಿಸ್ ಮಸ್ ರಜೆ ಹಾಗೂ ಹಲವು ಶಾಲಾ ವಿದ್ಯಾರ್ಥಿಗಳು ನೋಂದಣಿ ಮಾಡದ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆಗೆ ನೋಂದಣಿ ಮಾಡುವ ಅವಕಾಶವನ್ನು ಜ. 10, 2022ರವರೆಗೆ ಮುಂದೂಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ https://sslc.karnataka.gov.in/ ಭೇಟಿ ನೀಡಬಹುದು.