PUC Supplementary Exam 2022; ಆ.12ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

By Kannadaprabha News  |  First Published Jul 16, 2022, 8:12 AM IST

ಆ.12ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಯಲಿದ್ದು, ವಿವಿಧ ವಿಷಯಗಳ ಪರೀಕ್ಷೆಆ. 25ರವರೆಗೆ ನಡೆಯಲಿದೆ ಎಂದು ಸರಕಾರ ಮಾಹಿತಿ ಪ್ರಕಟಿಸಿದೆ.


ಬೆಂಗಳೂರು (ಜು.16): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಪ್ರಕಟಿಸಿದ್ದು, ಆಗಸ್ಟ್‌ 12ರಿಂದ 25ರವರೆಗೆ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಪ್ರಕಾರ ಆ.12ರಂದು ಕನ್ನಡ, ಅರೇಬಿಕ್‌, ಆ.13 ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, ಆ.16 ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌, ಆ.17 ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ, ಆ.18 ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ, ಆ.19 ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ, ಆ.20 ತರ್ಕ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ವ್ಯವಹಾರ ಅಧ್ಯಯನ, ಆ.22 ಇಂಗ್ಲಿಷ್‌, ಆ.23 ಅರ್ಥಶಾಸ್ತ್ರ, ಜೀವಶಾಸ್ತ್ರ, ಆ.24 ಇತಿಹಾಸ, ಸಂಖ್ಯಾಶಾಸ್ತ್ರ, ಆ.25 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ಶಾಸ್ತ್ರ ಪರೀಕ್ಷೆಗಳು ನಡಯಲಿವೆ.

ಬಹುತೇಕ ಎಲ್ಲ ಪರೀಕ್ಷೆಗಳೂ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಕೆಲ ವಿಷಯಗಳು ಮಾತ್ರ ಮಧ್ಯಾಹ್ನ 2.15ರಿಂದ ಸಂಜೆ 4.30ವರೆಗೆ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು hಠಿಠಿps://p್ಠಛಿ.ka್ಟ್ಞaಠಿaka.ಜಟv.ಜ್ಞಿ/ ವೆಬ್‌ಸೈಟ್‌ ವೀಕ್ಷಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

Tap to resize

Latest Videos

 

2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಆಗಸ್ಟ್ 12ರಿಂದ ಆಗಸ್ಟ್ 25ರ ವರೆಗೆ ಪರೀಕ್ಷೆ ನಡೆಯಲಿವೆ.‌ pic.twitter.com/RzkTl5CNgA

— B.C Nagesh (@BCNagesh_bjp)
click me!