UPSC CSE 2021 Prelims ಫಲಿತಾಂಶ ಪ್ರಕಟ : ರಿಸಲ್ಟ್ ಚೆಕ್‌ ಮಾಡುವುದು ಹೇಗೆ?

By Suvarna News  |  First Published Oct 30, 2021, 12:53 PM IST

*ಫಲಿತಾಂಶವನ್ನು ಚೆಕ್‌ ಮಾಡಲು ಇಲ್ಲಿದೆ ಸುಲಭ ವಿಧಾನ
*ಸಿವಿಲ್‌ ಸರ್ವಿಸಸ್‌ ಪೂರ್ವಭಾವಿ ಪರೀಕ್ಷೆ ರಿಸಲ್ಟ್‌ ಪ್ರಕಟ 
*ಪ್ರಿಲಿಮ್ಸನಲ್ಲಿ ಪಾಸಾದವರಿಗೆ ಜನವರಿ 2022ರಲ್ಲಿ ಮೇನ್ಸ್‌ ಪರೀಕ್ಷೆ


ನವದೆಹಲಿ:  ಕೇಂದ್ರ ಲೋಕ ಸೇವಾ ಆಯೋಗದ (Union Public Service Commission) ನಡೆಸಿದ ಸಿವಿಲ್ ಸರ್ವಿಸಸ್ ಪ್ರಿಲಿಮ್ಸ್ 2021 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪ್ರಿಲಿಮ್ಸ್ (Prelims) ಪರೀಕ್ಷೆಯನ್ನು ಅಕ್ಟೋಬರ್ 10 ರಂದು ನಡೆಸಲಾಗಿತ್ತು. ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಪರೀಕ್ಷೆಯ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು (Reslut) ಪರಿಶೀಲಿಸಬಹುದು.

ಬ್ಯಾಂಕ್ ಉದ್ಯೋಗ ಬಿಟ್ಟು UPSCಗೆ ತಯಾರಿ: ಎರಡನೇ ಪ್ರಯತ್ನದಲ್ಲೇ ಗೆದ್ದ ಅಭಿಷೇಕ್‌!

Tap to resize

Latest Videos

ಆಯೋಗದ ಪ್ರಿಲಿಮ್ಸ್ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗಿತ್ತು,  ಮುಂಜಾನೆ  GS I (General studies) ವಿಷಯ ಮತ್ತು ಮಧ್ಯಾಹ್ನ CSAT (Civil Services Aptitude Test) ವಿಷಯದ ಪರೀಕ್ಷೆಗಳನ್ನು ನಡೆಸಲಾಗಿತ್ತು. ತಜ್ಞರು ಮತ್ತು ಆಕಾಂಕ್ಷಿಗಳ ವಿಮರ್ಶೆಗಳ ಪ್ರಕಾರ, ಈ ವರ್ಷ ಪತ್ರಿಕೆಯು ಮಧ್ಯಮ ಕಷ್ಟಕರವಾಗಿತ್ತು. ಈ ಬಾರಿಯ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಕ್ರೀಡೆಗೆ (Sports) ಸಂಬಂಧಪಟ್ಟ ಪ್ರಶ್ನೆಗಳು ಬಂದಿದ್ದು ಎಲ್ಲರನ್ನು ಅಚ್ಚರಿಗೊಳಿಸಿತ್ತು. 

UPSC CSE 2021 ಪ್ರಿಲಿಮ್ಸ್ ಫಲಿತಾಂಶ:  ಪರಿಶೀಲಿಸುವುದು ಹೇಗೆ?

ಹಂತ 1: upscಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - upsc.gov.in

ಹಂತ 2: 'what’s new' ವಿಭಾಗದಲ್ಲಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3: ಪಿಡಿಎಫ್ ಫೈಲ್‌ನಲ್ಲಿ ನಿಮ್ಮ ರೋಲ್ ನಂಬರ್‌ಅನ್ನು (Roll Number) ಪರಿಶೀಲಿಸಿ

ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಜನವರಿ 2022 ರಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆಗೆ (Mains Exam) ಹಾಜರಾಗುತ್ತಾರೆ. ಪ್ರಿಲಿಮ್ಸ್ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ UPSC ಶೀಘ್ರದಲ್ಲೇ ವಿವರವಾದ ಅರ್ಜಿ ನಮೂನೆಯನ್ನು (DAF-1) ಬಿಡುಗಡೆ ಮಾಡುತ್ತದೆ. ಎಲ್ಲಾ ಅಭ್ಯರ್ಥಿಗಳು ಈ ಫಾರ್ಮ್ (Form) ಅನ್ನು ನಿಗದಿತ ದಿನಾಂಕದ ಮೊದಲು ಸಲ್ಲಿಸುವುದು ಕಡ್ಡಾಯವಾಗಿದೆ.

ಮೊದಲ ಪ್ರಯತ್ನದಲ್ಲೇ 22 ವರ್ಷದ ಆದರ್ಶ್ UPSC ಟಾಪರ್, ಕೋಚಿಂಗ್ ಇಲ್ಲದೆಯೇ ಸಾಧನೆ!

ಕೇಂದ್ರ ಲೋಕ ಸೇವಾ ಅಯೋಗವು ನಡೆಸುವ ಪ್ರಿಲಿಮ್ಸ್ (ಪೂರ್ವಭಾವಿ ಪರೀಕ್ಷೆಯು) ಕೇವಲ ಅರ್ಹತಾ ಹಂತದ ಪರೀಕ್ಷೆಯಾಗಿರುತ್ತದೆ ಮತ್ತು ಈ ಹಂತದಲ್ಲಿ ಗಳಿಸಿದ ಅಂಕಗಳನ್ನು ಅಂತಿಮ ಕಟ್-ಆಫ್‌ನಲ್ಲಿ (Cut-Off) ಸೇರಿಸಲಾಗುವುದಿಲ್ಲ. ಶಿಫಾರಸು ಆದ ಮತ್ತು ಶಿಫಾರಸು ಆಗದ ಅಭ್ಯರ್ಥಿಗಳು ಗಳಿಸಿದ ಪ್ರಿಲಿಮ್ಸ್ ಅಂಕಗಳು ಮತ್ತು ಪ್ರತಿ ಹಂತದ ಕಟ್-ಆಫ್ ಅನ್ನು ಅಂತಿಮ ಫಲಿತಾಂಶದ ಘೋಷಣೆಯ ನಂತರ ಬಿಡುಗಡೆ ಮಾಡಲಾಗುತ್ತದೆ.

ಅಪ್ಪನಿಗೆ ನಿರಾಸೆ ಮಾಡಲಿಲ್ಲ ಮಗಳು: IPS ಆಗುವ ಕನಸು ನನಸಾಗಿಸಿದ ರೈತನ ಮಗಳು!

ಸಿವಿಲ್ ಸರ್ವಿಸಸ್ ಪರಿಕ್ಷೆಯು ಒಟ್ಟು ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಪ್ರಿಲಿಮ್ಸ್‌ ಪರೀಕ್ಷೆಗಳ ನಡೆಸಲಾಗುತ್ತದೆ. ಪ್ರಿಲಿಮ್ಸ್‌ ಪರಿಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮೇನ್ಸ್‌ ಪರೀಕ್ಷೆಯನ್ನು ಬರೆಯುತ್ತಾರೆ.  ಈ ಹಂತದಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳು ಮುಂದಿನ ಹಂತವಾಗಿ ಸಂದರ್ಶನದಲ್ಲಿ (Interview) ಪಾಲ್ಗೊಳ್ಳಬೇಕು. ಪ್ರಿಲಿಮ್ಸ್‌ ಅಂಕಗಳನ್ನು ಅಂತಿಮ ಕಟ್-ಆಫ್‌ನಲ್ಲಿ ಸೇರಿಸಲಾಗುವುದಿಲ್ಲ. ಮೇನ್ಸ ಪರೀಕ್ಷೆಯ ಒಟ್ಟು 1750 ಅಂಕಗಳು ಮತ್ತು ಸಂದರ್ಶನದ ಒಟ್ಟು 275 ಸೇರಿಸಿ 2025 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಪರಿಕ್ಷೆಯಲ್ಲಿ ಪಾಸ್‌ ಆಗುವ ಅಭ್ಯರ್ಥಿಗಳು ಐಎಎಸ್‌ (IAS), ಐಪಿಎಸ್‌ (IPS), ಐಆರ್‌ಎಸ್ (IRS) ನಂತಹ ಲೋಕಸೇವಾ ಹುದ್ದೆಗಳಿಗೆ ನಿಯೋಜನೆಗೊಳ್ಳುತ್ತಾರೆ.

ಅತ್ತ ತಂದೆ ನಿಧನ, ಇತ್ತ UPSC ಸಂದರ್ಶನ: ಕನಸು ನನಸಾಗಿಸಿದ ದಿವ್ಯಾಂಶು!

ಪ್ರತಿ ವರ್ಷ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಕೊನೆ ಹಂತದವರೆಗೂ ಹೋಗಿ ಸಿವಿಲ್‌ ಸರ್ವಂಟ್‌ ಆಗಿ ಸೇವೆ ಮಾಡಲು ಕೇವಲ ಸಾವಿರಕ್ಕಿಂತ ಕಡಿಮೆ ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆಯತ್ತಾರೆ. ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಿವಿಲ್‌ ಸರ್ವಿಸಸ್‌ ಪರೀಕ್ಷೆಯೂ ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

click me!