ಸಿಇಟಿ ಬಿಕ್ಕಟ್ಟಿಗೆ ಪರಿಹಾರ, ಸೆ.22ಕ್ಕೆ ಅಂತಿಮ ತೀರ್ಮಾನ

By Suvarna NewsFirst Published Sep 20, 2022, 9:41 PM IST
Highlights

ಪುನರಾವರ್ತಿತರ ಪಿಯು ಅಂಕ ಪರಿಗಣನೆ ವಿಚಾರವಾಗಿ ಕಗ್ಗಂಟಾಗಿರುವ ಸಿಇಟಿ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಯೋಜನೆ ರೂಪಿಸಲು ಹೈಕೋರ್ಟ್ ನಿಂದ ಸರ್ಕಾರ 22ರವರೆಗೆ ಕಾಲಾವಕಾಶ ಪಡೆದುಕೊಂಡಿದೆ. ಇದರಿಂದಾಗಿ ವಿವಾದ ಸರ್ಕಾರದ ಅಂಗಳಕ್ಕೆ ಮರಳಿದೆ.

ಬೆಂಗಳೂರು (ಸೆ.20): ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ಸೂಕ್ತ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಹೈಕೋರ್ಟ್ ನಿಂದ ಸೆ.22ರವರೆಗೆ ಕಾಲಾವಕಾಶ ಪಡೆದುಕೊಂಡಿದೆ. ಹೊಸದಾಗಿ ಸಿಇಟಿ ರಾರ‍ಯಂಕಿಂಗ್‌ ಪಟ್ಟಿಪ್ರಕಟಿಸುವಂತೆ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, ಪುನರಾವರ್ತಿತ ವಿದ್ಯಾರ್ಥಿಗಳನ್ನು ದೃಷ್ಟಿಯಿಲ್ಲಿಟ್ಟುಕೊಂಡು ಪರಿಹಾರ ಯೋಜನೆಯೊಂದನ್ನು ರೂಪಿಸಲಾಗುವುದು. ಅದು ಪ್ರತಿವಾದಿ (ಪುನರಾವರ್ತಿತ) ವಿದ್ಯಾರ್ಥಿಗಳಿಗೆ ಒಪ್ಪಿಗೆಯಾದರೆ ಸಮಸ್ಯೆ ಇತ್ಯರ್ಥಪಡಿಸಬಹುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರು, ಸರ್ಕಾರದ ಯೋಜನೆ ಪರಿಶೀಲಿಸಲಾಗುವುದು. ನಮಗೆ ಒಪ್ಪಿತವಾಗದಿದ್ದರೆ ಮೇಲ್ಮನವಿ ಕುರಿತು ಮೆರಿಟ್‌ ಮೇಲೆ ವಾದ ಮಂಡಿಸಲಾಗುವುದು ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿ ಮೇಲ್ಮನವಿ ವಿಚಾರಣೆಯನ್ನು ಸೆ.22ಕ್ಕೆ ಮುಂದೂಡಿದ ನ್ಯಾಯಪೀಠ, ಪ್ರಸ್ತಕ ಸಾಲಿನಲ್ಲಿ ಸಿಇಟಿ ಬರೆದ ಮತ್ತು ಪುರಾವರ್ತಿತ (2020-21ನೇ ಸಾಲಿನ ದ್ವಿತೀಯು ಪಿಯು ವಿದ್ಯಾರ್ಥಿಗಳು) ವಿದ್ಯಾರ್ಥಿಗಳಿಗೆ ತೊಂದರೆಯಾಗದ ಮತ್ತು ಎಲ್ಲರಿಗೂ ನೆರವಾಗುವಂತಹ ಪರಿಹಾರ ಕ್ರಮಗಳನ್ನು ರೂಪಿಸಿಕೊಂಡು ಬನ್ನಿ ಎಂದು ಸರ್ಕಾರಕ್ಕೆ ಸಲಹೆ ನೀಡಿತು.

ಕಳೆದ ವರ್ಷದ ಪಿಯುಸಿ ಅಂಕಗಳನ್ನು ಈ ವರ್ಷದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೂ ಪರಿಗಣಿಸಿ ಹೊಸದಾಗಿ ರಾರ‍ಯಂಕ್‌ ಪಟ್ಟಿ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

CET Rank: ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರದ ಮೇಲ್ಮನವಿ 

ನೀಟ್‌ ಎಂಸಿಎಚ್‌ ಪರೀಕ್ಷೆ: ಆತೀಶ್‌ ಶೆಟ್ಟಿ ಪ್ರಥಮ
ಕುಂದಾಪುರ: ಅಖಿಲ ಭಾರತ ವೈದ್ಯಕೀಯ ವಿಶೇಷ ಅಧ್ಯಯನ (ಸೂಪರ್‌ ಸ್ಪೆಶಾಲಿಟಿ) ನೀಟ್‌ ಎಂ.ಸಿ.ಎಚ್‌. ಪ್ರವೇಶ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕುಂದಾಪುರದ ಆತೀಶ್‌ ಬಿ. ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ತಜ್ಞ ಡಾ. ಬಾಲಕೃಷ್ಣ ಶೆಟ್ಟಿಹಾಗೂ ಕಂದಾವರ ಸುನೀತಾ ಶೆಟ್ಟಿದಂಪತಿ ಪುತ್ರರಾಗಿರುವ ಅವರು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ 13ನೇ ಸ್ಥಾನ ಪಡೆದುಕೊಂಡಿದ್ದರು.

ಸಿಇಟಿ ಪ್ರಕರಣದಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡಲ್ಲ: ಸಿಎಂ ಬೊಮ್ಮಾಯಿ

ಬ್ರಹ್ಮಾವರದ ಲಿಟ್ಲ್ ರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿಯನ್ನು ಪಡೆದುಕೊಂಡಿದ್ದರು. ಬೆಂಗಳೂರಿನ ಬಿಎಂಸಿ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದ ಇವರು, ಆಗಸ್ವ್‌ನಲ್ಲಿ ನಡೆದ ನೀಟ್‌ ಪರೀಕ್ಷೆಯನ್ನು ಬರೆದಿದ್ದರು.

click me!