ವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ಡಾ.ಕೆ.ಸುಧಾಕರ್

By Suvarna News  |  First Published Mar 15, 2022, 7:41 PM IST

ವೈದ್ಯಕೀಯ ಶಿಕ್ಷಣ ಶುಲ್ಕ ಕಡಿತಗೊಳಿಸುವುದರ ಜೊತೆಗೆ ಯುದ್ಧ ಬಾಧಿತ ಉಕ್ರೇನ್‌ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.


ಬೆಂಗಳೂರು(ಮಾ.15): ವೈದ್ಯಕೀಯ ಶಿಕ್ಷಣ ಶುಲ್ಕ ಕಡಿತಗೊಳಿಸುವುದರ ಜೊತೆಗೆ ಯುದ್ಧ ಬಾಧಿತ ಉಕ್ರೇನ್‌ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ವಿಧಾನಪರಿಷತ್ ನಲ್ಲಿ ತಿಳಿಸಿದರು. 

ನವೀನ್ ಜ್ಞಾನಗೌಡರ ಮೃತದೇಹವನ್ನು ಉಕ್ರೇನ್‌ನಿಂದ ತುರ್ತಾಗಿ ಮರಳಿ ತರುವುದು ಮತ್ತು ಭಾರತಕ್ಕೆ ಹಿಂದಿರುಗಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅಗತ್ಯತೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವರು, ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

Latest Videos

undefined

ಪ್ರಧಾನಿ ನರೇಂದ್ರ ಮೋದಿ  ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗದೊಂದಿಗೆ ಚರ್ಚಿಸಿದ್ದಾರೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಿ ತಿಳಿಸಿದರು.

ESCI RECRUITMENT 2022: ರಾಜ್ಯ ನೌಕರರ ವಿಮಾ ನಿಗಮ ನೇಮಕಾತಿ

 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ನೆರವಾಗಿದೆ. ಉಕ್ರೇನ್ ನಲ್ಲಿರುವ ಇತರ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಕೂಡಾ ಭಾರತ ಸರ್ಕಾರದ ಸಹಾಯದಿಂದ ಬರುತ್ತಿರುವುದಾಗಿ ಡಾ. ಸುಧಾಕರ್ ಸದನದಲ್ಲಿ ಹೇಳಿದರು.

ನವೀನ್ ಅವರ ಮೃತದೇಹವನ್ನು ಆದಷ್ಟು ಬೇಗ ವಾಪಸ್ ತರಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸದಸ್ಯರು ಒತ್ತಾಯಿಸಿದರು.

CIIL Recruitment 2022: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ 

ಬೆಂಗಳೂರು ಕಛೇರಿಯಲ್ಲಿನ ಹುದ್ದೆಗೆ ದೈತ್ಯ ಗೂಗಲ್ ನೇಮಕಾತಿ: ದೈತ್ಯ ಗೂಗಲ್ ಸಂಸ್ಥೆ (google company ) ತನ್ನ ಬೆಂಗಳೂರು (Bengaluru) ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನೆಟ್ ‌ ವರ್ಕ್ ಎಂಜಿನಿಯರ್ (Network Engineer) ಹುದ್ದೆಗಳನ್ನು ಭರ್ತಿ ಮಾಡಲು ಗೂಗಲ್ ಅಧಿಸೂಚನೆ ಹೊರಡಿಸಿದ್ದು, ಎಂಜಿನಿಯರ್ ಪದವೀಧರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು https://www.google.com/about/careers/applications ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ದೈತ್ಯ ಗೂಗಲ್ ಸಂಸ್ಥೆಯ ಬೆಂಗಳೂರು ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಆಪರೇಟಿಂಗ್ ಎಂಟರ್‌ಪ್ರೈಸ್ ಕ್ಲಾಸ್ ರೂಟರ್‌ಗಳು ಮತ್ತು ಸ್ವಿಚ್‌ಗಳಲ್ಲಿ ಕೆಲಸ ಮಾಡುವ ಅನುಭವ ಇರುವ ಅಭ್ಯರ್ಥಿಗಳಿಗೆ ಗೂಗಲ್ ಕಂಪೆನಿ ಮೊದಲ ಪ್ರಾಶಸ್ತ್ಯ ನೀಡಲಿದೆ.

ಬ್ಯಾಕ್‌ಪ್ಲೇನ್, ASIC ಕಾರ್ಯನಿರ್ವಹಣೆ ಮತ್ತು ವಿತರಣಾ ಆರ್ಕಿಟೆಕ್ಚರ್ ಸೇರಿದಂತೆ ನೆಟ್‌ವರ್ಕ್ ಹಾರ್ಡ್‌ವೇರ್ (ರೂಟರ್‌ಗಳು, ಸ್ವಿಚ್‌ಗಳು) ಆರ್ಕಿಟೆಕ್ಚರ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಈಥರ್ನೆಟ್, ವೈ-ಫೈ, ಟಿಸಿಪಿ / ಐಪಿ, ಎಚ್‌ಟಿಟಿಪಿಯಂತಹ ನೆಟ್‌ವರ್ಕಿಂಗ್ ಮತ್ತು ಅಪ್ಲಿಕೇಶನ್ ಪ್ರೋಟೋಕಾಲ್‌ಗಳ ಬಗ್ಗೆ ಅನುಭವ ಹೊಂದಿರುವವರು ಕೂಡ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ದೈತ್ಯ ಗೂಗಲ್ ಸಂಸ್ಥೆಯ ಬೆಂಗಳೂರು ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಟಿಕ್ನಿಕಲ್ ಟೆಸ್ಟ್​, ಕಂಪ್ಯೂಟರ್ ಟೆಸ್ಟ್, ಸಂದರ್ಶನ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

click me!