ತರಗತಿಗಳು ಪ್ರಾರಂಭ: ವಿದ್ಯಾರ್ಥಿ, ಪೋಷಕರಿಗೆ ಕೆಲ ಅಂಶಗಳನ್ನ ತಿಳಿಸಿದ ಸಚಿವರು

Published : Dec 19, 2020, 04:58 PM ISTUpdated : Dec 19, 2020, 04:59 PM IST
ತರಗತಿಗಳು ಪ್ರಾರಂಭ: ವಿದ್ಯಾರ್ಥಿ, ಪೋಷಕರಿಗೆ ಕೆಲ ಅಂಶಗಳನ್ನ ತಿಳಿಸಿದ ಸಚಿವರು

ಸಾರಾಂಶ

ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆಯಂತೆ ಜನವರಿ1 ರಿಂದ ಎಸ್ ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿವೆ. ಇನ್ನು ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಒಂದಷ್ಟು ಪ್ರಮುಖ ಅಂಶಗಳನ್ನ ತಿಳಿಸಿದ್ದು, ಅವು ಈ ಕೆಳಗಿನಂತಿವೆ.

ಬೆಂಗಳೂರು, (ಡಿ.19): ಶಾಲಾರಂಭಕ್ಕೆ ನಿರ್ಧಾರ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಜ.1 ರಿಂದ 10 ಮತ್ತು 12ನೇ ತರಗತಿಯನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ.ಶಿಕ್ಷಣ ಸಹಿತವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ಇಂದು (ಶನಿವಾರ) ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

"

ಕರ್ನಾಟಕದಲ್ಲಿ ಕೊನೆಗೂ ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್​..!

ಕೊರೊನಾ ನಿರ್ವಾಹಣಾ ತಾಂತ್ರಿಕ ಸಲಹಾ ಸಮಿತಿಯಂತೆ 10 ಮತ್ತು 12 ಅನ್ನು ಜನವರಿಯಿಂದ ಆರಂಭಿಸಲು ಸೂಚಿಸಿದೆ. ಅದರಂತೆ ಶಾಲಾರಂಭ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. 

"

ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ತರಗತಿ ಪ್ರಾರಂಭ, ಹಾಜರಾತಿ ಸೇರಿಂತೆ ಕೆಲ ಮಹತ್ವದ ಮಾಹಿತಿಯನ್ನು ವಿವರಿಸಿದ್ದು, ಅದು ಈ ಕೆಳಗಿನಂತಿದೆ.

* ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ
* ಹಾಸ್ಟೆಲ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
* ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳನ್ನ ಮಾತ್ರ ಕುರಿಸಲಾಗುತ್ತೆ
* ಪ್ರಥಮ ಪಿಯುಸಿ ಬಗ್ಗೆ 15 ದಿನಗಳ ನಂತರ ತೀರ್ಮಾನ ಕೈಗೊಳ್ಳಲಾಗುತ್ತೆ..
* 10 ಮತ್ತು 12 ತರಗತಿಗಳು ಅಫ್ ಲೈನ್ ಮತ್ತು ಆನ್ ಲೈನ್ ಥ್ರೂ ಕಲಿಯಬಹುದು..
* ಪೋಷಕರು ಮಕ್ಕಳನ್ನ ಕಡ್ಡಾಯವಾಗಿ ಶಾಲೆಗಳನ್ನ ಕಳಿಸಲೇಬೇಕು ಎಂಬ ಕಡ್ಡಾಯವಿಲ್ಲ
* ಭಾನುವಾರ ಶಾಲೆ ತೆರೆಯುವ ಚಿಂತನೆ ಇಲ್ಲ
* ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿಲ್ಲ. 
* ಸೋಂಕು ಸಂಬಂಧಿಸಿದ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ವ್ಯವಸ್ಥೆ 

PREV
click me!

Recommended Stories

ಮುಂದಿನ ಶೈಕ್ಷಣಿಕ ವರ್ಷದಿಂದ ಗಣಿತ ಪರೀಕ್ಷಾ ಪದ್ಧತಿ ಬದಲಾವಣೆ ಬಹುತೇಕ ಫಿಕ್ಸ್, ವರದಿ ಕೊಡಲು ಶಿಕ್ಷಣ ಸಚಿವರ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ, ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಿಪರೇಟರಿ–2, 3 ಪರೀಕ್ಷೆಗೆ ಖಡಕ್ ರೂಲ್ಸ್!