11,894 ಶಿಕ್ಷಕರ ನೇಮಕ ಸುಪ್ರೀಂ ಅಂತಿಮ ತೀರ್ಪಿಗೆ ಬದ್ಧ: ಸರ್ಕಾರ

By Kannadaprabha News  |  First Published Feb 7, 2024, 11:10 AM IST

2022-23ನೇ ಸಾಲಿನಲ್ಲಿ ನಡೆದಿರುವ 11,894 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.


ಬೆಂಗಳೂರು (ಫೆ.7): 2022-23ನೇ ಸಾಲಿನಲ್ಲಿ ನಡೆದಿರುವ 11,894 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮತ್ತೊಮ್ಮೆ 10% ಉದ್ಯೋಗಿಗಳನ್ನು ವಜಾಗೊಳಿಸಿದ ಸ್ನ್ಯಾಪ್!

Tap to resize

Latest Videos

undefined

ಈ ನೇಮಕಾತಿಯಲ್ಲಿ ತಂದೆ ಅಥವಾ ಗಂಡನ ಆದಾಯ ಪ್ರಮಾಣ ಪತ್ರ ಪರಿಗಣಿಸಬೇಕೇ ಎಂಬ ಗೊಂದಲ ನ್ಯಾಯಾಲಯದ ಕಟಕಟೆಯಲ್ಲಿದೆ. ಹೈಕೋರ್ಟ್ ತಂದೆಯ ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ನೇಮಕಾತಿಗೆ ತಡೆ ನೀಡಿದೆ.

ವೇತನ ಹೆಚ್ಚಳ ಮತ್ತು ಬಡ್ತಿಗಾಗಿ ಉದ್ಯೋಗಿಗಳಿಗೆ ಷರತ್ತು ವಿಧಿಸಿದ ಐಟಿ ದಿಗ್ಗಜ ಟಿಸಿಎಸ್‌

ಆ ಬಳಿಕ ರಾಜ್ಯ ಸರ್ಕಾರದ ಮನವಿಯನ್ನು ಆಲಿಸಿ ತನ್ನ ತೀರ್ಪಿಗೆ ಬದ್ಧವಾಗಿ ನೇಮಕಗೊಂಡ ಶಿಕ್ಷಕರು ಪಠ್ಯ ಚಟುವಟಿಕೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜ್ಞಾಪನಾ ಪತ್ರ ಹೊರಡಿಸಿರುವ ಇಲಾಖೆಯ ಆಯುಕ್ತರು, ಈ ನೇಮಕಾತಿಯು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ನೇಮಕಗೊಂಡಿರುವ ಪ್ರತಿ ಶಿಕ್ಷಕನಿಗೆ ಲಿಖಿತವಾಗಿ ತಿಳಿಸಿ ಲಿಖಿತವಾಗಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಪನಿರ್ದೇಶಕರಿಗೆ (ಆಡಳಿತ) ಸೂಚಿಸಿದ್ದಾರೆ.

click me!