ಶಾಲಾ ಮಕ್ಕಳಿಗೆ ವಿತರಿಸೋ ಕೆನೆಭರಿತ ಹಾಲಿನ ಪುಡಿಗೆ ತಿಲಾಂಜಲಿ ಹಾಡಲು ಸರಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಲಿನ ಪುಡಿ ಬದಲಿಗೆ ಇನ್ಮುಂದೆ ಟೆಟ್ರಾ ಪ್ಯಾಕ್ ಹಾಲು ವಿತರಣೆ ಮಾಡಲಾಗುತ್ತೆ ಎನ್ನಲಾಗಿದೆ.
ಬೆಂಗಳೂರು (ನ.24): ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸೋ ಕೆನೆಭರಿತ ಹಾಲಿನ ಪುಡಿಗೆ ತಿಲಾಂಜಲಿ ಹಾಡಲು ಸರಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಲಿನ ಪುಡಿ ಬದಲಿಗೆ ಇನ್ಮುಂದೆ ಟೆಟ್ರಾ ಪ್ಯಾಕ್ ಹಾಲು ವಿತರಣೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲಿಗೆ ಟೆಟ್ರಾ ಪ್ಯಾಕ್ ಹಾಲು ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿ ಕ್ಷೀರಭಾಗ್ಯ ಹಾಲಿನ ಪೌಡರ್ ವಿತರಿಸುವಲ್ಲಿ ಸಾಲು ಸಾಲು ಲೋಪಗಳು ಕಂಡುಬರುತ್ತಿದೆ. ಬಡ ಮಕ್ಕಳ ಹಾಲಿನ ಪೌಡರ್ ಅನ್ನು ಅಕ್ರಮವಾಗಿ ಸಾಗಾಟ ಮಾಡುವ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಟೆಟ್ರಾ ಪ್ಯಾಕ್ ನೀಡಲು ಮುಂದಿನ ಬಜೆಟ್ ನಲ್ಲಿ ಸರ್ಕಾರ ಯೋಜನೆ ರೂಪಿಸಲಿದೆ.
ಕೆಎಂಎಫ್ ನಿಂದ ಸರ್ಕಾರಕ್ಕೆ ಪ್ರಸ್ತಾವನೆ: ಇನ್ಮುಂದೆ ಮಕ್ಕಳಿಗೆ ಪೌಡರ್ ಹಾಲು ಕೊಡಲ್ಲ ಕೆಎಂಎಫ್ ನಿಂದ ಹಾಲು ಬದಲಿಗೆ ಟೆಟ್ರಾ ಪ್ಯಾಕ್ ಹಾಲು ನೀಡಲಾಗುತ್ತದೆ. ಯಾಕಂದ್ರೆ ಈ ಬಗ್ಗೆ ಕೆಎಂಎಫ್ ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್ ನಲ್ಲಿ ಸಿಎಂ ಈ ಕುರಿತಂತೆ ಘೋಷಣೆ ಮಾಡುವುದು ಬಹುತೇಕ ನಿಜವಾಗಿದೆ.
ಪೌಡರ್ ಹಾಲು ಬಳಕೆ ಮಾಡಲು ಮಕ್ಕಳು ಕೂಡ ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲ ಗರ್ಭಿಣಿಯರು ಕೂಡ ಹಾಲಿನ ಪೌಡರ್ ಬಳಕೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಹಾಲಿನ ಪೌಡರ್ ಕಳವು, ಅಕ್ರಮ ಮಾರಾಟ ತಡೆಯಲು ಕೆಎಂಎಫ್ ಹೊಸ ಮಾರ್ಗದ ಮೊರೆ ಹೋಗಿದೆ
ಟೆಟ್ರಾ ಪ್ಯಾಕ್ ನೀಡಿದ್ರೆ ಸದ್ಭಳಕೆ , ಇದರಿಂದ 180 ML ಟೆಟ್ರಾ ಪ್ಯಾಕ್ ನೀಡಲು ನಿರ್ಧಾರ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
Raichur Ksheera Bhagya Scam: ಶಾಲೆಗಳ ನಕಲಿ ದಾಖಲೆ ಸೃಷ್ಟಿಸಿ ಹಾಲಿನ ಪುಡಿ ಗುಳಂ!
ಗೌರವ ಧನ ಬಿಡುಗಡೆಗೆ ಬಿಸಿಯೂಟ ನೌಕರರ ಆಗ್ರಹ
ರಾಮನಗರ: ಬಿಸಿಯೂಟ ಸಿಬ್ಬಂದಿಗೆ ಐದು ತಿಂಗಳ ಗೌರವ ಧನ ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ಪದಾಧಿಕಾರಿಗಳು ಹಾಗೂ ಬಿಸಿಯೂಟ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 20 ವರ್ಷಗಳಿಂದ ಮಧ್ಯಾಹ್ನದ ಉಪಹಾರ ಯೋಜನೆಯಡಿ ಬಿಸಿಯೂಟ ಕಾರ್ಯಕರ್ತೆಯರು ಅಡುಗೆಯವರಾಗಿ ದುಡಿಯುತ್ತಿದ್ದಾರೆ. ಮುಖ್ಯ ಅಡುಗೆ ತಯಾರಕರು ಹಾಗೂ ಸಹಾಯಕ ಅಡುಗೆ ತಯಾರಕರು ಕನಿಷ್ಟವೇತನ ಇಲ್ಲದೆ ಗೌರವಧನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸರ್ಕಾರ ಕಳೆದ ಐದು ತಿಂಗಳಿನಿಂದ ಗೌರವ ಧನವನ್ನು ಮಂಜೂರು ಮಾಡಿಲ್ಲ. ಹಾಗಾಗಿ ಜೀವನ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 1.2 ಲಕ್ಷ ಬಿಸಿಯೂಟ ತಯಾರಕರಿದ್ದಾರೆ. ಇದರಲ್ಲಿ ಈ ವರ್ಷದ ಮಾಚ್‌ರ್ ಅಂತ್ಯಕ್ಕೆ 6200 ಮಂದಿ ಮಹಿಳೆಯರು ವಯೋ ನಿವೃತ್ತಿ ಹೊಂದಿದ್ದಾರೆ. ಇವರಿಗೆ ಸರಕಾರ 1.50 ಲಕ್ಷ ರು. ಇಡಗಂಟು ನೀಡಬೇಕು. ಜತೆಗೆ ಮುಂದಿನ ವರ್ಷದಿಂದ 60 ವರ್ಷ ದಾಟಿದ ಎಲ್ಲಾ ಬಿಸಿಯೂಟ ತಯಾರಕರಿಗೂ ಇದು ಅನ್ವಿಸುವಂತೆ ನಿಯಮ ಜಾರಿಗೆ ತರಬೇಕು.
ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ
ಬಿಸಿಯೂಟ ತಯಾರಕರಿಗೆ 2ಲಕ್ಷ ರುಪಾಯಿ ಅಪಘಾತ ಪರಿಹಾರ ಜಾರಿಗೊಳಿಸಬೇಕು. ಅಡುಗೆ ತಯಾರಕರು ತಾವು ನಿರ್ವಹಿಸುವ ಕರ್ತವ್ಯದ ಸಮಯದಲ್ಲಿ ಆಗುವ ಅಪಘಾತ ಪರಿಹಾರ ಪಡೆಯಲು ಇಲಾಖೆ ಕಡ್ಡಾಯಗೊಳಿಸಿರುವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಮಾಡುವುದನ್ನು ರದ್ದುಗೊಳಿಸಿ ಪರಿಹಾರ ಹಣ ಪಡೆಯಲು ಸುಲಭವಾಗುವ ಮಾರ್ಗವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳ ವೇತನ ನೀಡಬೇಕು. ಜತೆಗೆ, ಹಾಲಿ ಇರುವ ನಿಯಮದಂತೆ ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ರೊಳಗೆ ವೇತನ ಕಡ್ಡಾಯವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.