ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು

Published : May 10, 2022, 04:18 PM ISTUpdated : May 10, 2022, 04:57 PM IST
ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು

ಸಾರಾಂಶ

ರಾಜ್ಯದಲ್ಲಿ ಪರೀಕ್ಷಾ ಅಕ್ರಮ ಬಯಲಾದ ಬೆನ್ನಲ್ಲೇ  ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪರೀಕ್ಷೆ ಮೇ. 21 ಮತ್ತು ಮೇ 22 ರಂದು ನಡೆಯಲಿದೆ.

ಬೆಂಗಳೂರು(ಮೇ.10): ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪರೀಕ್ಷೆ ಅಕ್ರಮ ಹಿನ್ನೆಲೆ ಸರಕಾರ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Karnataka Teacher Recruitment 2022) ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ (Karnataka Education Department ) ಹದ್ದಿನ ಕಣ್ಣಿಟ್ಟಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಗೋಷ್ಠಿ ನಡೆಸಿ ಮಾತಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್,  ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ  ಮೇ. 21 ಮತ್ತು ಮೇ 22 ರಂದು ನಡೆಯಲಿದೆ. ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಈ ಭಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, 1 ಲಕ್ಷದ 6 ಸಾವಿರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚಿಸಿ ಒಂದಷ್ಟು ಮಾಹಿತಿ‌ ಪಡೆದಿದ್ದೇವೆ ಎಂದರು.

ಒಟ್ಟು 435 ಕೇಂದ್ರಗಳಲ್ಲಿ  ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳು ಇರಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ.  ಪೊಲೀಸರು ಮೊದಲ ಹಂತದಲ್ಲಿ ತಪಾಸಣೆ ನಡೆಸಿದ ಬಳಿಕ  ನಮ್ಮ‌ ಇಲಾಖೆಯವರು ಎರಡನೇ ಹಂತದಲ್ಲಿ ತಪಾಸಣೆ ನಡೆಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

BMRCL Recruitment 2022: ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ

ಇನ್ನು ಪರೀಕ್ಷೆ  ಬರೆಯುವ ಅಭ್ಯರ್ಥಿಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದ್ದು, ಈ ಬಗ್ಗೆ ಮೇ 14ರಂದು ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಹಾಜರಾಗಬೇಕು. ಯಾರಿಗೂ ಕೈಗಡಿಯಾರಕ್ಕೆ ಅವಕಾಶ ಇಲ್ಲ.  ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್‌ ವಸ್ತು ಒಯ್ಯುವಂತಿಲ್ಲ. ಮೊಬೈಲ್‌, ವಾಚ್‌, ಎಲೆಕ್ಟ್ರಾನಿಕ್‌ ಡಿವೈಸ್‌ಗೆ ಅವಕಾಶ ಇಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಗೋಡೆ ಗಡಿಯಾರ ಅಳವಡಿಸಲಾಗುವುದು ಜೊತೆಗೆ   ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ. 

ಒಂದು ಕೊಠಡಿಯಲ್ಲಿ 20 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.  ಮೆಟಲ್ ಡಿಟೆಕ್ಟರ್ ಬಳಕೆ ಬಗ್ಗೆಯೂ ತೀರ್ಮಾನ ಮಾಡಲಾಗಿದೆ. ಅಗತ್ಯವಿರುವ ಸೂಕ್ಷ್ಮ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಬಳಸಲಾಗುವುದು. ಮೂರು ದಿನದ ಮೊದಲೇ ಪರೀಕ್ಷಾ ಕೇಂದ್ರಗಳನ್ನ ವಶಕ್ಕೆ ಪಡೆಯುತ್ತೇವೆ. ಪರೀಕ್ಷಾ ಸಂಬಂಧ ಮೂರು ಕಮಿಟಿಯನ್ನು ಈಗಾಗಲೇ ರಚಿಸಲಾಗಿದೆ.

BSF RECRUITMENT 2022: ಖಾಲಿ ಇರುವ 90 ಹುದ್ದೆಗಳಿಗೆ ನೇಮಕಾತಿ

ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನು ಅದೇ ಕೇಂದ್ರಕ್ಕೆ ನೇಮಿಸಿಲ್ಲ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಸಿಇಓ, ಎಸ್ಪಿಗಳ ನೇತೃತ್ವದಲ್ಲಿ ಕಮಿಟಿ ಮಾಡಲಾಗಿದೆ. ಈ ಕಮಿಟಿ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲಿದೆ.  144 ಸೆಕ್ಷನ್ ಪರೀಕ್ಷಾ ಕೇಂದ್ರದಲ್ಲಿ ಇರಲಿದೆ. ಯಾವುದೇ ಆತಂಕಕ್ಕೆ ಒಳಗಾಗೋದು ಬೇಡ. ಮೊಬೈಲ್ ಗಳನ್ನ ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. ಅರ್ಧ ಗಂಟೆಗೂ‌ ಮೊದಲೇ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಮೇ ಮೂರನೇ ವಾರದಲ್ಲಿ SSLC ಪರೀಕ್ಷೆ ಪಲಿತಾಂಶ: ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶದ ಬಗ್ಗೆ  ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್  ಪಲಿತಾಂಶದ ತಯಾರಿಯ ಕೊನೆಯ ಘಟ್ಟದಲ್ಲಿ ಕೆಲಸ ನಡೆಯುತ್ತಿದೆ. ಮೇ ಮೂರನೇ ವಾರ ಪಲಿತಾಂಶ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Vocal For Local ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳಕ್ಕೆ ಮುಂದಾದ ರಾಜ್ಯ ಸರಕಾರ 

 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ