2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ

By Suvarna News  |  First Published Jun 18, 2022, 12:05 PM IST

 ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 61.88% ಫಲಿತಾಂಶ ಬಂದಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಲ್ಲಿದೆ.


ಬೆಂಗಳೂರು (ಜೂನ್.18): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರಕಟಿಸಿದ್ದಾರೆ.  ಈ ಬಾರಿ ದ್ವಿತೀಯ ಪಿಯುಸಿ 61.88% ಫಲಿತಾಂಶ ಬಂದಿದೆ.  ಕಳೆದ ಬಾರಿಗಿಂತ ಈ ಬಾರಿ 0.6 ಫಲಿತಾಂಶ ಏರಿಕೆ ಆಗಿದೆ. ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.86.38 ಮೂಲಕ ಉಡುಪಿ ಎರಡನೇ ಸ್ಥಾನ ಪಡೆದರೆ ಶೇ.77.14 ಪಡೆಯುವ ಮೂಲಕ ವಿಜಯಪುರ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ಚಿತ್ರದುರ್ಗ ಶೇ.  49.31% ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ.

Tap to resize

Latest Videos

2ND PUC RESULT 2022; ದ್ವಿತೀಯ ಪಿಯುಸಿ 61.88% ಫಲಿತಾಂಶ, ದಕ್ಷಿಣ ಕನ್ನಡ ಫಸ್ಟ್

ಜಿಲ್ಲಾವಾರು ಎಷ್ಟು ಶೇ. ಫಲಿತಾಂಶ ಬಂದಿದೆ ಎಂಬ ಮಾಹಿತಿ ಇಲ್ಲಿದೆ
ಜಿಲ್ಲೆಗಳ ಶೇಕಡಾವಾರು ಫಲಿತಾಂಶ
1. ದಕ್ಷಿಣ ಕನ್ನಡ ಪ್ರಥಮ - 88.02%
2. ಉಡುಪಿ - 86.38%
3. ವಿಜಯಪುರ - 77.14 % 
4. ಬೆಂಗಳೂರು ದಕ್ಷಿಣ 76.24
5. ಉತ್ತರ ಕನ್ನಡ 72.01
6. ಕೊಡಗು- 73.22
7.ಬೆಂಗಳೂರು ಉತ್ತರ -72.01
8. ಶಿವಮೊಗ್ಗ- 70.14
9. ಚಿಕ್ಕಮಗಳೂರು -69.42
10. ಬಾಗಲಕೋಟೆ - 68.69
11. ಚಿಕ್ಕೋಡಿ -68
12. ಬೆಂಗಳೂರು ಗ್ರಾಮಾಂತರ -67.86
13. ಹಾಸನ -67.28
14. ಹಾವೇರಿ -66.64
15. ಧಾರವಾಡ-65.66
16. ಚಿಕ್ಕಬಳ್ಳಾಪುರ- 64.49
17. ಮೈಸೂರು- 64.45
18. ಚಾಮರಾಜನಗರ-63.02
19. ದಾವಣಗೆರೆ-62.72
20. ಕೊಪ್ಪಳ-62.04
21. ಬೀದರ್​- 60.78
22. ಗದಗ- 60.63
23. ಯಾದಗಿರಿ-60.59
24. ಕೋಲಾರ- 60.41
25. ರಾಮನಗರ-60.22
26. ಬೆಳಗಾವಿ-59.88
27. ಕಲಬುರುಗಿ-59.17
28. ತುಮಕೂರು-58.90
29. ಮಂಡ್ಯ -58.77
30. ರಾಯಚೂರು -57.93
31 ಬಳ್ಳಾರಿ -55.48
32. ಚಿತ್ರದುರ್ಗ -49.18

ಇನ್ನು ಈ ಬಾರಿ 5,99,794 ಹೊಸಬರು ಪರೀಕ್ಷೆ ತೆಗೆದುಕೊಂಡಿದ್ದರು. ಇದ್ರಲ್ಲಿ 4,02,697 ವಿದ್ಯಾರ್ಥಿ ಪಾಸ್ ಆಗಿದ್ದಾರೆ. ರಿಪೀಟರ್ಸ್ 61838 ರಲ್ಲಿ 14403 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 21931 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ   5866 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಬಿಸಿ ನಾಗೇಶ್ ತಿಳಿಸಿದ್ದಾರೆ.

ಈ ಬಾರಿಯೂ ವಿಜ್ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗ 72.53% , ವಾಣಿಜ್ಯ ವಿಭಾಗ 64.97%, ಕಲಾ ವಿಭಾಗದಲ್ಲಿ 58.71 % ಫಲಿತಾಂಶ ಬಂದಿದೆ.

2nd PUC Result 2022; ವೆಬ್‌ಸೈಟ್ ನಲ್ಲಿ 12 ಗಂಟೆಗೆ ಫಲಿತಾಂಶ ಪ್ರಕಟ, ನೋಡುವುದು ಹೇಗೆ?

ಮಲ್ಲೇಶ್ವರಂ ನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ (department of pre university education) ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಸಚಿವ ನಾಗೇಶ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು  ಅಧಿಕೃತ ವೆಬ್‌ಸೈಟ್‌ www.karresults.nic.in ಗೆ ಭೇಟಿ ನೀಡಿ ಪಿಯುಸಿ ಫಲಿತಾಂಶವು 12 ನಂತರ ಪಡೆಯಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 

click me!