ಕರ್ನಾಟಕ ಸರ್ಕಾರದಿಂದ ಶಾಲೆ ಬೇಸಿಗೆ ರಜೆ ಪರಿಷ್ಕರಣೆ

By Kannadaprabha News  |  First Published May 6, 2021, 9:42 AM IST

ಕರ್ನಾಟಕ ಸರ್ಕಾರ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಬೇಸಿಗೆ ರಜೆಯನ್ನು ಪರಿಷ್ಕರಣೆ ಮಾಡಿದೆ.  ಪರಿಷ್ಕರಣೆ ಪಟ್ಟಿಯ ಬದಲಾವಣೆ ಏನಿದೆ.. ?


ಬೆಂಗಳೂರು (ಮೇ.06):  ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಬೇಸಿಗೆ ರಜೆಯನ್ನು ಪರಿಷ್ಕರಣೆ ಮಾಡಿ ಆದೇಶಿಸಿದ್ದು, 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಏ.27ರಿಂದ ಜೂ.14ರವರೆಗೆ ಹಾಗೂ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಏ.27ರಿಂದ ಮೇ 31ರ ವರೆಗೆ ಬೇಸಿಗೆ ರಜೆ ನೀಡಿದೆ.

ಬೇಸಿಗೆ ರಜೆ ಕುರಿತು ಬುಧವಾರ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಶಿಕ್ಷಣ ನಿರ್ದೇಶಕರು, ಈಗಾಗಲೇ ಜೂ.15ರವರೆಗೆ ಪ್ರಾಥಮಿಕ ಮತ್ತು ಜು.15ರವರೆಗೆ ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ನೀಡಿ ಆದೇಶಿಸಲಾಗಿತ್ತು.ಆದರೆ, ಜೂ.21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವುದರಿಂದ ಬೇಸಿಗೆ ರಜೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಶಿಕ್ಷಕರ ಸಂಘಟನೆಗಳು ಮನವಿ ಮಾಡಿದ್ದವು. ಅಲ್ಲದೆ, ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜಾ ಅವಧಿಯನ್ನು ಪರಿಷ್ಕರಣೆ ಮಾಡಲಾಗಿದೆ. ಇದು ಕೂಡ ತಾತ್ಕಾಲಿಕ ವೇಳಾಪಟ್ಟಿಯಾಗಿದೆ ಎಂದು ತಿಳಿಸಿದ್ದಾರೆ.

Latest Videos

'ನಮ್ಮ ನೆರವಿಗೂ ಬನ್ನಿ' ಖಾಸಗಿ ಶಾಲೆಗಳಿಗೂ ಕಠಿಣ ಸ್ಥಿತಿ

10ನೇ ತರಗತಿಗೆ ಬೋಧಿಸುವ ಶಿಕ್ಷಕರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು, ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ. ಜೂ.1ರಿಂದ 14ರ ವರೆಗೆ ಪುನರ್‌ಮನನ ತರಗತಿಗಳನ್ನು ನಡೆಸುವಂತೆಯೂ ತಿಳಿಸಿದೆ.

ಜೂ.15ರಿಂದ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಾರಂಭವಾಗಲಿದೆ. ಪ್ರಸ್ತುತ ಕೊರೋನಾ ಇರುವುದರಿಂದ ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪರಿಷ್ಕರಣೆಗೆ ಒಳಪಡಬಹುದು ಎಂದು ಆದೇಶದಲ್ಲಿ ತಿಳಿಸಿದೆ.

click me!