PUC ಪಾಸ್ ಮಾಡಿ, SSLC ಪಾಸ್ ಮಾಡಿದ್ರೆ ತಪ್ಪೇನು? ಸರ್ಕಾರಕ್ಕೆ ವಾಟಾಳ್ ಪ್ರಶ್ನೆ

By Suvarna NewsFirst Published Jun 28, 2021, 4:53 PM IST
Highlights

* ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿರೋಧ
* ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಆಕ್ರೋಶ
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿರೋಧಿಸಿ ವಿಧಾನಸೌಧದಲ್ಲಿ ವಾಟಾಳ್ ಪ್ರತಿಭಟನೆ

ಬೆಂಗಳೂರು, (ಜೂನ್.28): ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಇಂದು (ಸೋಮವಾರ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದ್ರೆ, ಇತ್ತ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜು. 19 ಹಾಗೂ 22ಕ್ಕೆ SSLC ಪರೀಕ್ಷೆ: ಯಾವ ಪರೀಕ್ಷೆ ಯಾವಾಗ? ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ನಡೆಸುತ್ತಿರುವುದನ್ನು ಖಂಡಿಸಿ  ವಾಟಾಳ್​ ನಾಗರಾಜ್ ಇಂದು (ಸೋಮವಾರ) ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದರು.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸೋದು ಸರಿಯಲ್ಲ, ಪಿಯುಸಿ ಯಾಕೆ ರದ್ದು ಮಾಡಿದರು. ಮಕ್ಕಳ ಜೀವ ಮುಖ್ಯ ಅಂತ ತಾನೇ. ಪಿಯು ಪಾಸ್ ಮಾಡಿ, ಎಸ್​ಎಸ್​ಎಲ್​ಸಿ ಪಾಸ್ ಮಾಡಿದ್ರೆ ತಪ್ಪೇನು?  ಎಂದು ಪ್ರಶ್ನಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯದಿದ್ರೆ ಏನು ಆಗೋದಿಲ್ಲ. ಎಲ್ಲರನ್ನು ಪಾಸ್ ಮಾಡ್ತೀವಿ ಎಂದು ಹೇಳಿದ ಮೇಲೆ ಪರೀಕ್ಷೆ ಮಾಡೋದು ಯಾಕೆ? ಮಕ್ಕಳ ಪ್ರಾಣದ ಜೊತೆ ಆಟ ಆಡಬೇಡಿ. ಹಠಮಾರಿತನ ಬಿಟ್ಟುಬಿಡಿ ಸುರೇಶ್ ಕುಮಾರ್. ಇದು ಅತ್ಯಂತ ಗಂಭೀರ ಪರಿಸ್ಥಿತಿ ಇದೆ ಎಂದು ಹೇಳಿದರು.

click me!