ಪರೀಕ್ಷಾ ಕೇಂದ್ರಕ್ಕೆ ಕುಲಪತಿ ದಿಢೀರ್ ಭೇಟಿ; ಎರಡು ಪರೀಕ್ಷಾ ಕೇಂದ್ರ ರದ್ದು

By Ravi Janekal  |  First Published Nov 12, 2022, 10:12 PM IST

ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ಬೀದರ ನಗರದ ಪರೀಕ್ಷಾ ಕೇಂದ್ರಗಳಿಗೆ ದಿಡೀರ್ ಭೇಟಿ ‌ನೀಡಿದ ಸಂದರ್ಭದಲ್ಲಿ ವಿ.ವಿ.ಯ ಪರೀಕ್ಷಾ ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರಗಳನ್ನು ರದ್ದುಗೊಳಿಸಿದ್ದಾರೆ


ಕಲಬುರಗಿ (ನ‌.12) :  ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ಬೀದರ ನಗರದ ಪರೀಕ್ಷಾ ಕೇಂದ್ರಗಳಿಗೆ ದಿಡೀರ್ ಭೇಟಿ ‌ನೀಡಿದ ಸಂದರ್ಭದಲ್ಲಿ ವಿ.ವಿ.ಯ ಪರೀಕ್ಷಾ ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರಗಳನ್ನು ರದ್ದುಗೊಳಿಸಿದ್ದಾರೆ.

ಬೀದರಿನ‌ ಸನ್ ಶೈನ್ ಪದವಿ‌ ಮಹಾವಿದ್ಯಾಲಯಕ್ಕೆ‌ ಭೇಟಿ ನೀಡಿದಾಗ ಪರೀಕ್ಷಾ ಸಂದರ್ಭದಲ್ಲಿ ಸಿ.ಸಿ.ಟಿ.ವಿ. ಸ್ವಿಚ್ ಆಫ್ ಮಾಡಿರುವುದು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕೊಠಡಿ‌ ಮೇಲ್ವಿಚಾರಕರನ್ನಾಗಿ ನೇಮಿಸಿರುವುದನ್ನು‌ ಕುಲಪತಿಯವರ ಗಮನಕ್ಕೆ ಬಂದಿದೆ.  ವಿ.ವಿ. ನಿಯಮಾನುಸಾರ ಪರೀಕ್ಷೆ ಜರುಗಿಸದ ಕಾರಣ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ತಕ್ಷಣದಿಂದ ರದ್ದುಪಡಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಪರೀಕ್ಷೆಗಳನ್ನು ಸಮೀಪದ ಕರ್ನಾಟಕ ಪದವಿ ಮಹಾವಿದ್ಯಾಲಯಕ್ಕೆ ವರ್ಗಾಯಿಸಲಾಗಿದೆ.

Latest Videos

undefined

ಶಾಲೆಗಳಲ್ಲಿ ಧ್ಯಾನ: ಶಿಕ್ಷಣ ಸಚಿವರ ಆದೇಶಕ್ಕೆ ವೈಜ್ಞಾನಿಕ ಆಧಾರ ಇದೆಯೇ?, ಡಾ. ಭಂಡಾರಿ ಪ್ರಶ್ನೆ

ಅದೇ ರೀತಿ ಬೀದರ‌ ನಗರದ ರಾಯಲ್ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ಆಸನಗಳನ್ನು ಜೋಡಿಸಿ ಕೂಡಿಸದೇ, ಗುಂಪು-ಗುಂಪಾಗಿ ಪರೀಕ್ಷೆಗಳು ನಡೆಸುತ್ತಿರುವುದು, ಒಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಕೋಣೆಯಲ್ಲಿ ಕೂಡಿಸಿ ಪರೀಕ್ಷೆ ಬರೆಸುತ್ತಿರುವುದು, ಸಿ.ಸಿ.ಟಿ.ವಿ ಕ್ಯಾಮೆರಾ ಆಫ್ ಮಾಡಿಟ್ಟಿರುವುದರಿಂದ ಈ ಪರೀಕ್ಷಾ ಕೇಂದ್ರವನ್ನೂ ಸಹ ರದ್ದುಪಡಿಸಿ ಮುಂದಿನ ಪರೀಕ್ಷೆಗಳನ್ನು ಸಮೀಪದ ಬಿ.ವಿ ಬಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬರೆಯಲು ಆದೇಶಿಸಲಾಗಿದೆ‌ ಎಂದು ವಿ.ವಿ. ಕುಲಸಚಿವ (ಮೌಲ್ಯಮಾಪನ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!