*ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾಗುತ್ತಿರುವ ಯೋಜನೆ ಈಗ ಜಾರ್ಖಂಡ್‌ನಲ್ಲೂ ಜಾರಿಯಾಗಲಿದೆ
*ಜಾರ್ಖಂಡ್‌ನಲ್ಲಿ ಗುರುಜೀ ಹೆಸರಿನಲ್ಲಿ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಯೋಜನೆ ಅನುಷ್ಠಾನ
* ಇದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಒದಗಿಸುವ ಸರ್ಕಾರಿ ಸ್ಕೀಮ್ ಆಗಿದೆ
ಉನ್ನತ ವಿದ್ಯಾಭ್ಯಾಸ ಮಾಡುವ ಆಸೆಯಿದ್ದರೂ, ಮಧ್ಯಮ ಹಾಗೂ ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಅದು ಸಾಧ್ಯವಾಗುವುದಿಲ್ಲ. ಬ್ಯಾಂಕುಗಳಿಂದ ಸಾಲ (Bank Loan) ಪಡೆಯುವುದು, ಖಾಸಗಿಯಾಗಿ ಸಾಲ ಪಡೆದು ಓದುವುದು ಕಷ್ಟಕರ ಸಂಗತಿಯೇ. ಸಾಲಕ್ಕೆ ಅಪಾರ ಬಡ್ಡಿ ತೆತ್ತಬೇಕಾಗುತ್ತದೆ ಎಂಬ ಭಯಕ್ಕೆ ಉನ್ನತ ವ್ಯಾಸಂಗದ ಕನಸನ್ನು ಚಿವುಟಿ ಹಾಕುತ್ತಾರೆ. ಇಂಥ ಬಡ ವಿದ್ಯಾರ್ಥಿಗಳ ನೆರವಿಗೆ ಸರ್ಕಾರಗಳು ನಿಂತರೆ, ಎಷ್ಟು ಚೆನ್ನಾಗಿರುತ್ತದೆ ಅಲ್ವಾ?.. ಹೌದು..ಇತ್ತೀಚೆಗೆ ಬಹುತೇಕ ರಾಜ್ಯ ಸರ್ಕಾರಗಳು ಒಂದಲ್ಲ ಒಂದು ರೂಪದ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುತ್ತಿವೆ. ಪಶ್ಚಿಮ ಬಂಗಾಳ (West Bengal)ದ ಬಳಿಕ ಜಾರ್ಖಂಡ್ (Jharkhand) ಸರ್ಕಾರವು ಗುರೂಜಿ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ (Guruji Student Credit Card) ಯೋಜನೆಯನ್ನು ಪರಿಚಯಿಸುತ್ತಿದೆ. ಗುರೂಜಿ ಕ್ರೆಡಿಟ್ ಕಾರ್ಡ್ ಯೋಜನೆಯು ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಯಾವುದೇ ಅಡಮಾನವಿಲ್ಲದೆ ರೂ. 10 ಲಕ್ಷದವರೆಗೆ ಸಾಲವನ್ನು ಪಡೆಯಲು ಅನುಮತಿ ನೀಡುತ್ತದೆ. ಈ ಯೋಜನೆಯು ರಾಜ್ಯದ ಯುವಕರನ್ನು ಉನ್ನತ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ವಿದ್ಯಾರ್ಥಿಯು ಜಾರ್ಖಂಡ್‌ನ ನಿವಾಸಿಯಾಗಿರಬೇಕು. ಯೋಜನೆಯಲ್ಲಿ ಅರ್ಜಿದಾರರಿಗೆ ವಯಸ್ಸಿನ ಮಿತಿಯನ್ನು ಸಹ ನಿಗದಿಪಡಿಸಲಾಗುತ್ತದೆ. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಅವಧಿಯೊಳಗೆ ಸಾಲವನ್ನು ಮರುಪಾವತಿಸಬೇಕಾಗುತ್ತದೆ.
VI ಆಪ್‌ನಲ್ಲಿ ಇಂಗ್ಲಿಷ್ ಕಲಿಯಿರಿ, ಪರೀಕ್ಷೆಗೆ ತಯಾರಾಗಿ, ಉದ್ಯೋಗ ಹುಡುಕಿ!
ಇನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ಈ ಗುರೂಜಿ ಕ್ರೆಡಿಟ್ ಕಾರ್ಡ್ ಯೋಜನೆ (Guruji Credit Card Scheme)ಗೆ ಸೇವಾ ಪೂರೈಕೆದಾರರ ಬ್ಯಾಂಕ್ (Banks) ಗಳನ್ನು ನಿರ್ಧರಿಸುವ ಪ್ರಕ್ರಿಯೆಯು ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಯೋಜನೆಗಾಗಿ ವೆಬ್ ಪೋರ್ಟಲ್ ಜೂನ್ 15 ರೊಳಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಯೋಜನೆ ಅನುಷ್ಠಾನಕ್ಕಾಗಿ ಮೇ 31 ರಂದು ಇಲಾಖಾ ಮಟ್ಟದಿಂದ ನೋಡಲ್ ಅಧಿಕಾರಿಯೊಂದಿಗೆ ಪ್ರತ್ಯೇಕ ಸೆಲ್ ಸ್ಥಾಪನೆ ಮಾಡಲಾಗುತ್ತದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Chief minister Hemant Soren) ಅವರು ಕೋಲ್ಕತ್ತಾಗೆ ಭೇಟಿ ನೀಡಲು ಮತ್ತು ಪಶ್ಚಿಮ ಬಂಗಾಳ ಸರ್ಕಾರವು ನಡೆಸುತ್ತಿರುವ ಕ್ರೆಡಿಟ್ ಕಾರ್ಡ್ ಯೋಜನೆಯ ವಿವರವಾದ ಅಧ್ಯಯನವನ್ನು ಕೈಗೊಳ್ಳಲು ಕ್ರೆಡಿಟ್ ಕಾರ್ಡ್ ಯೋಜನೆಯ ಅನಿಶ್ಚಿತತೆಯನ್ನು ಸರಿಪಡಿಸಲು ರಚಿಸಲಾದ ಸಮಿತಿಯನ್ನು ಕೇಳಿದ್ದಾರೆ.
ಪಶ್ಚಿಮ ಬಂಗಾಳದ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯು ದ್ವಿತೀಯ, ಉನ್ನತ ಮಾಧ್ಯಮಿಕ, ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳನ್ನು ಬೆಂಬಲಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ಯಾವುದೇ ಶಾಲೆ, ಮದರಸಾ, ಕಾಲೇಜು, ವಿಶ್ವವಿದ್ಯಾನಿಲಯ ಅಥವಾ ಭಾರತದ ಮತ್ತು ಹೊರಗಿನ ಇತರ ಅಂಗಸಂಸ್ಥೆಗಳಲ್ಲಿ ವೃತ್ತಿಪರ ಪದವಿಗಳು ಮತ್ತು ಇತರ ಸಮಾನ ಕೋರ್ಸ್‌ಗಳನ್ನು ಒಳಗೊಂಡಿವೆ. ಹತ್ತನೇ ತರಗತಿಯಿಂದ 40 ವರ್ಷದವರೆಗಿನ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪಶ್ಚಿಮ ಬಂಗಾಳ ಸರ್ಕಾರವು ಇತ್ತೀಚೆಗೆ ರಾಜ್ಯದ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಸಾಲಗಳನ್ನು ಮಂಜೂರು ಮಾಡುವ ಮತ್ತು ವಿತರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕೋರ್ಟ್ ಪರಿಣತರಂತೆ ವರ್ತಿಸಬಾರದು: ಸುಪ್ರೀಂ ಕೋರ್ಟ್
ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗಳು ಸೀಮಿತ ಕ್ರೆಡಿಟ್‌ನೊಂದಿಗೆ ಬರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ ಮತ್ತು ಸಾಲದ ಹೊರೆ ಕೂಡ ಅವರ ಮೇಲೆ ಬೀಳುವುದಿಲ್ಲ. ಈ ಕಾರ್ಡ್ ಅಡಿಯಲ್ಲಿ ಕ್ಯಾಶ್ withdrawal ಮೊತ್ತವು ಕಡಿಮೆ ಇರುತ್ತದೆ. ಹಾಗಾಗಿ ಇದರ ಬಳಕೆಯನ್ನು ವಿದ್ಯಾರ್ಥಿಗಳು ಯೋಚನೆ ಮಾಡಿ ಬಳಸುತ್ತಾರೆ. ಈ ಕ್ರೆಡಿಟ್ ಕಾರ್ಡ್‌ನ ಸಿಂಧುತ್ವವು 5 ವರ್ಷಗಳು. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮುಗಿದ ನಂತರ ಈ ಕಾರ್ಡ್ ಅನ್ನು ಸ್ಟ್ಯಾಂಡರ್ಡ್ ಕ್ರೆಡಿಟ್ ಕಾರ್ಡ್ ಆಗಿ ಪರಿವರ್ತಿಸಬಹುದು. ವಿದ್ಯಾರ್ಥಿಗಳು ತಮ್ಮ ಉದ್ಯೋಗ ಮತ್ತು ಆದಾಯಕ್ಕೆ ಅನುಗುಣವಾಗಿ ಅದರ ಮಿತಿಯನ್ನು ಹೆಚ್ಚಿಸಬಹುದು. ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.