JEE-Main ಫಲಿತಾಂಶ ಪ್ರಕಟ, 44 ವಿದ್ಯಾರ್ಥಿಗಳಿಗೆ 100ಕ್ಕೆ ನೂರು ಅಂಕ!

By Suvarna News  |  First Published Sep 15, 2021, 3:15 PM IST

* ಬಹುನಿರೀಕ್ಷಿತ 2021ರ JEE-Main ಫಲಿತಾಂಶ ಪ್ರಕಟ

* 44 ವಿದ್ಯಾರ್ಥಿಗಳಿಂದ ನೂರಕ್ಕೆ ನೂರು ಅಂಕ ಪಡೆದು ಸಾಧನೆ 

* ವೆಬ್‌ಸೈಟ್‌ನಲ್ಲಿ ಸಿಗುತ್ತೆ ಫಲಿತಾಂಶ


ನವದೆಹಲಿ(ಸೆ.15): ಬಹುನಿರೀಕ್ಷಿತ 2021ರ JEE-Main ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ 44 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇನ್ನು  18 ವಿದ್ಯಾರ್ಥಿಗಳು ಅಗ್ರ ಶ್ರೇಣಿ ಪಡೆದಿದ್ದಾರೆ. ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮಂಗಳವಾರ ರಾತ್ರಿ ಫಲಿತಾಂಶ ಪ್ರಕಟಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ಸಿಗುತ್ತೆ ಫಲಿತಾಂಶ

Tap to resize

Latest Videos

ಈ ಬಾರಿ ಒಟ್ಟು 7.8 ಲಕ್ಷ ವಿದ್ಯಾರ್ಥಿಗಳು ಜೆಇಇ-ಮುಖ್ಯ ಪರೀಕ್ಷೆಗೆ ನೋಂದಾಯಿಸಿದ್ದರು. ಇನ್ನು ಜೆಇಇ ಫಲಿತಾಂಶ ಪರಿಶೀಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ jeemain.nta.nic.in ಗೆ ಭೇಟಿ ನೀಡಿ ನೋಡಬಹುದಾಗಿದೆ. ಅಲ್ಲದೇ, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ntaresults.nic.in ಅಥವಾ nta.ac.in ಮೂಲಕವೂ ಪಡೆಯಬಹುದು

ಮೊದಲ ರ‍್ಯಾಂಕ್ ಪಡೆದವರು

ಗೌರವ್ ದಾಸ್- ಕರ್ನಾಟಕ, ವೈಭವ್ ವಿಶಾಲ್-  ಬಿಹಾರ, ವೆಂಕಟ ಪನೀಶ್-ಆಂಧ್ರಪ್ರದೇಶ, ಸಿದ್ದಾಂತ್ ಮುಖರ್ಜಿ, ಅಂಶುಲ್ ವರ್ಮಾ, ಮೃದುಲ್ ಅಗರ್ವಾಲ್-ರಾಜಸ್ಥಾನ, ರುಚಿರ್ ಬನ್ಸಾಲ್, ಕಾವ್ಯಾ ಚೋಪ್ರಾ-ದೆಹಲಿ, ಅಮಯ್ಯ ಸಿಂಘಾಲ್, ಪಾಲ್ ಅಗರ್ವಾಲ್-ಉತ್ತರ ಪ್ರದೇಶ, ಕೊಮ್ಮಾ ಶರಣ್ಯ, ಜೋಯ್ಸುಲಾ ವೆಂಕಟ ಆದಿತ್ಯ-ತೆಲಂಗಾಣ, ಪಸಾಲ ವೀರ ಶಿವ, ಕರ್ಣಂ ಲೋಕೇಶ್, ಕಾಂಚನಪಲ್ಲಿ ರಾಹುಲ್ ನಾಯ್ಡು-ಆಂಧ್ರಪ್ರದೇಶ, ಪುಲ್ಕಿತ್ ಗೋಯಲ್-ಪಂಜಾಬ್‌ ಮತ್ತು ಗುರಮೃತ್ ಸಿಂಗ್-ಚಂಡೀಗಡ

ಈ ವರ್ಷದಿಂದ ಜೆಇಇ ಮುಖ್ಯ ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗುತ್ತಿದೆ. ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮೆ, ಬೆಂಗಾಲಿ,ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಹೀಗೆ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗಿತ್ತು. 

click me!