2021ನೇ ಸಾಲಿನ JEE ಪರೀಕ್ಷೆ ದಿನಾಂಕ ಪ್ರಕಟ

By Suvarna NewsFirst Published Jan 7, 2021, 7:02 PM IST
Highlights

ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಘೋಷಣೆ ಮಾಡಿದ್ದಾರೆ.

ನವದೆಹಲಿ, (ಜ.07): ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ -2021 ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಲಾಗಿದ್ದು, ಜುಲೈ 3 ರಂದು ಪರೀಕ್ಷೆ ನಡೆಯಲಿದೆ. 

ಈ ಬಗ್ಗೆ ಇಂದು (ಗುರುವಾರ) ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಘೋಷಣೆ ಮಾಡಿದ್ದು, ಈ ವರ್ಷ ಶೇಕಡ 75 ರಷ್ಟು ಮಾನದಂಡಗಳು ಅನ್ವಯವಾಗುವುದಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ.

ಪರೀಕ್ಷೆ ಟೈಮಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಹೇಗೆ?

ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗೆ ಪ್ರವೇಶ ಪಡೆಯಲು ಅರ್ಹತಾ ಮಾನದಂಡಗಳನ್ನು ಪ್ರಕಟಿಸಲಾಗಿದ್ದು, ಶೇಕಡ 75 ರಷ್ಟು ಮಾನದಂಡಗಳು ಅನ್ವಯವಾಗುವುದಿಲ್ಲ. ಐಐಟಿ ಖರಗ್ ಪುರ ಪರೀಕ್ಷೆಯನ್ನು ನಡೆಸಲಿದೆ ಎಂದು ಸಚಿವರು ವಿವರಿಸಿದರು.

click me!