ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಜೊತೆಗೆ ಪಾರ್ಟ್ ಟೈಂ ಜಾಬ್ ಕೂಡ ಮಾಡುತ್ತಾರೆ. ಆದರೆ, ಓದುತ್ತಿರುವ ವಿವಿಯ ಯೋಜನೆಯಲ್ಲೇ ನಿಮಗೆ ಪಾರ್ಟ್ ಟೈಮ್ ಜಾಬ್ ಸಿಕ್ಕರೆ ಹೇಗಿರುತ್ತೆ ಅಲ್ವಾ? ಲಕ್ನೋ ವಿವಿ ಇಂಥದೊದ್ದು ಯೋಜನೆಯನ್ನು ಹಾಕಿಕೊಂಡಿದೆ.
ವಿದೇಶಗಳಲ್ಲಿ ಹೀಗೆ ಓದುತ್ತಲೇ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಕೆಲ್ಸ ಮಾಡೋದು ಕಾಮನ್. ಆದ್ರೆ ಭಾರತದಲ್ಲಿ ಹೀಗೆ ಮಾಡುವವರ ಸಂಖ್ಯೆ ಕಡಿಮೆ. ಮೊದಲು ಓದು, ಆನಂತರ ಉದ್ಯೋಗ ಅನ್ನೋರೆ ಹೆಚ್ಚು. ಅದೇನೆ ಇರಲಿ, ಕೆಲಸದ ಅನಿವಾರ್ಯತೆ ಇದ್ದ ವಿದ್ಯಾರ್ಥಿಗಳು, ಪಾರ್ಟ್ ಜಾಬ್ ಮಾಡೋದು ತಪ್ಪೇನಲ್ಲ. ಆದ್ರೆ ವಿದ್ಯಾಭ್ಯಾಸ ಕುಂಠಿತವಾಗಬಾರದಷ್ಟೇ.
ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಕಾಲೇಜಿನಲ್ಲಿ ಪಾರ್ಟ್ ಜಾಬ್ ಮಾಡುವ ಅವಕಾಶ ಸಿಕ್ಕರೆ ಹೇಗಿರುತ್ತೆ ಅಲ್ವಾ?. ಅರೆ ಇದ್ಹೇಗೆ ಸಾಧ್ಯ ಅಂತೀರಾ. ಉತ್ತರ ಪ್ರದೇಶ ಯೂನಿವರ್ಸಿಟಿಯೊಂದು ಆ ಕೆಲಸವನ್ನು ಮಾಡಿ ತೋರಿಸಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಕಲಿಯವಾಗಲೇ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಜಾಮ್ ಮಾಡಿಕೊಳ್ಳಬಹುದು. ಅಚ್ಚರಿಯಾದರೂ ಇದು ಸತ್ಯ.
undefined
ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್
ಲಕ್ನೋ ವಿಶ್ವವಿದ್ಯಾಲಯದಲ್ಲಿ ಇಂಥ ವಿನೂತನ ಯೋಜನೆಯೊಂದು ಜಾರಿಯಾಗಿದೆ. ವಿವಿ ಕ್ಯಾಂಪಸ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಗಳನ್ನು ನೀಡುವ 'ಕರ್ಮಯೋಗಿ ಯೋಜನೆ' ಯನ್ನು ಪ್ರಾರಂಭಿಸಿದೆ.
'ಕರ್ಮಯೋಗಿ ಯೋಜನೆ' ಮೂಲಕ ವಿದ್ಯಾರ್ಥಿಯು ವರ್ಷದಲ್ಲಿ ಗರಿಷ್ಠ 15 ಸಾವಿರ ರೂ. ಸಂಪಾದಿಸಬಹುದು ಎಂದು ಲಕ್ನೋ ವಿವಿಯ ಉಪಕುಲಪತಿ ಪ್ರೊ.ಅಲೋಕ್ ಕುಮಾರ್ ರೈ ತಿಳಿಸಿದ್ದಾರೆ.
'ವಿದ್ಯಾರ್ಥಿ ಕೇಂದ್ರಿತ ರಚನಾತ್ಮಕ ಚೌಕಟ್ಟನ್ನು ಸ್ಥಾಪಿಸಲು ನಮ್ಮ ವಿವಿ ಬಲವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ವಿದ್ಯಾರ್ಥಿ ಕೇಂದ್ರಿತ ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. 'ಕರ್ಮಯೋಗಿ ಸ್ಕೀಮ್' ಮೂಲಕ ಒಬ್ಬ ವಿದ್ಯಾರ್ಥಿಯು, ತನ್ನ ಶೈಕ್ಷಣಿಕ ಅವಧಿಯಲ್ಲಿ ತರಗತಿಯ ಸಮಯದ ನಂರ ಗರಿಷ್ಠ 50 ದಿನಗಳವರೆಗೆ ದಿನಕ್ಕೆ ಗರಿಷ್ಠ 2 ಗಂಟೆಗಳ ಕಾಲ ಕೆಲಸ ಮಾಡಲು ಅನುಮತಿಸಲಾಗುವುದು. ಅವರಿಗೆ ಗಂಟೆಗೆ 150 ರೂ.ಪಾವತಿಸಲಾಗುತ್ತದೆ. ಹೀಗೆ ಒಬ್ಬ ವಿದ್ಯಾರ್ಥಿಯು ವರ್ಷದಲ್ಲಿ ಗರಿಷ್ಠ 15 ಸಾವಿರ ರೂ. ಗಳಿಸಬಹುದುʼ ಅಂತಾರೆ ಅಲೋಕ್‌ಕುಮಾರ್ ರೈ.
ಪ್ರಸ್ತುತ ಈ ಯೋಜನೆಯು ಲಕ್ನೋ ವಿವಿ ಕ್ಯಾಂಪಸ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ರೈ ಹೇಳಿದರು. 'ಈಗ, 'ಕರ್ಮಯೋಗಿ ಯೋಜನೆ' ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ವಿವಿ ಅಂಗಸಂಸ್ಥೆ ಕಾಲೇಜುಗಳು ಕೂಡ ತಮ್ಮ ಕ್ಯಾಂಪಸ್‌ನಲ್ಲಿ ಇಂತಹ ಉಪಕ್ರಮವನ್ನು ಪ್ರಾರಂಭಿಸಬೇಕು ಎಂದು ನಾನು ಬಯಸುತ್ತೇನೆ" ಎಂದು ರೈ ಹೇಳಿದರು.ಈ ಯೋಜನೆಯು ದೂರಗಾಮಿ ಗುರಿಗಳನ್ನು ತಲುಪಲು ನೆರವಾಗಲಿದೆ.
ಎಎಐನಲ್ಲಿ 368 ಮ್ಯಾನೇಜರ್, ಜ್ಯೂ. ಎಕ್ಸಿಕ್ಯುಟಿವ್ ಹುದ್ದೆಗಳಿಗ ಅರ್ಜಿ ಆಹ್ವಾನ
'ಯೋಜನೆಯಡಿಯಲ್ಲಿ, ಒಬ್ಬ ವಿದ್ಯಾರ್ಥಿಯು ಕೆಲಸವನ್ನು ಗೌರವಿಸಲು ಕಲಿಯುತ್ತಾನೆ, ತನ್ನ ಪ್ರತಿಭೆಯನ್ನು ಲಕ್ನೋ ವಿವಿಯ ಕಲ್ಯಾಣಕ್ಕಾಗಿ ಬಳಸುತ್ತಾನೆ. ಇದರ ಜೊತೆಗೆ ವಿದ್ಯಾರ್ಥಿ ವಿವಿಯೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಸಹಾಯವನ್ನು ಪಡೆಯುತ್ತಾನೆ' ಅಂತಾರೆ ರೈ.
ವಿದ್ಯಾರ್ಥಿ ಜೀವನದಲ್ಲಿ ಮೇಲಿನ ಖರ್ಚಿಗೆ ಹಣ ನೆರವಿಗೆ ಬಂದ್ರೆ ಸಾಕು. ಈ ನಿಟ್ಟಿನಲ್ಲಿ ಲಕ್ನೋ ವಿವಿಯ ಕರ್ಮಯೋಗಿ ಯೋಜನೆ ನಿಜಕ್ಕೂ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಸ್ಕಾಲರ್‌ಶಿಪ್‌ಗಳನ್ನೇ ನಂಬಿ ಬದುಕೋ ಅದೆಷ್ಟೋ ಬಡ ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಕಾಲೇಜಿನ ಪ್ರವೇಶಾವತಿಯ ಶುಲ್ಕ ಪಾವತಿಸಲಾಗದವರು ಇದ್ದಾರೆ. ಅಂಥವರ ಪಾಲಿಗೆ ಇಂತಹ ಯೋಜನೆಗಳು ನಿಜಕ್ಕೂ ದೇವರು ಕೊಟ್ಟ ವರವಿದ್ದಂತೆ. ಕಲಿಕೆಯ ಜೊತೆಯ ದುಡಿಮೆಯ ಮಹತ್ವವನ್ನು ಸಾರುತ್ತದೆ ಈ ಯೋಜನೆ.
ಕ್ಲಾಸ್ ಮುಗಿದ ಮೇಲೆ ಎಲ್ಲೋ ಹೋಗಿ ಕೆಲಸ ಮಾಡುವ ವಿದ್ಯಾರ್ಥಿಗಳು, ಕ್ಯಾಂಪಸ್‌ನಲ್ಲೇ ಅರೆಕಾಲಿಕ ಉದ್ಯೋಗ ಮಾಡಬಹುದು. ಇದ್ರಿಂದಾಗಿ ತಮ್ಮ ಸಮಯ ಹಾಗೂ ಸಂಚಾರದ ಹಣ ಎರಡು ಉಳಿತಾಯವಾಗುತ್ತದೆ. ವಿದ್ಯಾಭ್ಯಾಸ ಮುಗಿದ ಬಳಿಕ ಮುಂದಿನ ಉದ್ಯೋಗ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲು ಕರ್ಮಯೋಗಿ ಯೋಜನೆ ಸಹಕಾರಿಯಾಗಲಿದೆ. ಲಕ್ನೋ ವಿವಿಯ ಮಾದರಿಯಲ್ಲೇ ದೇಶದ ಇನ್ನಿತರೆ ರಾಜ್ಯಗಳ ವಿವಿಗಳು ಅಥವಾ ಖಾಸಗಿ ಕಾಲೇಜು ಈ ಯೋಜನೆ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.
ಪಿಯುಸಿ ಕಾಮರ್ಸ್ ಆದ ಮೇಲೆ ಯಾವುದೆಲ್ಲ ಕಲಿಯಬಹುದು ಗೊತ್ತಾ?