Russia-Ukraine Crisis: ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದವರಿಗೆ ಭಾರತದಲ್ಲಿ ಇಂಟರ್ನ್‌ಶಿಪ್‌

By Kannadaprabha News  |  First Published Mar 6, 2022, 6:10 AM IST

*  ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ
*  ವೈದ್ಯ ವ್ಯಾಸಂಗ ಅರ್ಧಕ್ಕೆ ನಿಂತವರ ಭವಿಷ್ಯ ಅತಂತ್ರ
*  ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಎಂಎನ್‌ಸಿ
 


ನವದೆಹಲಿ(ಮಾ.06): ರಷ್ಯಾ-ಉಕ್ರೇನ್‌(Russia-Ukraine War) ಯುದ್ಧದ ಕಾರಣದಿಂದಾಗಿ 12 ತಿಂಗಳ ಕಡ್ಡಾಯ ಇಂಟರ್ನ್‌ಶಿಪ್‌ ಪೂರ್ಣಗೊಳಿಸಲು ಸಾಧ್ಯವಾಗದೆ ಭಾರತಕ್ಕೆ(India) ಮರಳಿರುವ ಎಂಬಿಬಿಎಸ್‌(MBBS) ವಿದ್ಯಾರ್ಥಿಗಳು ಬಾಕಿ ಉಳಿದ ಇಂಟರ್ನ್‌ಶಿಪ್‌ ಅನ್ನು ಭಾರತದಲ್ಲಿ ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಘೋಷಿಸಿದೆ. ಇದರಿಂದಾಗಿ ಯುದ್ಧದ ಭಯದಲ್ಲಿ ತವರಿಗೆ ಮರಳಿರುವ ಅನೇಕ ವೈದ್ಯ ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ಬೆಳಕು ಸಿಕ್ಕಂತಾಗಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಎಂಎನ್‌ಸಿ, ‘ಕೋವಿಡ್‌ ಮತ್ತು ಯುದ್ಧದಂತಹ ನಿಯಂತ್ರಣ ಮೀರಿದ ಸನ್ನಿವೇಶಗಳಿಂದಾಗಿ ಅನೇಕರು ತಮ್ಮ ಇಂಟರ್ನ್‌ಶಿಪ್‌(Internship) ಅರ್ಧಕ್ಕೇ ಮೊಟಕುಗೊಳಿಸಿರುವುದು ಗಮನಕ್ಕೆ ಬಂದಿದೆ. ಎಂಬಿಬಿಎಸ್‌ ಪದವೀಧರರು ಎದುರಿಸುತ್ತಿರುವ ಸಂಕಷ್ಟ ಮತ್ತು ಆತಂಕವನ್ನು ಗಮನಿಸಿ ಬಾಕಿ ಉಳಿದಿರುವ ಇಂಟರ್ನ್‌ಶಿಪ್‌ ಅನ್ನು ಭಾರತದಲ್ಲೇ ಪೂರ್ಣಗೊಳಿಸಲು ಅನುವು ಮಾಡಿಕೊಡಲಾಗಿದೆ. ಆದರೆ ಅದಕ್ಕೂ ಮೊದಲು ವಿದೇಶದಲ್ಲಿ ವೈದ್ಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು’ ಎಂದು ತಿಳಿಸಿದೆ.

Latest Videos

undefined

ಉಕ್ರೇನ್‌ನಲ್ಲಿ MBBS ಮಾಡ್ತಿದ್ದ ಗ್ರಾ.ಪಂ. ಅಧ್ಯಕ್ಷೆ: ಯುದ್ಧದ ಬಳಿಕ ಬಯಲಾದ ರಹಸ್ಯ

ಈವರೆಗೆ ವಿದೇಶದಲ್ಲಿ ವೈದ್ಯ ಕೋರ್ಸ್‌(Medical Education) ಓದುತ್ತಿರುವ ವಿದ್ಯಾರ್ಥಿಗಳು(Students) ಪದವಿ ಮತ್ತು ಇಂಟರ್ನ್‌ಶಿಪ್‌ ಎರಡನ್ನೂ ಒಂದೇ ಶೈಕ್ಷಣಿಕ ಸಂಸ್ಥೆಯಲ್ಲಿ ಪೂರ್ಣಗೊಳಿಸಿರಬೇಕು ಎಂಬ ನಿಯಮವಿತ್ತು.

ವೈದ್ಯ ಶಿಕ್ಷಣ ಅರ್ಧಕ್ಕೇ ನಿಲ್ಲಿಸಿದವರು ಅತಂತ್ರ:

ವೈದ್ಯಕೀಯ ಪದವಿ ಮುಗಿಸಿದವರಿಗೆ ಭಾರತದಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ನೀಡಲು ಅನುಮತಿಸಿದ್ದರೂ, ಎಂಬಿಬಿಎಸ್‌ ಕೋರ್ಸನ್ನು ಅರ್ಧಕ್ಕೇ ಬಿಟ್ಟು ಉಕ್ರೇನ್‌ನಿಂದ ಆಗಮಿಸಿದವರ ಸ್ಥಿತಿ ಇನ್ನೂ ಅತಂತ್ರವಾಗಿದೆ. ಏಕೆಂದರೆ ವಿದೇಶಿ ವೈದ್ಯ ಪದವಿ ಪರವಾನಗಿ (ಎನ್‌ಎಂಸಿ) ಕಾಯ್ದೆ-2021 ಪ್ರಕಾರ ಇವರಿಗೆ ಇನ್ನುಳಿದ ಎಂಬಿಬಿಎಸ್‌ ಶಿಕ್ಷಣವನ್ನು ಭಾರತದಲ್ಲಿ ಕೈಗೊಳ್ಳಲು ಅವಕಾಶವಿಲ್ಲ. ಹೀಗಾಗಿ ಈ ಕಾಯ್ದೆಗೂ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಚಿಂತನೆ ನಡೆಸುತ್ತಿದೆ.

ವಿದೇಶದಲ್ಲಿ MBBS ಓದಿದ ಎಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯರಾಗುತ್ತಾರೆ? FMGE ಡೇಟಾವೇ ಸಾಕ್ಷಿ!

ಆರಂಭದಿಂದಲೂ ವಿದೇಶದಿಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ದೇಶದಲ್ಲಿ ನಿರಂತರ ಚರ್ಚೆ ನಡೆಯುತ್ತಿದೆ. ಉಕ್ರೇನ್‌ನಲ್ಲಿ ಭೀಕರ ಕಾಳಗದಿಂದ ಅತಂತ್ರರಾಗಿರುವ ಭಾರತೀಯ ಯುವಕರ ಬಗ್ಗೆ ಸದ್ಯಕ್ಕೀಗ ನಮ್ಮ ದೇಶದಲ್ಲಿ ಹಲವು ಸವಾಲುಗಳು ಸದ್ದು ಮಾಡುತ್ತಿವೆ. ಅಷ್ಟಕ್ಕೂ ಅಲ್ಲಿಗೆ ಹೋಗುವ ಅಗತ್ಯ ಏನಿತ್ತು? ಇಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗದವರೂ ಬೇರೆ ದೇಶದಿಂದ ಪದವಿ ಪಡೆದು ಭಾರತದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ನೀಡಬಲ್ಲರು ಎಂಬುದಕ್ಕೆ ಏನು ಗ್ಯಾರಂಟಿ? ಹೀಗೆ ಅನೇಕ ಕುತೂಹಲಭರಿತ ಪ್ರಶ್ನೆಗಳು ಎದ್ದಿವೆ. ಹಾಗಾದ್ರೆ ಇತರ ದೇಶಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಎಷ್ಟು ಇದ್ದಾರೆ? ಯವ್ಯಾವ ದೇಶಗಳಲ್ಲಿ ಓದುತ್ತಿದ್ದಾರೆ? ಭಾರತಕ್ಕೆ ಹಿಂದಿರುಗಿದಾಗ ಅವರು ಎದುರಿಸಿದ ಸವಾಲುಗಳೇನು? ಐದು ಪಾಂಯಿಟ್‌ಗಳಲ್ಲಿ ತಿಳಿದುಕೊಳ್ಳಿ

ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸೇವೆಯ ಪರಿಸ್ಥಿತಿ ಏನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆದರ್ಶಪ್ರಾಯವಾಗಿ 1000 ಜನರಿಗೆ 1 ವೈದ್ಯರು ಇರಬೇಕು. ಇದರ ಪ್ರಕಾರ ಭಾರತದ 138 ಕೋಟಿ ಜನಸಂಖ್ಯೆಗೆ ಸುಮಾರು 1.38 ಕೋಟಿ ವೈದ್ಯರ ಅಗತ್ಯವಿದೆ. ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ (NHP) ಡೇಟಾ ಪ್ರಕಾರ, 2021 ರವರೆಗೆ ದೇಶದಲ್ಲಿ ಕೇವಲ 12 ಲಕ್ಷ ನೋಂದಾಯಿತ ವೈದ್ಯಕೀಯ ವೈದ್ಯರು (RMP) ಇದ್ದರು. ಪ್ರಸ್ತುತ, ದೇಶದಲ್ಲಿ ಸುಮಾರು 83,000 ಎಂಬಿಬಿಎಸ್ ಸೀಟುಗಳು ಲಭ್ಯವಿವೆ. ಇವುಗಳ ಪ್ರವೇಶಕ್ಕಾಗಿ, 2021 ರಲ್ಲಿ, 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯನ್ನು ನೀಡಿದ್ದರು. ಶುಲ್ಕದ ಬಗ್ಗೆ ಹೇಳುವುದಾದರೆ, ಭಾರತದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 4.5 ವರ್ಷಗಳ ಅಧ್ಯಯನಕ್ಕೆ 50 ಲಕ್ಷದಿಂದ 1.5 ಕೋಟಿ ರೂ. ವೆಚ್ಚವಾಗುತ್ತದೆ, ಆದರೆ ಉಕ್ರೇನ್‌ನಂತಹ ದೇಶಗಳಲ್ಲಿ ಈ ವೆಚ್ಚ ಕೇವಲ 15-20 ಲಕ್ಷಗಳು.

click me!