ಪ್ರತಿಷ್ಠಿತ Spelling Bee ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಮೂಲದ ಹರಿಣಿ ಲೋಗನ್!

By Suvarna News  |  First Published Jun 4, 2022, 10:58 AM IST

ಭಾರತೀಯ ಮೂಲದ 14 ವರ್ಷದ ವಿದ್ಯಾರ್ಥಿನಿ ಹರಿಣಿ ಲೋಗನ್ ಪ್ರತಿಷ್ಠಿತ ಸ್ಕ್ರಿಪ್ಟ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಅವಾರ್ಡ್ ಗೆದ್ದುಕೊಂಡಿದ್ದಾರೆ


ವಾಷಿಂಗ್ಟನ್ (ಜೂ.4): ಭಾರತ ಮೂಲದ 14 ವರ್ಷದ ವಿದ್ಯಾರ್ಥಿನಿ ಹರಿಣಿ ಲೋಗನ್ (Harini Logan) ಸ್ಕ್ರಿಪ್ಟ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ (Scripps National Spelling Bee ) ಟೂರ್ನಿಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಪ್ರಶಸ್ತಿ ಪಡೆದಿದ್ದಾರೆ.

ನಾಲ್ಕನೇ ಬಾರಿಗೆ ಸ್ಪೆಲಿಂಗ್ ಬೀ ಯಲ್ಲಿ ಸ್ಪರ್ಧಿಸುತ್ತಿರುವ ಹರಿಣಿ, ಗುರುವಾರ ರಾತ್ರಿ ಮೇರಿಲ್ಯಾಂಡ್‌ನ ನ್ಯಾಷನಲ್ ಹಾರ್ಬರ್‌ನಲ್ಲಿ 90 ಸೆಕೆಂಡ್‌ಗಳ ಕ್ಷಿಪ್ರ ಅವಧಿಯಲ್ಲಿ 21 ಪದಗಳನ್ನು ಸರಿಯಾಗಿ ಉಚ್ಚರಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಹರಿಣಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಮತ್ತೋರ್ವ ಭಾರತ ಮೂಲದ ವಿದ್ಯಾರ್ಥಿ (Student) ಕೊಲೊರಾಡೋದ 12 ವರ್ಷದ ವಿಕ್ರಮ್ ರಾಜು, 15 ಪದಗಳನ್ನು ಸರಿಯಾಗಿ ಉಚ್ಚರಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Tap to resize

Latest Videos

ಟೆಕ್ಸಾಸ್‌ನ ಮೆಕ್‌ಗ್ರೆಗರ್‌ನ 13 ವರ್ಷದ ವಿಹಾನ್ ಸಿಬಲ್ ಮೂರನೇ ಸ್ಥಾನ ಗಳಿಸಿದ್ದರೆ, ಇನ್ನೊಂದು ವರ್ಷದ ಅರ್ಹತೆಯನ್ನು ಸಹ ಹೊಂದಿದ್ದಾರೆ. ವಾಷಿಂಗ್ಟನ್‌ನ ಬೆಲ್ಲೆವ್ಯೂನಿಂದ ಎಂಟನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಸಹರ್ಶ್ ವುಪ್ಪಲಾ ನಾಲ್ಕನೇ ಸ್ಥಾನ ಪಡೆದರು.

ಶಾಲೆಗಳಿಗೆ ಪರಿಷ್ಕೃತ ಪಠ್ಯ ಬದಲು ಹಳೇ ಪಠ್ಯಪುಸ್ತಕ ರವಾನೆ..!

ಅಮೆರಿಕ ಮಾಧ್ಯಮ ವರದಿಗಳ ಪ್ರಕಾರ, ಸ್ಪೆಲ್-ಆಫ್ ಸ್ಪರ್ಧೆ ಹಲವಾರು  ಸುತ್ತುಗಳನ್ನು ಅನುಸರಿಸಿತ್ತು. ಇದರಲ್ಲಿ ಯಾವುದೇ ಸ್ಪರ್ಧಿಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.  ಹೀಗಾಗಿ 90 ಸೆಕೆಂಡ್‌ಗಳ ಕ್ಷಿಪ್ರ ಅವಧಿಯ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹರಿಣಿ ಲೋಗನ್ ಜಯಶಾಲಿಯಾಗಿದ್ದಾರೆ. ಪ್ರಶಸ್ತಿ ಜಯಿಸಿದ ಬಳಿಕ ಮಾತನಾಡಿದ ಹರಿಣಿ, “ಇದು ನನ್ನ ಕನಸಾಗಿತ್ತು. ನಾನು ಅದರಲ್ಲಿಯೇ ಮುಳಗಿ ಹೋಗಿದ್ದೆ. ನಾನು ಸ್ಪರ್ಧಿಸುತ್ತೇನೆ. ಅಂತಿಮ ಹಂತಕ್ಕೆ ಹೋಗುತ್ತೇನೆ. ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ. ಏನಾಗುತ್ತದೆಯೋ ಅದನ್ನು ನೋಡೋಣ ಎಂಬುದು ನನ್ನ ಭಾವನೆಯಾಗಿತ್ತು. ನಿಜ ಹೇಳಬೇಕೆಂದರೆ ಕಳೆದ ವರ್ಷ ಇದನ್ನು ಪರಿಚಯಿಸಿದಾಗ, ನಾನು ಸ್ವಲ್ಪ ಭಯಭೀತಳಾಗಿದ್ದೆ. ಅದು ನನ್ನ ವಿಷಯ. ಆ ಸೆಟ್ಟಿಂಗ್‌ನಲ್ಲಿ ನಾನು ಹೇಗೆ ಕಾರ್ಯನಿರ್ವಹಿಸುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಅಂತಿಮವಾಗಿ ನಾನು ಜಯಿಸಿದ್ದು ಖುಷಿ ತಂದಿದೆ ಎಂದಿದ್ದಾರೆ. 

ಬಳಿಕ ಎರಡನೇಯವರಾಗಿ ಪ್ರಶಸ್ತಿ ವಂಚಿತರಾದ ವಿಕ್ರಮ್ ದುಃಖದಿಂದ ಕಣ್ಣೀರು ಹಾಕುತ್ತಲೇ “ಮುಂದಿನ ವರ್ಷ ನಾವು ನಿಮ್ಮನ್ನು ನೋಡುತ್ತೇವೆ (ಎದುರಿಸುತ್ತೇನೆ)” ಎಂದರು.

2019 ರಿಂದ ಮೊದಲ ಬಾರಿಗೆ ಸಂಪೂರ್ಣವಾಗಿ ವೈಯಕ್ತಿಕವಾಗಿ ನಡೆದ ಮೂರು ದಿನಗಳ ಸ್ಪರ್ಧೆಯು ದೇಶಾದ್ಯಂತ ಮತ್ತು ವಿದೇಶದಿಂದ ಕೆಲವು ವಿದ್ಯಾರ್ಥಿಗಳನ್ನು ಸೆಳೆದಿತ್ತು. ಹೆಚ್ಚಿನವರು ಮಧ್ಯಮ-ಶಾಲಾ ವಯಸ್ಸಿನವರಾಗಿದ್ದಾರೆ. ಸ್ಥಳೀಯ ಮತ್ತು ಪ್ರಾದೇಶಿಕ ಸ್ಪೆಲಿಂಗ್ ಬೀ ಗೆದ್ದ ನಂತರ ಅನೇಕರು ಮೊದಲ ಬಾರಿಗೆ ಅರ್ಹತೆ ಪಡೆದವರಾಗಿದ್ದರು. ಈ ಪೈಕಿ ಹರಿಣಿ ಮತ್ತು ವಿಕ್ರಮ್ ಮಾತ್ರ ಅನುಭವಿಗಳಾಗಿದ್ದರು.

ಪಠ್ಯ ಪರಿಷ್ಕರಣೆ: ಚಕ್ರತೀರ್ಥ ಬಂಧನದವರೆಗೆ ಹೋರಾಟ

ಇನ್ನು ಈ ಜಯದೊಂದಿಗೆ ಹರಿಣಿ 50,000 ಡಾಲರ್ ಗಿಂತ ನಗದು ಮತ್ತು ಬಹುಮಾನ ಗೆದ್ದಿದ್ದಾರೆ. ಮಾಜಿ ಸ್ಪೆಲ್ಲರ್ ಗ್ರೇಸ್ ವಾಲ್ಟರ್ಸ್ ಅವರಿಂದ ತರಬೇತಿ ಪಡೆದ ಐದನೇ ಸ್ಕ್ರಿಪ್ಸ್ ಚಾಂಪಿಯನ್ ಆಗಿದ್ದಾರೆ.

ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಹರಿಣಿ ಎರಡು ದಶಕಗಳಿಂದ ಮುಂದುವರಿದಿರುವ ಪರಂಪರೆ ಮುಂದುವರೆಸಿದ್ದಾರೆ.  ಕಳೆದ 23 ಚಾಂಪಿಯನ್‌ ಷಿಪ್ ಗಳಲ್ಲಿ ಪ್ರಶಸ್ತಿ ಜಯಿಸಿದವರ ಪೈಕಿ 21 ಮಂದಿ ದಕ್ಷಿಣ ಏಷ್ಯಾದ ಮೂಲದವರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ, ಭಾರತ ಮೂಲದ ಅಮೆರಿಕನ್ನರು ಅಮೆರಿಕ ಜನಸಂಖ್ಯೆಯ ಸುಮಾರು 1 ಪ್ರತಿಶತವನ್ನು ಹೊಂದಿದ್ದರೂ ಸಹ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅಮೆರಿಕ ಸ್ಪೆಲ್ಲಿಂಗ್ ಬೀ ಸಣ್ಣ ಜನಾಂಗೀಯ ಸಮುದಾಯದ ಯುವ ಮಕ್ಕಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.

click me!