ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ

By Suvarna News  |  First Published Feb 8, 2021, 2:38 PM IST

ಪ್ರಸಕ್ತ ಸಾಲಿನ ಯುರೋಪಿಯನ್  ಗರ್ಲ್ಸ್ ಮ್ಯಾಥಮೆಟಿಕಲ್ ಒಲಂಪಿಯಾಡ್‌ನಲ್ಲಿ ಭಾಗವಹಿಸಲು ಹರಿಯಾಣ ಇಬ್ಬರು ಪ್ರತಿಭಾವಂತ ಸಹೋದರಿಯರು ಸೇರಿ ನಾಲ್ವರ ತಂಡವನ್ನು ಭಾರತವು ಕಳುಹಿಸುತ್ತಿದೆ. ಹರಿಯಾಣ ಇಬ್ಬರು ಸಹೋದರಿಯರಂತೂ ಕಬ್ಬಿಣದ ಕಡಲೆ ಎನಿಸಿರುವ ಗಣಿತದಲ್ಲಿ  ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ. ಹಾಗಾಗಿ, ಈ ಇಬ್ಬರ ಸ್ಪರ್ಧೆ ಗಣಿತದ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಲು ಕಾರಣವಾಗಬಹುದು.


ಕೆಲವರಿಗೆ ಗಣಿತ ಕಬ್ಬಿಣದ ಕಡಲೆ ಇದ್ದಂಗೆ. ಎಷ್ಟೇ ಪ್ರಯತ್ನಿಸಿದ್ರೂ ತಲೆಗೆ ಹತ್ತಲ್ಲ. ಆದ್ರೆ ಇನ್ನು ಕೆಲವೇ ಮ್ಯಾಥ್ಸ್ ಅಂದ್ರೆ ನೀರು ಕುಡಿದಂಗೆ. ಚಟ ಪಟ ಅಂತ ಗಣಿತದ ಎಲ್ಲ ಸವಾಲ್‌ಗಳನ್ನ ಪರಿಹರಿಸೋದ್ರಲ್ಲಿ ಫಟಿಂಗರು. ಹೀಗೆ ಗಣಿತದಲ್ಲಿ ಮೇಲುಗೈ ಸಾಧಿಸಿರೋ ಇಬ್ಬರು ಸಹೋದರಿಯರು, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ  ಭಾರತವನ್ನು ಪ್ರತಿನಿಧಿಸಲು ಹೊರಟಿದ್ದಾರೆ. ‌

SSLC ಪರೀಕ್ಷೆ ಬರೆಯಲು 11 ವರ್ಷದ ವಿದ್ಯಾರ್ಥಿ ರೆಡಿ

Tap to resize

Latest Videos

undefined

ಹೌದು.. ಹರಿಯಾಣದ ಫರಿದಾಬಾದ್‌ನ ಅಕ್ಕ-ತಂಗಿ, ಜಾಗತಿಕ ಗಣಿತ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ೧೧ ನೇ ತರಗತಿ ಓದುತ್ತಿರುವ ಅನುಷ್ಕಾ ಅಗ್ಗರ್ವಾಲ್ ಹಾಗೂ ೯ನೇ ತರಗತಿ ಓದುತ್ತಿರೋ ಗುಂಜನ್ ಅಗ್ಗರ್‌ವಾಲ್, ೨೦೨೧ರ ಯುರೋಪಿಯನ್ ಗರ್ಲ್ಸ್ ಮ್ಯಾಥ್‌ಮೆಟಿಕಲ್ ಒಲಂಪಿಯಾಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಅಂತಾರಾಷ್ಟ್ರೀಯ ಒಲಂಪಿಯಾಡ್ಗೆ ಭಾರತ ಇದೇ ಮೊದಲ ಬಾರಿಗೆ ನಾಲ್ಕು ಸದಸ್ಯರ ತಂಡವನ್ನು ಕಳುಹಿಸುತ್ತಿದೆ.

ಈ ಒಲಿಂಪಿಯಾಡ್, ಹಲವಾರು ಸ್ವತಂತ್ರ ಸಂಸ್ಥೆಗಳು ತಮ್ಮ ಯೋಗ್ಯತೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಮತ್ತಷ್ಟು ಸುಧಾರಿಸಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ.

ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್, ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಂತೆಯೇ ಅಂತರರಾಷ್ಟ್ರೀಯ ಗಣಿತ ಸ್ಪರ್ಧೆಯಾಗಿದ್ದು, ಸತತವಾಗಿ ಎರಡು ಪರೀಕ್ಷೆಗಳನ್ನ ನಡೆಸಲಾಗುತ್ತದೆ  ಇದರಲ್ಲಿ ಭಾಗವಹಿಸುವ ದೇಶಗಳು ನಾಲ್ಕು ಬಾಲಕಿಯರನ್ನ ಒಳಗೊಂಡ ತಂಡಗಳನ್ನು ಕಳುಹಿಸುತ್ತವೆ.
 
ಕನಸುಗಳನ್ನು ಹೊಂದುವುದು ಒಂದು ವಿಷಯವಾದ್ರೆ ಆ ಕನಸುಗಳನ್ನು ಈಡೇರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವುದು ಇನ್ನೊಂದು. ಪ್ರತಿಷ್ಠಿತ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್‌ನಲ್ಲಿ ಸಹೋದರಿಯರಾದ ಅನುಷ್ಕಾ ಮತ್ತು ಗುಂಜನ್ ಅಗರ್‌ವಾಲ್ ಅವರನ್ನು ನೋಡಲು ನಾವು ಹೆಮ್ಮೆಪಡುತ್ತೇವೆ ಅಂತಾರೆ ವೇದಾಂತು ಅಕಾಡೆಮಿ ಸಹ ಸಂಸ್ಥಾಪಕ  ಆನಂದ್ ಪ್ರಕಾಶ್.  ಈ ಒಲಿಂಪಿಯಾಡ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ನಾಲ್ಕು ಹುಡುಗಿಯರಲ್ಲಿ ಇಬ್ಬರು ವೇದಾಂತ ವಿದ್ಯಾರ್ಥಿಗಳು ಎಂಬುದು ಒಂದು ಗೌರವ. ನಿಮ್ಮ ನಂಬಲಾಗದ ಸಾಧನೆಗೆ ಅಭಿನಂದನೆಗಳು ಎಂದು ಹೇಳುತ್ತಾರೆ ಆನಂದ್ ಪ್ರಕಾಶ್.

ಅಂತರರಾಷ್ಟ್ರೀಯ ಒಲಿಂಪಿಯಾಡ್ ಅನ್ನು ಭೇದಿಸಲು ವೇದಾಂತು ಒಲಿಂಪಿಯಾಡ್ ಲಿಟ್ಮಸ್ ಟೆಸ್ಟ್ (ವಿಒಎಲ್ಟಿ) - ಲೈವ್ ಆನ್‌ಲೈನ್ ಕಲಿಕಾ ವೇದಿಕೆಯನ್ನು ಪ್ರಾರಂಭಿಸಿದೆ. VOLT ಅನ್ನು ಮಾರ್ಗದರ್ಶಕರ ವೇದಿಕೆಯಾಗಿ ಬಳಸಲಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಅಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ವೇದಿಕೆಗಳಲ್ಲಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

 ವೇದಾಂತಿನಲ್ಲಿ ಜೆಇಇ ಪ್ರವೇಶಕ್ಕೆ ತಯಾರಿ ನಡೆಸುತ್ತಿರುವ ಅನುಷ್ಕಾ ಅಗರ್‌ವಾಲ್ ಈಗಾಗಲೇ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ತನ್ನ ಅನುಭವದಿಂದ, ಅನುಷ್ಕಾ ತಂಡದ ಇತರ ಸದಸ್ಯರಿಗೆ ಕಾರ್ಯತಂತ್ರ ಮತ್ತು ಮಾರ್ಗದರ್ಶನ ನೀಡೋ ಮೂಲಕ ದೇಶಕ್ಕೆ ಚಿನ್ನದ ಭರವಸೆ ಮೂಡಿಸಿದ್ದಾರೆ.

ಬಹಳಷ್ಟು ಮಕ್ಕಳಿಗೆ ಗಣಿತ ಎಂಬುದು ತೀರಾ  ಕಷ್ಟ ವಿಷಯವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಗಣಿತ ಮೇಲೆ ಆಸಕ್ತಿಯನ್ನು ಹೆಚ್ಚಿಸದಿರುವುದು. ಹಾಗಾಗಿ ಗ್ರಾಮೀಣ ಭಾಗದ ಮಕ್ಕಳೂ ಸೇರಿದಂತೆ ನಗರದ ಪ್ರದೇಶದ ಮಕ್ಕಳಲ್ಲಿ ಗಣಿತ ವಿಷಯ ಎಂದರೆ ಒಂಥರಾ ಹೆದರಿಕೆ ಮತ್ತು ಆಸಕ್ತಿ ಇಲ್ಲದಿರುವುದನ್ನು ಕಾಣಬಹುದು. ಇಂಥ ಸಂದರ್ಭದಲ್ಲಿ ಭಾರತವು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ಇಬ್ಬರು ಸಹೋದರಿಯರು ಸೇರಿದಂತೆ ನಾಲ್ವರ ತಂಡ ಹೋಗುತ್ತಿರುವುದು ಹಲವು ಜನರಿಗೆ ಸ್ಫೂರ್ತಿಯನ್ನು ಒದಗಿಸಬಹುದು. ಮತ್ತಷ್ಟು ಮಕ್ಕಳ ಗಣಿತದ  ಬಗ್ಗೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಲು ಈ ಒಲಂಪಿಯಾಡ್ ಹೆಚ್ಚು ನೆರವು ನೀಡಬುಹದು. ಹಾಗಾಗಿ, ಪ್ರಸಕ್ತ ಸಾಲಿನ ಒಲಂಪಿಯಾಡ್ ವಿಶೇಷ ಮಹತ್ವ ಬಂದಿದೆ ಎಂದು ಹೇಳಬಹುದು.

ನೌಕಾಪಡೆಯಲ್ಲಿ ಕೆಲಸ ಮಾಡಬೇಕೆ? ಇಲ್ಲಿವೆ ನೋಡಿ ಖಾಲಿ ಹುದ್ದೆಗಳು

click me!