ದಾವಣಗೆರೆ 10 ನೇ ಘಟಿಕೋತ್ಸವದಲ್ಲಿ ಅಧ್ಯಕ್ಷಿಯ ಭಾಷಣ ಮಾಡಿದ ರಾಜ್ಯಪಾಲರು ಈ ಎಲ್ಲಾ ಮಕ್ಕಳ ಪೋಷಕರು ಶಿಕ್ಷಣ ಕೊಡಿಸಿದ್ದಾರೆ, ಇನ್ನಷ್ಟು ಸಾಧನೆ ಮಾಡಲು ಇನ್ನಷ್ಡು ಪ್ರಗತಿ ಸಾಧಿಸಲಿ ಎಂದರು.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಫೆ.28): 2009 ರಿಂದಲೇ ಈ ವಿವಿ ಸಾಕಷ್ಟು ಸಾಧನೆ ಮಾಡಿದ್ದು, ಇದಕ್ಕೆ ಕಾರಣಕರ್ತರಿಗೆ ಅಭಿನಂದನೆ ಸಲ್ಲಿಸುವೆ, ಚಂದ್ರಶೇಖರಯ್ಯ, ವೀರಣ್ಣ, ಶಿವಣ್ಣರವರು ಅವರ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಮಾಡಿದ್ದು, ಶಿವಣ್ಣನವರಿಗೆ ಮರಣೋತ್ತರ ಡಾಕ್ಟರೇಟ್ ಕೊಡಲಾಗಿದ್ದು, ಅವರ ಡಾಕ್ಟರೇಟ್ ನ್ನು ಅವರ ಪತ್ನಿ ಜಸ್ಟಿಸ್ ಡಿಸೋಜ್ ರವರು ಸ್ವೀಕರಿಸಿದ್ದಾರೆ. ಇನ್ನು ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸುವೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಿಸಿದರು. ದಾವಣಗೆರೆ 10 ನೇ ಘಟಿಕೋತ್ಸವದಲ್ಲಿ ಅಧ್ಯಕ್ಷಿಯ ಭಾಷಣ ಮಾಡಿದ ರಾಜ್ಯಪಾಲರು ಈ ಎಲ್ಲಾ ಮಕ್ಕಳ ಪೋಷಕರು ಶಿಕ್ಷಣ ಕೊಡಿಸಿದ್ದಾರೆ, ಇನ್ನಷ್ಟು ಸಾಧನೆ ಮಾಡಲು ಇನ್ನಷ್ಡು ಪ್ರಗತಿ ಸಾಧಿಸಲಿ, ಭಾರತಕ್ಕೆ ಪ್ರಪಂಚ ವಿಶ್ವಗುರುವಾಗುವತ್ತ ದಾಪುಗಾಲು ಇಟ್ಟಿದೆ. ಇವಾಗ್ಲೂ ಕೂಡ ವಿಶ್ವಗುರು ಸ್ಥಾನದಲ್ಲಿದೆ ನಮ್ಮ ಭಾರತ, ನಾವೆಲ್ಲ ಒಂದು ಕುಟುಂಬದ ಸದಸ್ಯರಾಗಿದ್ದೇವೆ ಎಂದರು.
ಸಮೂಹ ಸಂವಹನ ಹಳೇ ವಿದ್ಯಾರ್ಥಿಗಳ ಸಂಘದ 11ನೇ ವಾರ್ಷಿಕ ಸಭೆಯಲ್ಲಿ IFFCO IIMCA
ಮಾತೃಭಾಷೆ ಶಿಕ್ಷಣ - ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವನ್ನಾಗಿಸುತ್ತದೆ:
ನಮ್ಮ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತಿದೆ ನಮ್ಮ ಪೂರ್ವಜರು ಹೇಳ್ತಿದ್ದರು ಭಾರತ ಒಂದು ಬಂಗಾರದ ಗುಬ್ಬಿ ಇದ್ದಂತೆ ಎಂದು, ಅದರಂತೆ ನಾವು ನಮ್ಮ ಪೂರ್ವಜರ ಹೇಳಿದ ಮಾತುಗಳ ಮೇಲೆ ಪಾಲನೆಮಾಡಿ, ಭಾರತದ ಸಾಕಷ್ಟು ಯೋಜನೆಗಳಿವೆ ಅ ಯೋಜನೆಗಳನ್ನು ಬಳಕೆ ಮಾಡಿಕೊಂಡಿ ಭಾರತವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯಬೇಕಾಗಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿ ತರಲಾಗಿದ್ದು ಅದರಲ್ಲಿ ಮಾತೃಭಾಷೆಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ.. ನಮ್ಮ ಮಧ್ಯೆ ಸಾಕಷ್ಟು ಮಾತೃಭಾಷೆ ಮಾತನಾಡಲಾಗುತ್ತಿದೆ.. ಅದರಂತೆ ಇಂಜಿನಿಯರ್ ಟೆಕ್ನಾಲಜಿ ಯಲ್ಲಿ ಮಾತೃಭಾಷೆ ಉಪಯೋಗ ಆಗಲಿದೆ. ಚೀನಾ, ಜಪಾನ, ಅಮೇರಿಕ ಹೀಗೆ ಎಲ್ಲಾ ದೇಶಗಳು ಮಾತೃಭಾಷೆ ಯಲ್ಲಿ ವ್ಯವಹರಿಸುತ್ತವೆ, ಅವರ ಪ್ರಾಡಕ್ಟ್ ಮೇಲೆ ಅವರ ಮಾತೃಭಾಷೆ ನಮೂದಿಸಲಾಗುತ್ಯದೆ. ಭಾರತವನ್ನು ಶಕ್ತಿ ರಾಷ್ಟ್ರವನ್ಮಾಗಿ ಮಾಡಲು ಮಾತೃಭಾಷೆ ಮಾಧ್ಯಮವಾಗಲಿದೆ ಎಂದರು.
18 ಚಿನ್ನದ ಪದಕ ಗೆದ್ದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ: ವಿಟಿಯು ಇತಿಹಾಸದಲ್ಲೇ ಮೊದಲು!
ಪರಿಸರದ ಕಾಳಜಿ ನಮ್ಮೆಲ್ಲರ ಜವಾಬ್ಧಾರಿ:
ಮಕ್ಕಳ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ಅಂದ್ರೆ ಡ್ರಾಪ್ ಹೌಟ್ ಆಗುತ್ತಿದ್ದಾರೆ. ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ದೂರದ ಊರುಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ ದತ್ತು ಪಡೆದು ನೀವು ಮಕ್ಕಳಿಗೆ ಶಿಕ್ಷಣ ಕೊಡಿಸಬಹುದಾಗಿದೆ. ಸರ್ಕಾರದ ಇಚ್ಚೇ ಆಕಾಂಕ್ಷೆ ಇರುವುದು ದೇಶದಲ್ಲಿ ಪ್ರತಿಯೊಬ್ಬರಿಗು ಶಿಕ್ಷಣ ಸಿಗಬೇಕೆಂಬುದು. ಶಿಕ್ಷಣದಿಂದ ಭಾರತ ಶಕ್ತಿ ರಾಷ್ಟ್ರ ಆಗಲಿದೆ. ಇನ್ನ 25 ವರ್ಷಗಳನ್ನು ಕಳೆದ್ರೆ ಸ್ವಾತಂತ್ರ್ಯ ಬಂದು ನೂರು ವರ್ಷಗಳು ತುಂಬಲಿವೆ. ನಾವು ನಮ್ಮ ದೇಶವನ್ನು ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕಾಗಿದೆ. ವಿದ್ಯಾರ್ಥಿಗಳಿಂದ ನನ್ನ ವಿನಂತಿ ಇದೆ ನೀವು ಶಿಕ್ಷಣದೊಂದಿಗೆ ಕ್ರೀಡೆಯಲ್ಲು ಭಾಗಿಯಾಗ್ಬೇಕಾಗಿದೆ. ನಮ್ಮ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಅಗ್ರಸ್ಥಾನ ಅಲಂಕರಿಸಬೇಕಾಗಿದೆ. ದೇಶದಲ್ಲಿ ಕೆಲ ಸಮಸ್ಯೆಗಳಿವೆ ಅ ಸಮಸ್ಯೆಗಳನ್ನು ಹೋಗಲಾಡಿಸಬೇಕಾಗಿದೆ. ನೀರು, ಗಾಳಿ ಪರಿಸರವನ್ನು ರಕ್ಷಣೆ ಮಾಡ್ಬೇಕಾಗಿದೆ. ಅದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದರು.