
ಮೂಡುಬಿದಿರೆ(ಡಿ.12): ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಗಾಧವಾದ ಶಕ್ತಿಯಿರುತ್ತದೆ. ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಹೊರತರುವುದೇ ಶಿಕ್ಷಣದ ಉದ್ದೇಶ. ಭಾರತೀಯ ಸಂಸ್ಕೃತಿಯಾದ ಯೋಗ, ಧ್ಯಾನ, ಪ್ರಾರ್ಥನೆ ಮುಂತಾದ ಚಟುವಟಿಕೆಗಳನ್ನು ಸಂಸ್ಥೆಯಲ್ಲಿ ನಡೆಸುತ್ತಾ ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಭಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಇಲ್ಲಿನ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ದಶಮ ಸಂಭ್ರಮಾಚರಣೆಯ ಸಂಭ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ನಮ್ಮ ದೇಶ ಯಶಸ್ವಿಯಾಗಿ ಕೊರೋನಾವನ್ನು ಎದುರಿಸಿದೆ. ಇಡೀ ಪ್ರಪಂಚದಲ್ಲಿ ಬೇರೆ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡಿ ಶಕ್ತರನ್ನಾಗಿಸುವ ಶಕ್ತಿ ಇದ್ದರೆ ಅದು ಭಾರತಕ್ಕೆ ಮಾತ್ರ. ಎಕ್ಸಲೆಂಟ್‌ನಂಥಹ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದರ ಮೂಲಕ ಭವಿಷ್ಯಕ್ಕೆ ಭರವಸೆಯನ್ನು ನೀಡಿದೆ ಎಂದರು.
ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರಕಾರ ಚಿಂತನೆ
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಶಿಕ್ಷಣ ಸಚಿವರಿಂದ ಸನ್ಮಾನಕ್ಕೊಳಪಟ್ಟವಿದ್ಯಾರ್ಥಿಗಳಿಗೆ ಇದು ಬಹಳ ಮಹತ್ವದ ದಿನ ಎಂದರು.
ನೀಟ್ ಪರೀಕ್ಷೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಎಎಫ್‌ಎಂಸಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ರಾಜೇಶ್ ಪರಶ್ರಾಮ್ ಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಐವತ್ತು ಸಾವಿರ ರು. ನಗದು ಬಹುಮಾನ ವಿತರಿಸಲಾಯಿತು. ಹಾಗೆಯೇ ನೀಟ್ ಪರೀಕ್ಷೆಯ ಮೂಲಕ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಮೂಲಕ ಸೀಟು ಪಡೆದುಕೊಂಡ ಹನ್ನೊಂದು ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.
ಸಚಿವ ಬಿ. ಸಿ. ನಾಗೇಶ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಮೂಡುಬಿದಿರೆಯ ಹಿರಿಯ ವಕೀಲ, ಬಾಹುಬಲಿ ಪ್ರಸಾದ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರು ಯುವರಾಜಜೈನ್, ಪಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಈ ಸಂದರ್ಭ ಉಪಸ್ಥಿತರಿದ್ದರು. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್ ಜೈನ್ ನಿರೂಪಿಸಿದರು.