ಪ್ರಮುಖ ದೇಗುಲಗಳಿಗೆ ಸ್ವಾಯತ್ತೆ ನೀಡಲು ಚಿಂತನೆ-ಅಶ್ವತ್ಥ ನಾರಾಯಣ| ಯಡತೊರೆ ಮಠದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವ| ರಾಜ್ಯದ ಪ್ರಮುಖ ದೇವಾಲಯಗಳಿಗೂ ಸ್ವಾಯತ್ತತೆ ನೀಡುವ ಸಂಬಂಧ ಕಾನೂನು ಸುಧಾರಣೆ ಮಾಡಲು ಚಿಂತನೆ|
ಭೇರ್ಯ(ಫೆ.18): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪಠ್ಯಕ್ರಮಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೆ.ಆರ್. ನಗರ ತಾಲೂಕಿನ ಶ್ರೀ ಜಪ್ಯೇಶ್ವರ (ಜಪದಕಟ್ಟೆ) ಕ್ಷೇತ್ರದಲ್ಲಿ ಕೃಷ್ಣರಾಜನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಿಂದ ನಡೆದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
undefined
PES ವಿವಿ ವಿದ್ಯಾರ್ಥಿಗಳ ಸಂಶೋಧನೆ: ಫೆ. 28ಕ್ಕೆ ಉಪಗ್ರಹ ಉಡಾವಣೆ
ಭಗವದ್ಗೀತೆ ಸೇರಿ ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ಅಂಶಗಳು ಸೇರಿ ಮುಖ್ಯಗುರಿಯಾದ ಮೌಲ್ಯಾಧಾರಿತ ಶಿಕ್ಷಣ ಜಾರಿಗೆ ಅಳವಡಿಕೆ ಮಾಡಲಾಗುವುದು ಎಂದು ಪ್ರಕಟಿಸಿದರು. ‘ರಾಜ್ಯದ ಪ್ರಮುಖ ದೇವಾಲಯಗಳಿಗೂ ಸ್ವಾಯತ್ತತೆ ನೀಡುವ ಸಂಬಂಧ ಕಾನೂನು ಸುಧಾರಣೆ ಮಾಡಲು ಚಿಂತನೆ ನಡೆಸಲಾಗುವುದು. ಎಲ್ಲ ಕಾಲಘಟ್ಟದಲ್ಲೂ ಸ್ವಾಯತ್ತೆ ನೀಡುವುದು ಸೂಕ್ತ. ಯಾವ್ಯಾವ ಉದ್ದೇಶಗಳಿಗೆ ಸ್ಥಾಪನೆಯಾಗಿವೆ ಎಂಬ ಆಧಾರದಲ್ಲಿ ದೇವಾಲಯಗಳು, ಮಠಗಳಲ್ಲದೆ ಎಲ್ಲ ಕ್ಷೇತ್ರಗಳಿಗೂ ಸ್ವಾಯತ್ತತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಜವಾಬ್ದಾರಿ’ ಎಂದರು.
ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಎಡತೊರೆ ಶ್ರೀ ಯೋಗಾನಂದೇಶ್ವರ ಮಠದ ಪೀಠಾಧೀಶ ಶಂಕರ ಭಾರತಿ ಸ್ವಾಮೀಜಿ, ವಿವಿಧ ಮಠಾಧೀಶರು ಭಾಗವಹಿಸಿದ್ದರು.