ರಷ್ಯಾ- ಯುಕ್ರೇನ್ ಯುದ್ಧದ ಬಿಸಿ ಶಾಲಾ ಮಕ್ಕಳಿಗೂ ತಟ್ಟಿದೆ. ಶಾಲೆ ಆರಂಭಗೊಂಡರೂ ಪಠ್ಯಪುಸ್ತಕ ಮಾತ್ರ ಮಕ್ಕಳ ಕೈ ಸೇರುವುದು ತುಂಬಾ ತಡವಾಗಲಿದೆ. ಕಾರಣ ರಷ್ಯಾ ಉಕ್ರೇನ್ ವಾರ್.
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.20): ರಷ್ಯಾ- ಯುಕ್ರೇನ್ ಯುದ್ಧದ (Russia Ukraine War) ಬಿಸಿ ಶಾಲಾ ಮಕ್ಕಳಿಗೂ (School Childrens) ತಟ್ಟಿದೆ. ಶಾಲೆ ಆರಂಭಗೊಂಡರೂ ಪಠ್ಯಪುಸ್ತಕ (Text Book) ಮಾತ್ರ ಮಕ್ಕಳ ಕೈ ಸೇರುವುದು ತುಂಬಾ ತಡವಾಗಲಿದೆ. ಕಾರಣ ರಷ್ಯಾ ಉಕ್ರೇನ್ ವಾರ್. ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದಾಗಿ ಮುದ್ರಣ ಕಾಗದ ಸಮಸ್ಯೆ ಎದುರಾಗಿದೆ. ಕಚ್ಚಾ ಕಾಗದ ಸಿಗದ ಕಾರಣಕ್ಕೆ ಶೇ.40ಕ್ಕಿಂತಲೂ ಹೆಚ್ಚು ಪರಿಷ್ಕೃತ ಪಠ್ಯ ಪುಸ್ತಕ ಮುದ್ರಣ ಬಾಕಿ ಉಳಿದಿದೆ. ಇನ್ನೂ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮಿಲ್‌ಗಳು ಪ್ರತಿ ತಿಂಗಳು ಕೇವಲ ಶೇ.10ರಷ್ಟು ಕಾಗದ ಮಾತ್ರ ಸರಬರಾಜು ಮಾಡ್ತೀವೆ. ಹೀಗಾಗಿ ಪಠ್ಯಪುಸ್ತಕ ಇಲ್ಲದೇ ಶಾಲಾರಂಭದ ಬಗ್ಗೆ ಶಿಕ್ಷಣ ಇಲಾಖೆ ತೆಲೆ ಕೆಡಿಸಿಕೊಂಡಿದೆ.
ಇತ್ತ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಾಗಿದೆ. ಹೀಗಾಗಿ ಹೊಸ ಪಠ್ಯ ಪುಸ್ತಕ ಇಲ್ಲದೆ ಶಿಕ್ಷಕರಿಗೆ ಪಾಠ ಮಾಡೋದಕ್ಕು ಕಷ್ಟವಾಗಿದೆ. ಆದ್ರೆ ಹಳೆ ಪಠ್ಯ ಬಳಕೆ ಮಾಡಿ ಪಾಠ ಕಲಿಯೋದು ಮಕ್ಕಳಿಗೆ ಅಸಾಧ್ಯ ಅನ್ನುವಂತಾಗಿದೆ. ಹೀಗಾಗಿ ಪಠ್ಯಪುಸ್ತಕಗಳನ್ನ ಮಕ್ಕಳಿಗೆ ಬೇಗ ತಲುಪಿಸಿ ಎಂದು ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ. ಶಾಲೆಯೇನೋ ಆರಂಭಗೊಂಡಿದೆ. ಆದ್ರೆ ಮಕ್ಕಳಿಗೆ ಪಠ್ಯ ಪುಸ್ತಕ ಇನ್ನು ಕೈ ಸೇರಿಲ್ಲ. ಹೀಗಾಗಿ ಮೇ 16ರಿಂದಲೇ ಶಾಲೆ ಆರಂಭಿಸಿ ಕಲಿಕಾ ಚೇತರಿಕೆ ಶುರುಮಾಡಲಾಗಿದೆ. ಹೀಗಾಗಿ ಖಾಸಗಿ ಶಾಲಾ ಒಕ್ಕೂಟದಿಂದ ಅಪಸ್ವರ ಕೇಳಿ ಬಂದಿದೆ. ರಾಜ್ಯದಲ್ಲಿ 21 ಸಾವಿರ ಖಾಸಗಿ ಅನುದಾನರಹಿತ ಶಾಲೆಗಳಿದ್ದು ಪುಸ್ತಕವಿಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಲಿದೆ. ಬೇಗ ಪಠ್ಯ ಪುಸ್ತಕಗಳನ್ನ ನೀಡಿ ಅಂತಿದೆ ಖಾಸಗಿ ಶಾಲಾ ಒಕ್ಕೂಟ.
Mangaluru: ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ತಾಲಿಬಾನ್ ಸಂಸ್ಕೃತಿ: ಖಾದರ್
ಒಟ್ಟಿನಲ್ಲಿ 2021-22ನೇ ಸಾಲಿನಲ್ಲಿ 83 ಶೀರ್ಷಿಕೆಯಡಿ ಮುದ್ರಣಗೊಂಡಿರುವ 6,76,997 ಪಠ್ಯಪುಸ್ತಕಗಳು ಅನುಪಯುಕ್ತವಾಗಿವೆ. ಇತ್ತ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಾಗಿದ್ದು, ಹೊಸ ಪಠ್ಯ ಬೇಕಾಗಿದೆ. ಆದ್ರೆ ಎರಡು ವಾರ ಮೊದಲೆ ಶಾಲೆಗಳ ಆರಂಭಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆಗೆ ಆತಂಕ ಎದುರಾಗಿದ್ದಂತು ನಿಜ. ಪಠ್ಯ ಪುಸ್ತಕ ಸಿಗದಿದ್ದರೆ ವಿದ್ಯಾರ್ಥಿಗಳಿಗೆ ಪಾಠ ತಡವಾಗಿ ಸಮಸ್ಯೆಯಾಗಲಿದೆ. ಈಗಾಗಲೇ ಕಳೆದೆರಡು ವರ್ಷದಿಂದ ಭೌತಿಕ ತರಗತಿಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರಿ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ವಿದ್ಯಾರ್ಥಿಗಳ ಶಾಲಾ ಚಟುವಟಿಕೆ ಬಗ್ಗೆ ಗಮನ ಹರಿಸಬೇಕಿದೆ.
ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಶೀಘ್ರವೇ ದೊರೆಯಲಿದೆ ಸಾರಿಗೆ ಸೌಲಭ್ಯ: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಹೇಳಿದ್ದಾರೆ. ಕೆನರಾ ಬ್ಯಾಂಕ್ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿ ಒದಗಿಸಲಾಗಿರುವ 2 ಮಾರುತಿ ಇಕೋ ವಾಹನಗಳನ್ನು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಂಗಳವಾರ (ಮಾ.29) ಕೆನರಾ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು.
ಶಾಲಾ ಮಕ್ಕಳೊಂದಿಗೆ ಸಿಎಂ ಬೊಮ್ಮಾಯಿ ಸಂವಾದ: ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿನಿ ಚೈತನ್ಯ!
ಯೋಜನೆ ಕುರಿತು ಮಾತನಾಡಿದ ಸಚಿವ ನಾಗೇಶ್ ಅವರು, ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಕಟ್ಟಡ ಮತ್ತು ಕೊಠಡಿ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇದರಿಂದ ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗುತ್ತದೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ಶಾಲೆಗೆ ಕರೆ ತರಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.