IIT Madras Premier Banker Upskilling: ಐಐಟಿ ಮದ್ರಾಸ್‌ನಿಂದ ಪ್ರೀಮಿಯರ್ ಬ್ಯಾಂಕರ್ ಅಪ್‌ಸ್ಕಿಲಿಂಗ್ ಕೋರ್ಸ್

By Suvarna News  |  First Published Mar 5, 2022, 6:18 PM IST

* ಪದವೀಧರರು ಅಥವಾ ಪದವಿಯ ಎರಡನೇ, ಮೂರನೇ ವರ್ಷದಲ್ಲಿರುವವರು ಅರ್ಜಿ ಸಲ್ಲಿಸಬಹುದು 
* ಮದ್ರಾಸ್‌ನ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಮತ್ತು ಇನ್‌ಫ್ಯಾಕ್ಟ್ ಪ್ರೊ ಸಹಯೋಗ
* ಡಿಜಿಟಲ್ ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ಸ್, ಬ್ಯಾಂಕಿಂಗ್ ಫೈನಾನ್ಷಿಯಲ್ ಟೂಲ್‌ಕಿಟ್ ಕೇಂದ್ರೀತ


ನವದೆಹಲಿ(ಮಾ.5): ಬ್ಯಾಂಕ್‌ (Bank) ಅಥವಾ ಫೈನಾನ್ಸ್ (Finance) ಕಂಪನಿಗಳಲ್ಲಿ ಕೆಲಸ ಮಾಡಲು ನಾಲೆಡ್ಜ್ ಅತ್ಯವಶ್ಯಕ. ಕೇವಲ ಕಾಲೇಜು ಕಲಿಕೆಯಿಂದ ಹೆಚ್ಚಾಗಿ ತಿಳಿಯಲು ಸಾಧ್ಯವಿಲ್ಲ. ಬ್ಯಾಂಕ್ ಬಗ್ಗೆ ತಿಳಿಯಬೇಕು ಅಂದ್ರೆ ಹಣಕಾಸು ಸಂಬಂಧಿತ ಜ್ಞಾನ, ವ್ಯವಹಾರ ತಿಳಿದಿರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕು. ಇದನ್ನು ಮನಗಂಡಿರುವ ಐಐಟಿ-ಮದ್ರಾಸ್‌ (IIT-Madras) , ವಿದ್ಯಾರ್ಥಿಗಳ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಪ್ರೀಮಿಯರ್ ಬ್ಯಾಂಕರ್ ಅಪ್‌ಸ್ಕಿಲ್ಲಿಂಗ್ (Premier Banker Upskilling) ಕೋರ್ಸ್‌ ಆರಂಭಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್‌ನ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಮತ್ತು ಇನ್‌ಫ್ಯಾಕ್ಟ್ ಪ್ರೊ, ಆಸಕ್ತ ಪದವೀಧರರಿಗೆ 12 ತಿಂಗಳ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕೋರ್ಸ್ ಅನ್ನು ಘೋಷಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಇನ್‌ಫ್ಯಾಕ್ಟ್ ಪ್ರೊ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತೆಯಲ್ಲಿ ಜ್ಞಾನವನ್ನು ಒದಗಿಸುವ ಉದ್ದೇಶದಿಂದ 'ಪ್ರೀಮಿಯರ್ ಬ್ಯಾಂಕರ್' ಎಂಬ ಉನ್ನತ ಕೌಶಲ್ಯ ಕಾರ್ಯಕ್ರಮವನ್ನು ಪರಿಚಯಿಸಿದೆ.

Tap to resize

Latest Videos

undefined

 UKRAINE EDUCATIONAL INSTITUTIONS: ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!

“ಸಕಾಲಿಕವಾಗಿ ಕೌಶಲ್ಯ ಮತ್ತು ಉನ್ನತೀಕರಣದ ಕೋರ್ಸ್‌ಗಳನ್ನು ನೀಡುವುದು ಬಹಳ ಮುಖ್ಯ. ಪ್ರಸ್ತುತ ಮಾರುಕಟ್ಟೆಗಳು ಮತ್ತು ಅವುಗಳ ಅವಶ್ಯಕತೆಗಳ ಮೇಲೆ ಕೋರ್ಸ್ ಕೇಂದ್ರೀಕರಿಸುತ್ತದೆ. ನಮ್ಮ ರಾಷ್ಟ್ರವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ವೇಗವಾಗಿ ಚಲಿಸುವ ಗುರಿಯನ್ನು ಹೊಂದಿದ್ದು, ನಮ್ಮ ಅಕಾಡೆಮಿ ಪ್ರಸ್ತಾಪಿಸಿರುವಂತಹ ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ತರಬೇತಿ ಕಂಪನಿಗಳ ಪ್ರಮುಖ ಅಧ್ಯಾಪಕರ ಸಹಾಯದಿಂದ ಶೀಘ್ರದಲ್ಲೇ ಇಂತಹ ಕಾರ್ಯಕ್ರಮಗಳನ್ನು ನೀಡುವುದು ಮುಖ್ಯವಾಗಿದೆ" ಅಂತಾರೆ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಮುಖ್ಯಸ್ಥ ಪ್ರೊಫೆಸರ್ ಕೆ ಮಂಗಳಾ ಸುಂದರ್ (K Mangala Sundar).

ಯಾವುದೇ ಪದವಿ (Degree) ಹೊಂದಿರುವವರು ಅಥವಾ ತಮ್ಮ ಪದವಿಯ ಎರಡನೇ ಅಥವಾ ಮೂರನೇ ವರ್ಷದಲ್ಲಿ ಇರುವ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.ಡಿಜಿಟಲ್ ಬ್ಯಾಂಕಿಂಗ್ (Digital Banking), ಮ್ಯೂಚುವಲ್ ಫಂಡ್‌ಗಳು, ಬ್ಯಾಂಕಿಂಗ್ ಫೈನಾನ್ಷಿಯಲ್ ಟೂಲ್‌ಕಿಟ್, ವಿಶ್ಲೇಷಣೆಗಾಗಿ ತೀವ್ರವಾದ ತರಬೇತಿ ಮತ್ತು ಆರ್ಥಿಕ ಆರೋಗ್ಯದ ಮುನ್ಸೂಚನೆಯ ಮೇಲೆ ವಿಶೇಷ ಗಮನವನ್ನು ಹೊಂದಿರುವ ಕೋರ್ಸ್ ಬ್ಯಾಂಕಿಂಗ್ ಮತ್ತು ಫೈನಾನ್ಸ್‌ನಲ್ಲಿದೆ.

ಕೋರ್ಸ್ ಮುಗಿದ ನಂತರ ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಎಜುಕೇಶನ್, ಐಐಟಿ ಮದ್ರಾಸ್‌ನಿಂದ ಪ್ರಮಾಣಪತ್ರವನ್ನು ಸ್ವೀಕರಿಸಲಾಗುತ್ತದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಮತ್ತು ಅದೇ ಎರಡನೇ / ಅಂತಿಮ ವರ್ಷದ ವಿದ್ಯಾರ್ಥಿಗಳು ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.

Karnataka Education budget 2022: ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ಘೋಷಣೆ

ಇದು 12 ತಿಂಗಳು ಅಂದ್ರೆ 1ವರ್ಷ ಅವಧಿಯ ಕೋರ್ಸ್ ಆಗಿದ್ದು, ಮೊದಲ ಆರು ತಿಂಗಳುಗಳು 250 ಗಂಟೆಗಳ ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತದೆ.  ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ನೂರಾರು ಪ್ರಶ್ನೆಗಳು ಮತ್ತು ಕಾರ್ಯಯೋಜನೆಗಳನ್ನು ಒಳಗೊಂಡಿರುತ್ತವೆ. ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಕೋರ್ಸ್‌ನ ಕೊನೆಯ ಆರು ತಿಂಗಳವರೆಗೆ ಬ್ಯಾಂಕಿಂಗ್ ಪರಿಸರದಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ನಿರ್ದೇಶಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ವೃತ್ತಿಜೀವನದಲ್ಲಿ ಆಸಕ್ತಿ ಇಲ್ಲದಿದ್ದರೂ ಸಹ ಬ್ಯಾಂಕಿಂಗ್-ಸಂಬಂಧಿತ ವಿಷಯಗಳನ್ನು ಪರಿಣಾಮಕಾರಿಯಾಗಿ ವ್ಯವಹರಿಸಲು ಸಹಾಯ ಮಾಡುತ್ತದೆ.

ಅಂದಹಾಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಪ್ರೀಮಿಯರ್ ಬ್ಯಾಂಕರ್ ಅಪ್‌ಸ್ಕಿಲ್ಲಿಂಗ್ ಕೋರ್ಸ್‌ ಶುಲ್ಕ,  ತೆರಿಗೆ ಸೇರಿದಂತೆ 59,000 ರೂ.ಗಳಾಗಿರುತ್ತದೆ. ಈ ಕೋರ್ಸ್ ಸೇರಲು ಬಯಸುವ ಅಭ್ಯರ್ಥಿಗಳು, ಹೆಚ್ಚಿನ ವಿವರಗಳಿಗಾಗಿ, IIT-M ವೆಬ್ ಸೈಟ್ https://www.iitm.ac.in/ ಅಥವಾ Infact Pro ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು. ವೆಬ್ ಸೈಟ್‌ನಲ್ಲಿ‌ ಕೋರ್ಸಸ್ ಮೇಲೆ ಕ್ಲಿಕ್ ಮಾಡಿ, ಪ್ರೋಗ್ರಾಮ್ ಇನ್ ಪ್ರಿಮೀಯರ್ ಬ್ಯಾಂಕರ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ನೋಂದಣಿ ಮಾಡಿಕೊಳ್ಳಬೇಕು.

click me!