IIT Placements: ಬಾಂಬೆ, ರೂರ್ಕಿ ಐಐಟಿ ವಿದ್ಯಾರ್ಥಿಗಳ ಪ್ಲೇಸ್‌ಮೆಂಟ್ ಡ್ರೈವ್ : ಸಂಬಳ ಎಷ್ಟು ಗೊತ್ತಾ?

By Kannadaprabha News  |  First Published Dec 3, 2021, 9:03 AM IST

*ದೇಶಾದ್ಯಂತ ಐಐಟಿ ಕ್ಯಾಂಪಸ್‌ಗಳಲ್ಲಿ ನೇಮಕಾತಿ
*ವಿದ್ಯಾರ್ಥಿಗಳಿಗೆ 2 ಕೋಟಿ ಸಂಬಳದ ಕೆಲಸ ಆಫರ್‌
*IIT Bombay ಪ್ಲೇಸ್‌ಮೆಂಟ್‌ನಲ್ಲಿ 28 ಕಂಪನಿಗಳು!


ಮುಂಬೈ (ಡಿ. 03): ದೇಶಾದ್ಯಂತ ಐಐಟಿ ಕ್ಯಾಂಪಸ್‌ಗಳಲ್ಲಿ (IIT Campus) ನಡೆಯುತ್ತಿರುವ ನೇಮಕಾತಿಯಲ್ಲಿ (Placements) ಮೊದಲ ದಿನವೇ ಭರ್ಜರಿ ಆಫರ್‌ ನೀಡಲಾಗಿದೆ. ಇಬ್ಬರು ಐಐಟಿ ವಿದ್ಯಾರ್ಥಿಗಳು ವಾರ್ಷಿಕವಾಗಿ 2 ಕೋಟಿ ರು.ಗೂ ಅಧಿಕ ಸಂಬಳ ಪಡೆಯುವ ಆಫರ್‌ ಪಡೆದಿದ್ದಾರೆ. ಮೊದಲ ದಿನವೇ ಉಬರ್‌ (Uber) ಕಂಪನಿ ಐಐಟಿ ರೂರ್ಕಿಯ (IIT Roorkee) ವಿದ್ಯಾರ್ಥಿಗೆ ವಾರ್ಷಿಕ 2.15 ಕೋಟಿ ರು. ಹಾಗೂ ಬಾಂಬೆ ಐಐಟಿಯ (IIT Bombay) ವಿದ್ಯಾರ್ಥಿಗೆ 2.05 ಕೋಟಿ ರು. ಸಂಬಳ ಆಫರ್‌ ನೀಡಿದೆ. ಗುವಾಹಟಿ ಐಐಟಿಯ ವಿದ್ಯಾರ್ಥಿಯೂ ಸಹ 2 ಕೋಟಿ ರು. ಸಂಬಳದ ಆಫರ್‌ ಪಡೆದಿದ್ದಾರೆ. 

ಕಳೆದ ವರ್ಷದ ಕ್ಯಾಂಪಸ್‌ ನೇಮಕಾತಿಯಲ್ಲಿ ಬಾಂಬೆ ಐಐಟಿಯ ವಿದ್ಯಾರ್ಥಿ ವಾರ್ಷಿಕ 1.54 ಕೋಟಿ ರು. ಆಫರ್‌ ಪಡೆದಿದ್ದು ದಾಖಲೆಯಾಗಿತ್ತು. ಈ ವರ್ಷ ರೂರ್ಕಿ ಐಐಟಿಯ 11 ವಿದ್ಯಾರ್ಥಿಗಳು 1 ಕೋಟಿ ರು.ಗೂ ಅಧಿಕ ಸಂಬಳದ ಆಫರ್‌ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ರಾಸ್‌ ಐಐಟಿಯಲ್ಲಿ ಶೇ.46ರಷ್ಟುಹೆಚ್ಚಿನ ನೇಮಕಾತಿ ನಡೆದಿದೆ.

Tap to resize

Latest Videos

IIT Bombay ಪ್ಲೇಸ್‌ಮೆಂಟ್ ಸೆಷನ್‌ನಲ್ಲಿ ಒಟ್ಟು 28 ಕಂಪನಿಗಳು!

ಉತ್ತಮ ಪ್ಯಾಕೇಜ್‌ಗಳನ್ನು ನೀಡಿದ ದೇಶೀಯ ಡೊಮೇನ್‌ನಲ್ಲಿರುವ ಇತರ ಕಂಪನಿಗಳೆಂದರೆ, ಮಿಲೇನಿಯಮ್- ರೂ 62 ಲಕ್ಷಗಳು, ವರ್ಲ್ಡ್ ಕ್ವಾಂಟ್- ರೂ 51.71 ಲಕ್ಷಗಳು, ಬ್ಲ್ಯಾಕ್‌ಸ್ಟೋನ್- ರೂ 46.62 ಲಕ್ಷಗಳು ಎಂದು ಪ್ಲೇಸ್‌ಮೆಂಟ್ ಬಿಡುಗಡೆಯಲ್ಲಿ ಉಲ್ಲೇಖಿಸಲಾಗಿದೆ. IIT Bombay ಪ್ಲೇಸ್‌ಮೆಂಟ್ ಸೆಷನ್‌ನಲ್ಲಿ ಒಟ್ಟು 28 ಕಂಪನಿಗಳ ಭಾಗವಹಿಸಿದ್ದವು. "ದೇಶೀಯ ಉದ್ಯೋಗಗಳಿಗಾಗಿ, Google, Miscosoft, Qualcomm, Boston Consulting Group, Airbus, Bain and company ಹೆಚ್ಚಿನ ಸಂಖ್ಯೆಯ ಆಫರ್ ನೀಡಿದೆ" ಎಂದು ಪ್ರಕಟಣೆ ತಿಳಿಸಿದೆ.

Central Government Jobs: ಇಂಡಿಯನ್ ಕೋಸ್ಟ್‌ ಗಾರ್ಡ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಶುರು

ಐಟಿ/ಸಾಫ್ಟ್‌ವೇರ್ (Software), ಕೋರ್ ಇಂಜಿನಿಯರಿಂಗ್ (Core Engineering) ಮತ್ತು ಕೌನ್ಸಲ್ಟಿಂಗ್ (counselling) ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗದ ಆಫರ್ ನೀಡಲಾಗಿದೆ. ಅಲ್ಲದೆ, 201 ಪ್ರಿ-ಪ್ಲೇಸ್‌ಮೆಂಟ್ ಆಫರ್‌ಗಳನ್ನು (Pre placement offer) ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ, ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. "ನಿಯಮಿತ ನೇಮಕಾತಿದಾರರು IITB ನಲ್ಲಿ ನಂಬಿಕೆಯನ್ನು ತೋರಿಸಿದ್ದಾರೆ ಮತ್ತು ನಾವು ಈ ಕಂಪನಿಗಳಿಂದ ಹೆಚ್ಚಿನ ಆಫರ್‌ಗಳನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಪ್ಲೇಸ್‌ಮೆಂಟ್ ವರದಿ ತಿಳಿಸಿದೆ.

IIT BHU placement: ವಿದ್ಯಾರ್ಥಿಗೆ ವಾರ್ಷಿಕ 2 ಕೋಟಿ ರೂ. ವೇತನ ಪ್ಯಾಕೇಜ್!

ಐಐಟಿ-ಗುವಾಹಟಿ, ಐಐಟಿ ಮದ್ರಾಸ್, ಐಐಟಿ ರೂರ್ಕಿ, ಐಐಟಿ ಮಂಡಿ ಸೇರಿದಂತೆ ವಿವಿಧ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಡಿಸೆಂಬರ್‌ 1 ರಿಂದ ತಮ್ಮ ಪ್ಲೇಸ್‌ಮೆಂಟ್ ಡ್ರೈವ್ ಅನ್ನು ಪ್ರಾರಂಭಿಸಿವೆ. IIT-ಗುವಾಹಟಿ ಪ್ಲೇಸ್‌ಮೆಂಟ್ ಮೊದಲ ದಿನದಲ್ಲಿ 200 ಆಫರ್‌ಗಳನ್ನು ಪಡೆದಿದೆ, IIT ಮದ್ರಾಸ್ 176 ಪ್ಲೇಸ್‌ಮೆಂಟ್‌ಗಳೊಂದಿಗೆ ಅತ್ಯಧಿಕ ಸಂಖ್ಯೆಯ ಆಫರ್‌ಗಳಿಗೆ ಸಾಕ್ಷಿಯಾಗಿದೆ, IIT ರೂರ್ಕಿಯ 13 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಆಫರ್ ಪಡೆದರೇ  IIT ಮಂಡಿಯಲ್ಲಿ 137 ವಿದ್ಯಾರ್ಥಿಗಳು ಆಫರ್ ಪಡೆದಿದ್ದಾರೆ.

ಪ್ರೊಫೆಸರ್, ಟ್ಯೂಟರ್ ಹುದ್ದೆಗಳ ನೇಮಕ್ಕೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ (Union Public Service Commission-UPSC) , ಖಾಲಿ ಇರುವ ವಿವಿಧ ಪ್ರೊಫೆಸರ್ ಹಾಗೂ ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.  ಒಟ್ಟು 21 ಪ್ರಾಧ್ಯಾಪಕ (Professor) ಮತ್ತು ಬೋಧಕ (Tutor) ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ದೆಹಲಿ ಅಥವಾ ದೇಶದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಪ್ರಕ್ರಿಯೆಯು ನವೆಂಬರ್ 29ರಿಂದ ಶುರುವಾಗಿದ್ದು, ಡಿಸೆಂಬರ್ 16 ರವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ

click me!