CBSE Mistake: ಗುಜರಾತ್ ಹತ್ಯಾಕಾಂಡ ಯಾರ ಆಡಳಿತದಲ್ಲಾಯಿತೆಂಬ ಪಶ್ನೆ

By Suvarna NewsFirst Published Dec 2, 2021, 4:27 PM IST
Highlights
  • 2002 ಗುಜರಾತ್ ಹತ್ಯಾಕಾಂಡ ಯಾರ ಆಡಳಿತದಲ್ಲಿ ನಡೆಯಿತೆಂದು ಕೇಳಿದ ಸಿಬಿಎಸ್‌ಇ
  • 12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ
  • ವಿವಾದದ ಬೆನ್ನಲ್ಲೇ ಕ್ಷಮೆ ಕೇಳಿದ ಸಿಬಿಎಸ್‌ಇ

"2002 ರಲ್ಲಿ ಗುಜರಾತ್‌ನಲ್ಲಿ ನಡೆದ ಅಪಾರ ಪ್ರಮಾಣದ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರಕಾರದ ಅವಧಿಯಲ್ಲಿ ನಡೆಯಿತು?" 

ಹೀಗೆಂದು ಡಿಸೆಂಬರ್ 1 ರಂದು ನಡೆದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, 12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ (ಎ) ಕಾಂಗ್ರೆಸ್, (ಬಿ) ಬಿಜೆಪಿ, (ಸಿ) ಡೆಮಾಕ್ರಟಿಕ್, (ಡಿ) ರಿಪಬ್ಲಿಕನ್ ಎಂಬ  ನಾಲ್ಕು ಆಯ್ಕೆಗಳನ್ನು ಕೂಡ ನೀಡಲಾಗಿದೆ. 2002 ರ ಗುಜರಾತ್ ಹತ್ಯಾಕಾಂಡಕ್ಕೆ (gujarat riots) ಸಂಬಂಧಿಸಿ ಕೇಳಿದ ಪ್ರಶ್ನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ  ಕ್ಷಮೆಯಾಚಿಸಿರುವ ಸಿಎಸ್‌ಸಿ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. "12 ನೇ ತರಗತಿಯ ಸಮಾಜಶಾಸ್ತ್ರದ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯು ಅಸಮರ್ಪಕವಾಗಿದೆ ಮಾತ್ರವಲ್ಲ CBSE ಮಾರ್ಗಸೂಚಿಗಳನ್ನು ಇದು ಉಲ್ಲಂಘಿಸುತ್ತದೆ. ಈ ಪ್ರಶ್ನೆ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಪ್ರಶ್ನೆ ಪತ್ರಿಕೆ ಮಾಡುವವರು ಎಸಗಿರುವ ಪ್ರಮಾದ ಇದಾಗಿದ್ದು, ಈ ತಪ್ಪನ್ನು ಸಿಬಿಎಸ್‌ಸಿ ಒಪ್ಪಿಕೊಂಡಿದೆ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಬಿಎಸ್ಇ ಟ್ವೀಟ್ ಮಾಡಿದೆ.

ಪುಸ್ತಕದಲ್ಲೇ ಇದೆ ಈ ವಿಷಯ!
ಸಿಬಿಎಸ್​ಇ (CBSE) ಕ್ಷಮೆ ಕೇಳುತ್ತಿದ್ದಂತೆ ನಿಮ್ಮದೇನು ತಪ್ಪಿಲ್ಲ ಬಿಡಿ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಯ ವಿಷಯ ಸಿಬಿಎಸ್​ಇ 12ನೇ ತರಗತಿ ಸಮಾಜಶಾಸ್ತ್ರ(Sociology) ಪುಸ್ತಕದ 141ನೇ ಅಧ್ಯಾಯ ಭಾರತೀಯ ಸಮಾಜದ 2ನೇ ಪ್ಯಾರಾದಲ್ಲಿ ಇದೆ ಎಂದು ದೀಪೇಂದರ್​ ಮಿಶ್ರಾ ಎನ್ನುವವರು ಫೋಟೋ ಸಮೇತ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಹಾಗೇ ಹಲವು ಮಂದಿ ಪಠ್ಯದಲ್ಲೇ ವಿಷಯ ಇದೆ ಎಂದ ಮೇಲೆ ಪರೀಕ್ಷೆಯಲ್ಲಿ ಬರಬಾರದು ಎಂದರೆ ಹೇಗೆ? ಇದಕ್ಕೆ ನೀವ್ಯಾಕೆ ಕ್ಷಮೆ ಕೇಳಬೇಕು ಎಂದು ಸಿಬಿಎಸ್​ಇ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

2002ರಲ್ಲಿ ಆಡಳಿತದಲ್ಲಿದ್ದ ಸರಕಾರ ಯಾವುದು?
2002ರ ಫೆಬ್ರವರಿ 27ರಂದು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ನ(sabarmati express) 6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಈ  ಪ್ರಕರಣದಲ್ಲಿ 59 ಜನ ಹಿಂದೂ ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಇದಾದ ಬಳಿಕ 2002ರ ಫೆ. 28ರಂದು ಅಹ್ಮದಾಬಾದ್‌ ಸಮೀಪದ ನರೋಡಾ ಪಾಟಿಯಾದಲ್ಲಿ ನಡೆದ ಕೋಮು ಗಲಭೆಯಲ್ಲಿ ಸುಮಾರು 97 ಜನ ಮುಸ್ಲಿಂರನ್ನು ಹತ್ಯೆ ಮಾಡಲಾಗಿತ್ತು. ಇದಾದ ನಂತರದಲ್ಲಿ ನಡೆದ ಹಿಂಸಾಚಾರದಲ್ಲಿ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆಗ ಬಿಜೆಪಿ ಸರಕಾರ ಗುಜರಾತ್ ನಲ್ಲಿತ್ತು ಮತ್ತು ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು.

CBSE’s new OMR sheets: ಸಿಬಿಎಸ್‌ಇ ಪರೀಕ್ಷೆ ಅವಧಿ, ವಿಷಯವಾರು ದಿನಾಂಕ ಪಟ್ಟಿ ಬಿಡುಗಡೆ

ಪ್ರತಿಯೊಂದು ಪಕ್ಷಗಳಿದ್ದಾಗಲೂ ನಡೆದಿತ್ತು ಹಿಂಸೆ!
ವಾಸ್ತವವಾಗಿ, ಕೋಮು ಹಿಂಸಾಚಾರದ ಎರಡು ಆಘಾತಕಾರಿ ಘಟನೆಗಳು ಪ್ರಮುಖ ಎರಡು ರಾಜಕೀಯ ಪಕ್ಷಗಳಿದ್ದಾಲೂ ನಡೆದಿದೆ. 1984 ರಲ್ಲಿ ದೆಹಲಿಯ ಸಿಖ್ ವಿರೋಧಿ ದಂಗೆಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದಿತ್ತು.  ಆಗ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. 2002 ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ಬಿಜೆಪಿ(bjp) ಸರಕಾರದರದ ಅಡಿಯಲ್ಲಿ ನಡೆಯಿತು. ಆಗ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು.

CBSE,ICSE ಕ್ಲಾಸ್‌ ಹೈಬ್ರಿಡ್‌ ಪರೀಕ್ಷೆಗೆ ಅನುಮತಿ ಇಲ್ಲ

19 ವರ್ಷಗಳ ಬಳಿಕ ಪ್ರಮುಖ ಆರೋಪಿ ಸೆರೆ
ಗೋದ್ರಾ ಹತ್ಯಾಕಾಂಡ (godhra riots) ನಡೆದು 19 ವರ್ಷಗಳು ಕಳೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಕಳೆದ 2021ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ರಫೀಕ್ ಹುಸೇನ್ ಭಟುಕ್ (51) ಬಂಧಿತ ಆರೋಫಿಯಾಗಿದ್ದು, ಈತ ಗೋದ್ರಾ(godhra) ಮೂಲದವನಾಗಿದ್ದಾನೆ. ಪೂರ್ತಿ ಪ್ರಕರಣದಲ್ಲಿ ಈತನ ಕೈವಾಡವಿದ್ದು, ಘಟನೆ ನಡೆದ ದಿನದಿಂದ ಅಂದರೆ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಗೋದ್ರಾ ಹತ್ಯಾಕಾಂಡದಲ್ಲಿ ಭಟುಕ್​ ಪ್ರಮುಖ ಆರೋಪಿಯಾಗಿದ್ದು, ಜನರಿಗೆ ಪ್ರಚೋದಿಸಿ, ಅವರಿಗೆ ಪೆಟ್ರೋಲ್ ನೀಡಿ, ರೈಲು ಕಂಪಾರ್ಟ್​ಮೆಂಟ್​ಗೆ ಬೆಂಕಿ ಹಚ್ಚಲು ಪ್ರೇರೇಪಿಸಿದ್ದನು. ಇದಾದ ನಂತರ ವಿಚಾರಣೆಯಲ್ಲಿ ಭಟುಕ್ ಹೆಸರು ಕೇಳಿಬರುತ್ತಿದ್ದಂತೆ ದೆಹಲಿಗೆ ಪರಾರಿಯಾಗಿದ್ದನು.

click me!