ಅಹ್ಮದಾಬಾದ್ ಐಐಟಿಯ ಪವನ್ ಶರ್ಮಾ ಎಂಬ ವಿದ್ಯಾರ್ಥಿ, 75.2 ಲಕ್ಷ ವಾರ್ಷಿಕ ಸಂಬಳದ ಕೆಲಸ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾನೆ.
ಗುಜರಾತ್: ಓದುತ್ತಿರುವಾಗಲೇ ಕೆಲಸ ಸಿಕ್ಕಿ ದುಡ್ಡಿಯುತ್ತ ತಮ್ಮ ಖರ್ಚನ್ನು ತಾವೇ ನಿಭಾಯಿಸುತ್ತ ಓದುವುದು ದೊಡ್ಡ ಹೆಮ್ಮೆಯ ವಿಚಾರವೇ ಸರಿ. ವಿದೇಶಗಳಲ್ಲಿ ಕೆಲಸ ಮಾಡುತ್ತಾ ಓದುವ ಅವಕಾಶವಿದೆ. ಆದರೆ ಭಾರತದಲ್ಲಿ ಅಂತಹ ಅವಕಾಶಗಳು ಕಡಿಮೆ. ಕಾಲೇಜುಗಳಲ್ಲಿ ಅಂತಿಮ ಪದವಿಯಲ್ಲಿರುವಾಗ ಕೆಲಸ ಸಿಕ್ಕರೆ ಅದೇ ದೊಡ್ಡ ವಿಚಾರ. ಓದುತ್ತಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ದೊಡ್ಡ ದೊಡ್ಡ ಕಂಪನಿಗಳಿಗೆ ನಾವು ಆಯ್ಕೆ ಆಗಬೇಕು ಎಂದು ಬಹುತೇಕ ವಿದ್ಯಾರ್ಥಿಗಳು ಕನಸು ಕಾಣುತ್ತಾರೆ. ಅದಕ್ಕಾಗಿ ಶ್ರಮಿಸುತ್ತಾರೆ. ಅದರಲ್ಲಿ ಯಶಸ್ವಿಯಾಗುತ್ತಾರೆ. ಭಾರತದ ಕೆಲ ಪ್ರತಿಭಾವಂತ ವಿದ್ಯಾರ್ಥಿಗಳು ಗೂಗಲ್, ಆಪಲ್, ಮೈಕ್ರೋಸಾಫ್ಟ್ ಮುಂತಾದ ಬಹುರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದುವಾಗಲೇ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅಂತಹವರ ಸಾಲಿಗೆ ಅಹ್ಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಅಪ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಯೋರ್ವ ಸೇರಿದ್ದಾನೆ.
ಅಹ್ಮದಾಬಾದ್ ಐಐಟಿಯ ಪವನ್ ಶರ್ಮಾ ಎಂಬ ವಿದ್ಯಾರ್ಥಿ, 75.2 ಲಕ್ಷ ವಾರ್ಷಿಕ ಸಂಬಳದ ಕೆಲಸ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಈತ 2022ರ ಬ್ಯಾಚ್‌ನ ಒಂದು ವರ್ಷದ PGPX ( Post Graduate Programme in Management for Executives) ಕೋರ್ಸ್‌ನ ವಿದ್ಯಾರ್ಥಿಯಾಗಿದ್ದಾನೆ.
ಫೇಸ್ ಬುಕ್ ನಲ್ಲಿ ಕೆಲಸ ಮಾಡಲು ಗೂಗಲ್, ಅಮೇಜಾನ್ ಆಫರ್ಸ್ ಬಿಟ್ಟ ಯುವಕ, 1 ಕೋಟಿ ವೇತನ
ಪವನ್ ಶರ್ಮಾ ಅವರು ಈಗಾಗಲೇ ಲೆಕ್ಕ ಪರಿಶೋಧಕ (CA) ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಆದರೆ ಹೆಚ್ಚಿನ ಅವಕಾಶಗಳನ್ನು ಪಡೆಯುವ ಸಲುವಾಗಿ 2021ರಲ್ಲಿ PGPX ಮಾಡಲು ನಿರ್ಧರಿಸಿದರು. ಜೊತೆಗೆ ಎಲ್ಲಾ ನಿರ್ವಹಣಾ ಕಾರ್ಯಗಳ ಬಗ್ಗೆ ತಿಳಿಯಲು ಬಯಸಿದ್ದಾಗಿ ಅವರು ಹೇಳಿದ್ದಾರೆ. ವಾರ್ಷಿಕ 75.2 ಲಕ್ಷದ ಸಂಬಳದ ಕೆಲಸ ಗಿಟ್ಟಿಸುವ ಮೂಲಕ ಪವನ್ ಶರ್ಮಾ ಅವರು, ಅಹ್ಮದಾಬಾದ್ ಐಐಎಮ್ ಪ್ಲೆಸ್‌ಮೆಂಟ್‌ನಲ್ಲಿ PGPX ಕೋರ್ಸ್‌ನ ಪದವಿಧರರೊಬ್ಬರು ಗಳಿಸಿದ ಮೂರನೇ ಅತ್ಯಧಿಕ ವೇತನದ ಕೆಲಸ ಪಡೆದವರಾಗಿದ್ದಾರೆ. ಅಲ್ಲದೇ ಈ ಕ್ಯಾಂಪಸ್‌ನಲ್ಲಿ ನಡೆದ 2022ರ ಉದ್ಯೋಗ ನೇಮಕಾತಿಯಲ್ಲಿ ಅತ್ಯಧಿಕ ಮೊತ್ತದ ಸಂಬಳ ಪಡೆದ ಎಂಬಿಎ ವಿದ್ಯಾರ್ಥಿಯಾಗಿದ್ದಾರೆ.
ಪ್ರಯಾಗ್‌ರಾಜ್‌ನ ಟ್ರಿಪಲ್ ಐಟಿಯ ಐದು ವಿದ್ಯಾರ್ಥಿಗಳಿಗೆ ಅಮೆಜಾನ್, ಗೂಗಲ್‌ನಲ್ಲಿ ಕೋಟಿಗೂ ಹೆಚ್ಚು ಪ್ಯಾಕೇಜ್
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಪವನ್ ಶರ್ಮಾ, ಭಾರತೀಯ ಪ್ಲೇಸ್‌ಮೆಂಟ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ಸ್ ಜುಲೈನಲ್ಲಿ ನೀಡಿದ ಪ್ಲೇಸ್‌ಮೆಂಟ್‌ಗಳ ಮೇಲಿನ ಐಪಿಆರ್‌ಎಸ್ ವರದಿ ಪರಕಾರ ಅವರ ಪ್ಯಾಕೇಜ್ ಅತ್ಯಧಿಕ ಪ್ಯಾಕೇಜ್‌ನ ಕೆಲಸ ಎಂದು ದೃಢಪಡಿಸಿದೆ ಎಂದು ಹೇಳಿದರು. ಶರ್ಮಾ 2014 ರಲ್ಲಿ ತಮ್ಮ ಸಿಎಯನ್ನು ಪೂರ್ಣಗೊಳಿಸಿದ್ದರು. ನಂತರ ಐಐಎಂ ಅಹಮದಾಬಾದ್‌ಗೆ ಸೇರುವ ಮೊದಲು ಏಳು ವರ್ಷಗಳ ಕಾಲ ಗ್ರಾಂಟ್ ಥಾರ್ನ್‌ಟನ್ ಅವರೊಂದಿಗೆ ಕೆಲಸ ಮಾಡಿದರು. ಅವರು ಈ ಪ್ರಸ್ತಾಪವನ್ನು ಹೇಗೆ ಪಡೆದರು ಎಂಬುದರ ಕುರಿತು ಮಾತನಾಡುವಾಗ, ಉದ್ಯಮಶೀಲತೆಯ ಮನಸ್ಥಿತಿಯನ್ನು ಹೊಂದಿರುವುದು ಮುಖ್ಯ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಗುಜರಾತ್ (Gujarat)ನ ಅಹಮದಾಬಾದ್ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅಮೆಜಾನ್ (Amazon) ಕಂಪನಿಯಿಂದ ಭಾರಿ ಮೊತ್ತದ ಆಫರ್ ಪಡೆಯುವಲ್ಲಿ ಯಶಸ್ವಿ ಆಗಿದ್ದರು. ಅಲಹಾಬಾದ್‌ನ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Motilal Nehru National Institute of Technology - MNNIT)ಯ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್) ಅಂತಿಮ ವರ್ಷದ ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ (Lokesh Raj Singhi) ಭರ್ಜರಿ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಲೋಕೇಶ್ ರಾಜ್ ಅಮೆಜಾನ್ ಡಬ್ಲಿನ್‌ನೊಂದಿಗೆ ₹1.18 ಕೋಟಿಯ ವಾರ್ಷಿಕ ಪ್ಯಾಕೇಜ್‌ನಲ್ಲಿ 'ಗ್ರಾಜುಯೇಟ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್' ಕೆಲಸವನ್ನು ಪಡೆದಿದ್ದಾರೆ.ಗುಜರಾತ್‌ನ ಐದು ವಿಶ್ವವಿದ್ಯಾನಿಲಯಗಳಲ್ಲದೆ ಐಐಐಟಿ (IIT), ಹಲವು ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ನಗರದ ಯಾವುದೇ ವಿದ್ಯಾರ್ಥಿಯು ಇಲ್ಲಿಯವರೆಗೂ ಪಡೆದಿರುವ ಅತ್ಯಧಿಕ ಪ್ಯಾಕೇಜ್ ಇದಾಗಿದೆ ಎಂದು ಎಂಎನ್‌ಎನ್‌ಐಟಿ ಅಧಿಕಾರಿಗಳು ಹೇಳಿದ್ದರು.