ವಿಶ್ವದ ಟಾಪ್‌ 50 ಕಾಲೇಜಲ್ಲಿ ಬೆಂಗಳೂರು ಐಐಎಂಗೆ ಸ್ಥಾನ!

By Precilla Olivia DiasFirst Published May 24, 2022, 7:43 AM IST
Highlights

* ಅಹಮದಾಬಾದ್‌ ಐಐಎಂ 39, ಬೆಂಗಳೂರು ಐಐಎಂ 45ನೇ ರಾರ‍ಯಂಕ್‌

* ವಿಶ್ವದ ಟಾಪ್‌ 50 ಕಾಲೇಜಲ್ಲಿ ಬೆಂಗಳೂರು ಐಐಎಂಗೆ ಸ್ಥಾನ

* ಬ್ರಿಟನ್‌ ಪತ್ರಿಕೆ ಫೈನಾನ್ಷಿಯಲ್‌ ಟೈಮ್ಸ್‌ ನಿಂದ ರಾರ‍ಯಂಕಿಂಗ್‌ ಪ್ರಕಟ

ನವದೆಹಲಿ(ಮೇ.24): ವಿಶ್ವದ ಟಾಪ್‌ 100 ಕಾಲೇಜುಗಳ ಪಟ್ಟಿಯಲ್ಲಿ ಭಾರತದ ಮೂರು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಈ ಮೂರೂ ಸಂಸ್ಥೆಗಳು ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ)ಗಳು ಎಂಬುದು ಗಮನಾರ್ಹ. ಆ ಪೈಕಿ ಅಹಮದಾಬಾದ್‌ ಹಾಗೂ ಬೆಂಗಳೂರು ಐಐಎಂಗಳು ಟಾಪ್‌ 50ರೊಳಗೆ ಸ್ಥಾನ ಪಡೆದಿವೆ.

ಕಾರ್ಯಕಾರಿ (ಸಾಂಪ್ರದಾಯಿಕ) ಉದ್ಯಮ ಶಿಕ್ಷಣಕ್ಕೆ ಸಂಬಂಧಿಸಿದ ರಾರ‍ಯಂಕಿಂಗ್‌ ಇದಾಗಿದ್ದು, ಅಹಮದಾಬಾದ್‌ ಐಐಎಂ 39 ಹಾಗೂ ಬೆಂಗಳೂರು ಐಐಎಂ 45ನೇ ಸ್ಥಾನ ಪಡೆದಿವೆ. ಬ್ರಿಟನ್‌ನ ದಿನಪತ್ರಿಕೆ ಫೈನಾನ್ಷಿಯಲ್‌ ಟೈಮ್ಸ್‌ ಈ ರಾರ‍ಯಂಕಿಂಗ್‌ ಪಟ್ಟಿಸಿದ್ಧಪಡಿಸಿದೆ.

ಸಾಂಪ್ರದಾಯಿಕ ಕಾರ್ಯಕಾರಿ ಹಾಗೂ ಮುಕ್ತ ಕಾರ್ಯಕಾರಿ ಶಿಕ್ಷಣ ಎಂಬ ಎರಡು ಪಟ್ಟಿಗಳನ್ನು ವಿಲೀನಗೊಳಿಸಿ ಟಾಪ್‌ 50 ಕಾರ್ಯಕಾರಿ ಶಿಕ್ಷಣ ಸಂಸ್ಥೆಗಳ ಪಟ್ಟಿಸಿದ್ಧಪಡಿಸಲಾಗಿದೆ. ಅದರಲ್ಲಿ ಅಹಮದಾಬಾದ್‌ ಐಐಎಂ 39 ಹಾಗೂ ಬೆಂಗಳೂರು ಐಐಎಂ 45ನೇ ಸ್ಥಾನದಲ್ಲಿದೆ.

ಕಾರ್ಯಕಾರಿ ಶಿಕ್ಷಣ ವಿಭಾಗದಲ್ಲಿ ಐಐಎಂ ಅಹಮದಾಬಾದ್‌ (47), ಐಐಎಂ ಕಲ್ಕತ್ತಾ (59) ಹಾಗೂ ಐಐಎಂ ಬೆಂಗಳೂರು (60) ಸ್ಥಾನ ಪಡೆದಿವೆ. ಮುಕ್ತ ವಿಭಾಗದಲ್ಲಿ ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (28), ಐಐಎಂ ಬೆಂಗಳೂರು (43) ಹಾಗೂ ಐಐಎಂ ಅಹಮದಾಬಾದ್‌ (50) ಸ್ಥಾನ ಗಳಿಸಿವೆ ಎಂದು ವರದಿ ತಿಳಿಸಿದೆ.

ಇನ್ನು ಒಟ್ಟಾರೆ ಬಿಸಿನೆಸ್‌ ಸ್ಕೂಲ್‌ಗಳ ಪಟ್ಟಿಯಲ್ಲಿ ಪ್ಯಾರಿಸ್‌ನ ಎಚ್‌ಇಸಿ, ಸ್ಪೇನ್‌ನ ಐಇಎಸ್‌ಇ ಬಿಸಿನೆಸ್‌ ಸ್ಕೂಲ್‌, ಸ್ವಿಜರ್ಲೆಂಡ್‌ನ ಐಎಂಡಿ ಬಿಸಿನೆಸ್‌ ಸ್ಕೂಲ್‌, ಸ್ಪೇನ್‌ನ ಈಸೇಡ್‌ ಬಿಸಿನೆಸ್‌ ಸ್ಕೂಲ್‌, ಲಂಡನ್‌ ಬಿಸಿನೆಸ್‌ ಸ್ಕೂಲ್‌ಗಳು ಟಾಪ್‌ 5ರಲ್ಲಿವೆ.

ಸೆಬಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಮಾಧವಿ ಪುರಿ ಬುಚ್‌ ನೇಮಕ

 

ಬಂಡವಾಳ ಮಾರುಕಟ್ಟೆನಿಯಂತ್ರಕ ಸಂಸ್ಥೆಯಾದ ‘ಸೆಬಿ’ಗೆ ನೂತನ ಮುಖ್ಯಸ್ಥರಾಗಿ ಮಾಧವಿ ಪುರಿ ಬುಚ್‌ರನ್ನು ಸೋಮವಾರ ನೇಮಕ ಮಾಡಲಾಗಿದೆ. ಇವರು ಸೆಬಿಯ ಮೊದಲ ಮಹಿಳಾ ಮುಖ್ಯಸ್ಥರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದ ಮಾಧವಿ ಈ ಮೊದಲು ಸೆಬಿಯ ಪೂರ್ಣಾವಧಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸೆಬಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಅಜಯ ಮಿಶ್ರಾ ತಮ್ಮ ಐದು ವರ್ಷದ ಸೇವಾವಧಿ ಪೂರ್ಣಗೊಳಿಸಿದ್ದರಿಂದ ಅವರ ಸ್ಥಾನಕ್ಕೆ ಮಾಧವಿಯನ್ನು ನೇಮಿಸಲಾಗಿದೆ. ಕ್ಯಾಬಿನೆಟ್‌ ನೇಮಕಾತಿ ಸಮಿತಿಯು ಶೀಘ್ರ ಈ ಕುರಿತು ಔಪಚಾರಿಕ ಆದೇಶವನ್ನು ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!