IDP Hyderabad Education Fair: ವಿದೇಶಿ ಕಾಲೇಜಗಳ ಮಾಹಿತಿಗೆ ಹೈದರಾಬಾದ್‌ನಲ್ಲಿ ವರ್ಚುವಲ್ ಶಿಕ್ಷಣ ಮೇಳ

By Suvarna NewsFirst Published Feb 10, 2022, 5:07 PM IST
Highlights

*ವಿದೇಶಿ ಕಾಲೇಜುಗಳಲ್ಲಿ ಓದಲು ಇಚ್ಚಿಸುತ್ತಿರುವ ವಿದ್ಯಾರ್ಥಿಗಳಿಗೆ ಹೈದ್ರಾಬಾದ್ ವರ್ಚುವಲ್ ಮೇಳದಿಂದ ಲಾಭ
*ಫೆಬ್ರವರಿ 10ರಿಂದ 19ರವರೆಗೆ ಈ ವರ್ಚುಲ್ ಮೇಳ ಹೈದ್ರಾಬಾದ್‌ನಲ್ಲಿ ನಡೆಯಲಿದೆ

ಕೋವಿಡ್ (covid-19) ಬಂದ ಮೇಲೆ ಶಾಲೆ-ಕಾಲೇಜು, ಆಫೀಸ್, ಬ್ಯುಸಿನೆಸ್, ಶಾಪಿಂಗ್ ಎಲ್ಲಾ ಆನ್ ಲೈನ್ ಆಗೋಗಿದೆ. ಪ್ರತೀ ವರ್ಷ ಕಾಲೇಜುಗಳಲ್ಲಿ ನಡೀತಿದ್ದ ಕ್ಯಾಂಪಸ್ ಸೆಲೆಕ್ಷನ್ (Campus Selection), ಇಂಟರ್ ವ್ಯೂ (interview) ಕೂಡ ಈಗ ವರ್ಚುವಲ್ ಆಗ್ಬಿಟ್ಟಿವೆ.  ಇನ್ನು ವಿದೇಶಗಳಿಗೆ ಹೋಗಿ ಓದುವ ಕನಸು ಹೊತ್ತವರಿಗೂ ಇದೇ ಆನ್ ಲೈನ್ ವರದಾನವಾಗಿದೆ. ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳು ವರ್ಚುವಲ್ ಮೇಳ (Virtual Fair) ನಡೆಸಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.  ವಿಶ್ವವಿದ್ಯಾನಿಲಯಗಳ ವರ್ಚುವಲ್ ಮೇಳಗಳು ಈಗ ಆನ್‌ಲೈನ್ ಈವೆಂಟ್‌ಗಳಾಗಿವೆ. ಅಲ್ಲಿ ಹಲವಾರು ಸಂಸ್ಥೆಗಳು ನಿರೀಕ್ಷಿತ ವಿದ್ಯಾರ್ಥಿಗಳಿಗೆ ಮಾತುಕತೆಗಳು, ಕಾರ್ಯಾಗಾರಗಳು, ಮಾದರಿ ಸೆಮಿನಾರ್‌ಗಳು ಮತ್ತು ಪ್ರವೇಶಾತಿಯನ್ನು ಕಲ್ಪಿಸಲು ಉತ್ತಮ ವೇದಿಕೆಯಾಗಿವೆ.  

ಶೈಕ್ಷಣಿಕ ಸಿಬ್ಬಂದಿಯೊಂದಿಗೆ ಚಾಟ್ ಮೂಲಕ  ವಿಶ್ವವಿದ್ಯಾಲಯ, ಕೋರ್ಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತವೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿ(Students)ಗಳಿಗೆ ಸದ್ಯ ಬಂಪರ್ ಅವಕಾಶವೊಂದು ಒಲಿದು ಬಂದಿದೆ. ಫೆಬ್ರುವರಿ 10ರಿಂದ 5 ದಿನಗಳ ಕಾಲ ವರ್ಚುವಲ್ ಶಿಕ್ಷಣ ಮೇಳ ನಡೀತಾ ಇದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, USA, UK, ರಿಪಬ್ಲಿಕ್ ಆಫ್ ಐರ್ಲೆಂಡ್ (ireland ಮತ್ತು ಕೆನಡಾ (Canada)ದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

Latest Videos

ಅಂದಹಾಗೆ ಐಡಿಪಿ ಹೈದರಾಬಾದ್(IDP Hyderabad) ಸಂಸ್ಥೆಯು, ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ವರ್ಚುವಲ್ ಶಿಕ್ಷಣ ಮೇಳ ಆಯೋಜಿಸಿದೆ.  ಫೆಬ್ರುವರಿ 10, 11, 12, 13 ಮತ್ತು 19 ರಂದು ಆನ್ ಲೈನ್ ಶಿಕ್ಷಣ ಜಾತ್ರೆ ನಡೆಸುತ್ತಿದೆ. IDP ಹೈದ್ರಾಬಾದ್ ಸಂಸ್ಥೆಯು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಆಕಾಂಕ್ಷಿಗಳಿಗೆ ತಮ್ಮ ಕನಸಿನ ಸಂಸ್ಥೆಗಳನ್ನು ಮನೆಯಿಂದಲೇ  ಭೇಟಿ ಆಗುವ ಅವಕಾಶ ಒದಗಿಸುತ್ತದೆ.

CBSE Term 2 Exam Date 2022: ಟರ್ಮ್-1ರ ಫಲಿತಾಂಶಕ್ಕೂ ಮುನ್ನ CBSE ಟರ್ಮ್-2 ಪರೀಕ್ಷಾ ದಿನಾಂಕ ಪ್ರಕಟ

ವಿದ್ಯಾರ್ಥಿಗಳು, ಈವೆಂಟ್ ಸಮಯದಲ್ಲಿ, ತಮ್ಮ ಮನೆಯ ಸೌಕರ್ಯದಿಂದಲೇ ವಿಶ್ವದರ್ಜೆಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಬಹುದು.  ಅರ್ಹತಾ ಮಾನದಂಡಗಳು, ವಿದ್ಯಾರ್ಥಿವೇತನಗಳು ಮತ್ತು ಅಧ್ಯಯನದ ನಂತರದ ಕೆಲಸದ ಅವಕಾಶಗಳ ಕುರಿತು ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳು ಸ್ಥಳದಲ್ಲೇ ಅರ್ಜಿಗಳನ್ನು ಸಲ್ಲಿಸಬಹುದು.

ಈವೆಂಟ್‌ಗಾಗಿ ನೋಂದಾಯಿಸಲು, ವಿದ್ಯಾರ್ಥಿಗಳು IDP ಯ ಅಧಿಕೃತ ವೆಬ್‌ಸೈಟ್‌ www.idp.com ಗೆ  ಭೇಟಿ ನೀಡಬೇಕು. IDP ಹೈದರಾಬಾದ್ IDP ಶಿಕ್ಷಣ ಲಿಮಿಟೆಡ್‌ನ ಶಾಖೆಗಳಲ್ಲಿ ಒಂದಾಗಿದೆ. ಇದು ಆಸ್ಟ್ರೇಲಿಯಾ, ನ್ಯೂಜಿಲೆಂಡ್, USA, UK, ರಿಪಬ್ಲಿಕ್ ಆಫ್ ಐರ್ಲೆಂಡ್ ಮತ್ತು ಕೆನಡಾದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸೇವೆಯನ್ನು ಒದಗಿಸುವ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು 30 ದೇಶಗಳಲ್ಲಿ 120 ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದೆ. ಇದು 800 ಕ್ಕೂ ಹೆಚ್ಚು ಪ್ರಮುಖ ಪಾಲುದಾರ ಸಂಸ್ಥೆಗಳನ್ನು ಹೊಂದಿದೆ.

ವಿದ್ಯಾರ್ಥಿಗಳು, ಈ ಐಡಿಪಿ ಹೈದ್ರಾಬಾದ್ ಮೂಲಕ ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ಅವಕಾಶ ಪಡೆಯುತ್ತಾರೆ. ಒಬ್ಬರಿಗೊಬ್ಬರು ಕುಳಿತು ತಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತಾರೆ. IDP ಯ ಅಂತರಾಷ್ಟ್ರೀಯ ಶಿಕ್ಷಣ ತಜ್ಞರೊಂದಿಗೆ ಉಚಿತ ಆನ್‌ಲೈನ್ ಪೂರ್ವ-ಸಮಾಲೋಚನೆ ನಡೆಸಬಹುದು. ಉನ್ನತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಒಬ್ಬರಿಗೊಬ್ಬರು ಸಂವಹನ ನಡೆಸಬಹುದು. ನಿಮ್ಮ ವಿದ್ಯಾರ್ಥಿವೇತನ ಮತ್ತು ಇಂಟರ್ನ್‌ಶಿಪ್ ಆಯ್ಕೆಗಳನ್ನು ಚರ್ಚಿಸಬಹುದು. ನೀವು ಬಯಸಿದ ಸಂಸ್ಥೆಗೆ ಆ ಕ್ಷಣದಲ್ಲೇ ಆಯ್ಕೆ ಆಗಬಹುದು. ಜೊತೆಗೆ ಅರ್ಜಿ ಶುಲ್ಕ ವಿನಾಯಿತಿಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಎಲ್ಲಾ ವಿದೇಶಿ ಅಧ್ಯಯನ ‌ಕುರಿತ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಬಹುದು. 

IIT Bombay NCoE CCU: ಐಐಟಿ ಬಾಂಬೆಯಿಂದ ಹೊಸ ಕೇಂದ್ರ ಸ್ಥಾಪನೆ, ಕೇಂದ್ರದಿಂದ ಧನಸಹಾಯ

click me!