CBSE Term 2 Exam Date 2022: ಟರ್ಮ್-1ರ ಫಲಿತಾಂಶಕ್ಕೂ ಮುನ್ನ CBSE ಟರ್ಮ್-2 ಪರೀಕ್ಷಾ ದಿನಾಂಕ ಪ್ರಕಟ

By Suvarna NewsFirst Published Feb 10, 2022, 1:42 PM IST
Highlights

ಸಿಬಿಎಸ್ಇ 10, 12 ನೇ ತರಗತಿಗಳ ಎರಡನೇ ಅವಧಿ (Term Second ) ಬೋರ್ಡ್ ಪರೀಕ್ಷೆಗಳು ಏ.26 ರಿಂದ ಆಫ್ ಲೈನ್ ಮೋಡ್ ನಲ್ಲಿ ಪ್ರಾರಂಭವಾಗಲಿವೆ. 

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ  (Central Board of Secondary Education - ಸಿಬಿಎಸ್ಇ) 10, 12 ನೇ ತರಗತಿಗಳ ಎರಡನೇ ಅವಧಿ (Term Second) ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಆಫ್‌ಲೈನ್ ಮೂಲಕವೇ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕೆ  ಸಂಬಂಧಪಟ್ಟ ಹಲವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಿಬಿಎಸ್ಇ, ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಡು ಎರಡನೇ ಅವಧಿಯ ಬೋರ್ಡ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿಯೇ ನಡೆಸಲು ತೀರ್ಮಾನಿಸಿದೆ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ (Sanyam Bhardwaj)  ಮಾಹಿತಿ ನೀಡಿದ್ದಾರೆ
 
ಥಿಯರಿ ಪರೀಕ್ಷೆಗಳು 2022 ರ ಏಪ್ರಿಲ್ 26 ರಿಂದ ಪ್ರಾರಂಭವಾಗಲಿದ್ದು, 10 ಮತ್ತು 12 ನೇ ತರಗತಿಗಳ ಡೇಟ್ ಶೀಟ್ ನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 
ವಿದ್ಯಾರ್ಥಿಗಳು ಆಯಾ ಶಾಲಾ ಕಾಲೇಜುಗಳಲ್ಲಿಯೇ ಈ ಹಿಂದಿನ ವರ್ಷದಂತೆಯೇ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇನ್ನು ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಮಂಡಳಿ ಪ್ರಕಟಿಸಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿಯೇ ಪರೀಕ್ಷೆಗಳು ಜರುಗಲಿವೆ ಎಂದು ತಿಳಿದುಬಂದಿದೆ.

 

As per the recent notifications from , Term-II examinations will be conducted offline and the theory exams will commence from April 26, 2022. |

— CBSE News (@AllCBSENews)

Latest Videos

CBSE Term 1 Results 2022: ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಪರೀಕ್ಷೆ ಫಲಿತಾಂಶ ಶೀಘ್ರವೇ ಪ್ರಕಟ

ಇನ್ನೂ ಬಿಡುಗಡೆಯಾಗದ ಟರ್ಮ್ 1 ರ ರಿಸಲ್ಟ್‌: ಸಿಬಿಎಸ್ಇ (CBSE) 10ನೇ ತರಗತಿ ಮತ್ತು 12ನೇ ತರಗತಿ ಟರ್ಮ್ 1ರ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ. ಈ ಮೊದಲೇ ಟರ್ಮ್ 2ರ ಪರೀಕ್ಷಾ ದಿನಾಂಕವನ್ನು ಬಿಡುಗಡೆ ಮಾಡಲಾಗಿದೆ.  ಆದರೆ 10, 12 ನೇ ತರಗತಿಯ ಫಲಿತಾಂಶದ ದಿನಾಂಕವನ್ನು ಮಂಡಳಿಯು ಇನ್ನೂ ಬಹಿರಂಗಪಡಿಸಿಲ್ಲ.  10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ (Central Board of Secondary Education) ಅಧಿಕೃತ ಸೈಟ್‌ ನಲ್ಲಿ  https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.  ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಕೌನ್ಸಿಲ್ (CISCE - Council for the Indian School Certificate Examinations) ಐಸಿಎಸ್‌ಇ ( Indian Certificate of Secondary Education -  ICSE), ISC (ಭಾರತೀಯ ಶಾಲಾ ಪ್ರಮಾಣಪತ್ರ) 2022 ಸೆಮಿಸ್ಟರ್ 1 ಫಲಿತಾಂಶವನ್ನು ಫೆಬ್ರವರಿ 07 ರಂದು ಬಿಡುಗಡೆ ಮಾಡಿದೆ.

IIT Bombay NCoE CCU: ಐಐಟಿ ಬಾಂಬೆಯಿಂದ ಹೊಸ ಕೇಂದ್ರ ಸ್ಥಾಪನೆ, ಕೇಂದ್ರದಿಂದ ಧನಸಹಾಯ

ಸದ್ಯ ಸಿಬಿಎಸ್ಇ ವಿದ್ಯಾರ್ಥಿಗಳು ಟರ್ಮ್‌ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್‌ ಅಥವಾ ಫೇಲ್‌ ಎಂಬುದನ್ನು ತಿಳಿಸುವುದಿಲ್ಲ. ಸಿಬಿಎಸ್‌ಇ ಟರ್ಮ್‌ 1 ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಫಲಿತಾಂಶವನ್ನು ಟರ್ಮ್‌ 1 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌,  ಹಾಗೆಯೇ  ಏ.26 ರಿಂದ ನಡೆಯಲಿರುವ  ಟರ್ಮ್‌ 2 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಆಧಾರದಲ್ಲಿ  ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್‌ ನೀಡಿ ಅಂತಿಮ ಫಲಿತಾಂಶವನ್ನು  ಪ್ರಕಟ ಮಾಡಲಾಗುತ್ತದೆ.

2nd PUC Exam Time Table 2022: ಪಿಯು ಪರೀಕ್ಷೆ ಏ. 16 ರಿಂದ, ಯಾವ ದಿನ ಯಾವ ಪರೀಕ್ಷೆ?

click me!