ವಾಯುಪಡೆಯಲ್ಲಿ ನೇಮಕಾತಿ ಹೊಂದುವುದು ಹೇಗೆ?

By Kannadaprabha News  |  First Published Jan 13, 2024, 9:29 PM IST

ಭಾರತೀಯ ವಾಯುಪಡೆಯ ರಕ್ಷಣಾ ಪಡೆಗಳಲ್ಲಿ ಆಗಾಗ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.


ಭಾರತೀಯ ವಾಯುಪಡೆಯು ವಿಶ್ವದ ಅತಿ ದೊಡ್ಡ ರಕ್ಷಣಾ ಪಡೆಗಳಲ್ಲೊಂದಾಗಿದೆ. ವಿಶ್ವದ ಪ್ರಮುಖ ದೇಶಗಳ ವಾಯುಪಡೆಗಳಂತೆ ಭಾರತೀಯ ವಾಯುಪಡೆಯೂ ಅತಿ ಮಹತ್ವದ ಸ್ಥಾನ ಪಡೆದಿದೆ. ಇದು ಅಸ್ತಿತ್ವಕ್ಕೆ ಬಂದಿದ್ದು ಅಕ್ಟೋಬರ್ 8, 1932ರಂದು. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಬಹು ಮಹತ್ವದ ಪಾತ್ರವನ್ನು ವಹಿಸಿದೆ. ವಾಯುಪಡೆಯು ಸಾಮಾನ್ಯವಾಗಿ ಯುದ್ಧವಿಮಾನಗಳು, ಬಾಂಬರ್‌ಗಳು, ಹೆಲಿಕಾಪ್ಟರ್‌ ಗಳು ಹಾಗೂ ಇತರ ವಿಮಾನಗಳ ಸಮೂಹವನ್ನು ಹೊಂದಿದೆ.

ವಿದ್ಯಾರ್ಹತೆ: ಭಾರತೀಯ ಪ್ರಜೆಗಳು ವಾಯುಪಡೆಗೆ ಸೇರಲು ಕನಿಷ್ಠ ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ 12ನೇ ತರಗತಿ ವಿದ್ಯಾರ್ಹತೆಯನ್ನು ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ ಓದಿರಬೇಕು. ಬ್ಯಾಚುಲರ್ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ಅನ್ನು ಇಂಜಿನಿಯರಿಂಗ್ ಅಥವಾ ವಿಜ್ಞಾನ ವಿಷಯಗಳಲ್ಲಿ ಓದಿರಬೇಕು. ಈ ಎಲ್ಲ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರು ಭಾರತೀಯ ವಾಯುಪಡೆಗೆ ಸೇರಲು ಅರ್ಹರು. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವುಳ್ಳವರು ಇಲ್ಲಿ ಸೇರಬಹುದು.

Latest Videos

undefined

ಧಾರವಾಡ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಇನ್ನಾದ್ರೂ ಅಭಿವೃದ್ಧಿ ಕಾಣುತ್ತಾ?

ವಯೋಮಿತಿ

16 ರಿಂದ 19ವರೆ ವರ್ಷ.

ದೈಹಿಕ ಸದೃಢತೆ

ವಾಯುಸೇನೆಯಲ್ಲಿ ಕರಿಯರ್ ಆರಂಭಿಸಲು ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಉತ್ತಮ ದೈಹಿಕ ಸದೃಢತೆ ಜತೆಗೆ ದೃಷ್ಟಿ ಗುಣಮಟ್ಟ ಇರಬೇಕು. ಅಲ್ಲದೆ ರನ್ನಿಂಗ್, ಪುಷ್ ಅಪ್ಸ್, ಸಿಟ್ ಅಪ್ಸ್ ಇತರೆ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ನಿಗದಿತ ಮಾನದಂಡಗಳನ್ನು ಅನುಸರಿಸಲಾಗುತ್ತದೆ.

ಸಿಂಗಾಪುರ ಕಂಪೆನಿಯಲ್ಲಿ ದಾಖಲೆಯ 64.15 ಲಕ್ಷ ರೂ ವೇತನದ ಉದ್ಯೋಗ ಪಡೆದ ತಮಿಳುನಾಡು ರೈತನ ಮಗಳು

ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ

ವಾಯುಪಡೆಯ ಹುದ್ದೆಗಳಿಗೆ ಫಿಸಿಕಲ್ ಫಿಟ್ನೆಸ್ ಜತೆಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಸಹ ಇರುತ್ತದೆ. ಆಯ್ಕೆ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆಯಲಿದ್ದು, ಈ ಸೇನೆಗೆ ಸೇರಲು ಬಯಸುವ ಅಭ್ಯರ್ಥಿಗಳು ಪ್ರತಿ ಹಂತದ ಪರೀಕ್ಷೆಗಳಿಗೂ ಸಹ ತಯಾರಿ ನಡೆಸಬೇಕಿರುತ್ತದೆ.

ಸಾಫ್ಟ್ ಸ್ಕಿಲ್

ಟೆಕ್ನಿಕಲ್ ಸ್ಕಿಲ್‍ಗಳ ಜತೆಗೆ ಸಾಫ್ಟ್ ಸ್ಕಿಲ್‍ಗಳಾದ ಸಂವಹನ ಕೌಶಲ(ಕಮ್ಯುನಿಕೇಷನ್ ಸ್ಕಿಲ್), ನಾಯಕತ್ವ ಕೌಶಲ (ಲೀಡರ್‌ಶಿಪ್‌ ಸ್ಕಿಲ್), ಟೀಮ್ ವರ್ಕ್ ಸ್ಕಿಲ್ ಎಲ್ಲವು ಸಹ ವಾಯುಪಡೆಗೆ ಪ್ರಮುಖ ಅರ್ಹತೆಗಳೇ ಆಗಿವೆ. ಈ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರಿಂದ ವಾಯುಪಡೆಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ಸು ಗಳಿಸುವಿರಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು

ವಾಯುಪಡೆಗೆ ಸಮರ್ಪಣಾ ಮನೋಭಾವ ಹಾಗೂ ಪರಿಶ್ರಮ ಅಗತ್ಯ. ತಮ್ಮ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಉಳ್ಳವರು ಹಾಗೂ ಹೆಚ್ಚು ಬದ್ಧತೆ ಉಳ್ಳವರು ವಾಯುಪಡೆಯಲ್ಲಿ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಬಲ್ಲರು. ಉತ್ತಮ ಹುದ್ದೆಗಳಿಗೆ ಬಡ್ತಿ ಹೊಂದಲೂಬಹುದು.

ಸಂಪರ್ಕಗಳು: ಏವಿಯೇಷನ್ಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಇರುವ ವೃತ್ತಿಪರರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವ ಮೂಲಕ ನಿಮ್ಮ ಕರಿಯರ್ ಬೆಳವಣಿಗೆ ಕಂಡುಕೊಳ್ಳಬಹುದು.

ವಾಯುಪಡೆಯ ಹುದ್ದೆಗಳಿಗೆ ವೇತನ

1 ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗೆ ರು.74,264 ವರೆಗೆ ವೇತನ ಪ್ಯಾಕೇಜ್.

2 ಟೆಕ್ನಿಕಲ್ ಬ್ರ್ಯಾಂಚ್ ಹುದ್ದೆಗೆ ರೂ.65,514 ವರೆಗೆ ವೇತನ ಪ್ಯಾಕೇಜ್.

3 ಗ್ರೌಂಡ್ ಡ್ಯೂಟಿ ಬ್ರ್ಯಾಂಚ್ ಹುದ್ದೆಗೆ ರು.63,014 ವರೆಗೆ ವೇತನ ಪ್ಯಾಕೇಜ್.

ವಾಯುಪಡೆಯಲ್ಲಿ ಇರುವ ಪ್ರಮುಖ ಹುದ್ದೆಗಳೆಂದರೆ,

1 ಪೈಲಟ್ ಮತ್ತು ನಾವಿಗೇಟರ್ಸ್

2 ಮೆಟಾಲರ್ಜಿಕಲ್ ಆಫೀಸರ್ಸ್ ಮತ್ತು ನಾವಿಗೇಟರ್ಸ್

3 ಎಜುಕೇಷನಲ್ ಇನ್ಸಟ್ರಕ್ಟರ್

4 ಇನ್ವೆಂಟ್ರಿ / ಮೆಟೀರಿಯಲ್ ಮ್ಯಾನೇಜರ್

5 ಅಕೌಂಟ್ಸ್ / ಫೈನಾನ್ಸ್ ಮ್ಯಾನೇಜರ್ಸ್

6 ಮೆಡಿಕಲ್ / ನಸಿರ್ಂಗ್ ಸ್ಟಾಫ್

7 ಫಿಸಿಕಲ್ ಟ್ರೈನಿಂಗ್ ಇನ್ಸಟ್ರಕ್ಟರ್

8 ಇಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಇಲೆಕ್ಟ್ರಾನಿಕ್ಸ್ / ಏರೋನಾಟಿಕಲ್ ಆಫೀಸರ್

9 ಕಂಪ್ಯೂಟರ್ ಪ್ರೋಗ್ರಾಮರ್ಸ್‌ / ಆಪರೇಟರ್ / ಅಡ್ಮಿನಿಸ್ಟ್ರೇಟರ್ಸ್

10 ಕಮ್ಯುನಿಕೇಷನಲ್ ಅಸಿಸ್ಟಂಟ್

11 ಫೈಯರ್ ಫೈಟರ್ / ಫೈಯರ್ ಆಫೀಸರ್

12 ಟೆಕ್ನಿಕಲ್ ಫಿಟ್ಟರ್ಸ್

13 ಸೆಕ್ಯೂರಿಟಿ ಆಫೀಸರ್ / ಸೂಪರ್‌ ವೈಸರ್‌

14 ಸ್ಟೆನೊ ಕ್ಲರ್ಕ್ / ಅಸಿಸ್ಟಂಟ್, ಸೂಪರ್‌ ವೈಸರ್‌, ಆಪರೇಟರ್

ವಾಯುಪಡೆಯಲ್ಲಿ ಆಗಾಗ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗುತ್ತದೆ. ಆ ಪ್ರಕಾರ ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು.

----------

-ಜ್ಞಾನದೀಪ

click me!