SSLC ಪರೀಕ್ಷೆ ವೇಳೆ ಜೇನುನೊಣ ದಾಳಿ, ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

By Suvarna News  |  First Published Apr 4, 2022, 1:51 PM IST

ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್‌ ಮೈಕಲ್ ಸ್ಕೂಲ್ ನ ಪರೀಕ್ಷಾ ಕೇಂದ್ರದಲ್ಲಿ ಜೇನುನೊಣಗಳು ದಾಳಿ‌ ನಡೆಸಿದ ಪರಿಣಾಮ ವಿದ್ಯಾರ್ಥಿಗಳು  ಗಾಯಗೊಂಡಿರುವ ಘಟನೆ ನಡೆದಿದೆ.


ಹುಬ್ಬಳ್ಳಿ: ಎಸ್.ಎಸ್.ಎಲ್.ಸಿ  ಪರೀಕ್ಷೆ (SSLC Exam) ಹಾಲ್ ನಲ್ಲಿ ಜೇನುನೊಣಗಳು (honeybees) ದಾಳಿ‌ ನಡೆಸಿದ ಪರಿಣಾಮ ವಿದ್ಯಾರ್ಥಿಗಳು  ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್‌ ಮೈಕಲ್ ಸ್ಕೂಲ್ ನ (St. Michael High School ) ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಗಣಿತ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಏಕಾಏಕಿ ಜೇನುಹುಳು ದಾಳಿಯಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳು ಶಾಲಾ ಸಿಬ್ಬಂದಿ, ಪರೀಕ್ಷಾ ಕೇಂದ್ರದ (Exam Centre) ಭದ್ರತೆ ನಿಯೋಜನೆಗೊಂಡಿದ್ದ ಪೊಲೀಸರು ಓಡಿ  ಹೋಗಿದ್ದಾರೆ. 

ಜೇನುನೊಣಗಳ ದಾಳಿಯಿಂದ ನಾಲ್ವರು ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಿಡಿಗೇಡಿಗಳಿಂದ ಜೇನು ಹುಟ್ಟಿಗೆ ಕಲ್ಲು ಎಸೆದಿರಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೇನುನೊಣಗಳಿ ದಾಳಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇನ್ನೂ ಪರೀಕ್ಷಾ ಕೇಂದ್ರದಲ್ಲಿದ್ದ ಮಕ್ಕಳು ಸೇರಿದಂತೆ ಪೊಲೀಸ್ ಸಿಬ್ಬಂದಿಗೂ ಜೇನು ಹುಳುಗಳು ಕಚ್ಚಿದ್ದು, ವಿದ್ಯಾರ್ಥಿ ಇಮಾಮ್, ಹಾಗೂ ಪೋಷಕರಾದ ರಾಜೇಶ್ವರಿ ಕೆ, ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾ ದ್ಯಾಮನೂರು ಅವರನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಜೇನುನೊಣಗಳ  ದಾಳಿಯಿಂದ‌ ಮುಖ, ಮೈಕೈ ಮೇಲೆ ತೀವ್ರತರವಾದ ಗಾಯಗಳಾಗಿವೆ.

Latest Videos

undefined

ಚಿಕ್ಕಮಗಳೂರಿನಲ್ಲಿ ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಕೊಲೆ

ಧಿಡೀರ್ ದಾಳಿಯಿಂದ ಹಾಲ್ ನಲ್ಲಿದ್ದ ವಿದ್ಯಾರ್ಥಿಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಬಳಿಕ ಸ್ಥಳೀಯರ ಸಹಕಾರದಿಂದ ಟೈರ್ ಹಾಗೂ ಕಸದ ರಾಶಿಗೆ ಬೆಂಕಿಹಚ್ಚಿ ಜೇನುನೊಣಗಳನ್ನು ಚದುರಿಸಲಾಗಿದೆ. ಸ್ಥಳಕ್ಕೆ ಕೇಶ್ವಾಪುರ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ಭೇಟಿ ನೀಡಿ ಗಾಯಳುಗಳನ್ನು  ತಮ್ಮದೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕಳೆದ ವಾರ ಶಿವಮೊಗ್ಗದಲ್ಲೂ ದಾಳಿ: ಶಿವಮೊಗ್ಗ (Shivamogga) ಜಿಲ್ಲೆಯ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನ (Mary Immaculate Girls High School) ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆಯಲು ಬಂದ ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಪರೀಕ್ಷೆಗೆ ಬಿಡಲು ಬಂದ ಪೋಷಕರ ಮೇಲೆ ಜೇನು ನೊಣ ದಾಳಿ ಮಾಡಿತ್ತು. ಪರೀಕ್ಷೆ ಆರಂಭವಾದ ದಿನವೇ ಈ ಘಟನೆ ನಡೆದಿತ್ತು. ಘಟನೆಯಿಂದ ಸಮಯ ತಡವಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲು ಡಿಡಿಪಿಐ ಸೂಚಿಸಿದ್ದರು. ಜೇನು ನೊಣ ದಾಳಿ ಬಳಿಕ ಶಾಲೆಯ ಬಳಿಯೇ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು. 

Hubballi Smart City ದೇಶದ ಮೊದಲ ಗ್ರೀನ್ ಮೋಬಿಲಿಟಿ ಕಾರಿಡಾರ್ ಶೀಘ್ರ ಸಂಚಾರಕ್ಕೆ‌

click me!