ಮುಖ್ಯಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥರ ಮುಂದೆ ಶಿಕ್ಷಕಿಯರು ಕಣ್ಣೀರು ಹಾಕಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ (ಜು.13): ಮುಖ್ಯಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥರ ಮುಂದೆ ಶಿಕ್ಷಕಿಯರು ಕಣ್ಣೀರು ಹಾಕಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ಡಿವಿಜಿ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣಪ್ಪ ವಿರುದ್ದ ದೂರು ನೀಡಿದ ಶಿಕ್ಷಕಿಯರು. ಶಾಲೆಯಲ್ಲಿ ಶಿಕ್ಷಕಿಯರನ್ನ ಅವಾಚ್ಯವಾಗಿ ನಿಂದಿಸುವುದು, ಅಸಭ್ಯವಾಗಿ ವರ್ತಿಸುತ್ತಾರೆಂದು ಆರೋಪಿಸಿದ ಶಿಕ್ಷಕಿಯರು. ಶಿಕ್ಷಕಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ಸಹ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡಿದ್ದ 4 ತಿಂಗಳ ಗರ್ಭಿಣಿ ಮಹಿಳೆ ಅನುಮಾನಾಸ್ಪದ ಸಾವು!
ಶಿಕ್ಷಕನ ಅಸಭ್ಯ ವರ್ತನೆ ಪ್ರಶ್ನಿಸಿದರೆ ಜಾತಿನಿಂದನೆ ಸೇರಿದಂತೆ ಇತರೆ ಕೇಸ್ ದಾಖಲಿಸುವುದಾಗಿ ಬೆದರಿಕೆಯೊಡ್ಡತ್ತಿದ್ದಾನೆಂದು ಶಿಕ್ಷಕಿಯರು ಅಳಲು ತೋಡಿಕೊಂಡಿದ್ದಾರೆ. ಮುಖ್ಯ ಶಿಕ್ಷಕನಿಂದ ದಿನನಿತ್ಯ ಕಿರುಕುಳ ಆಗುತ್ತಿದೆ ನಮಗೆ ರಕ್ಷಣೆ ಒದಗಿಸುವಂತೆ ಶಾಸಕರ ಬಳಿ ಕಣ್ಣೀರು ಹಾಕಿದ ಶಿಕ್ಷಕಿಯರು.