ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗ

By Kannadaprabha News  |  First Published Jul 15, 2021, 10:27 AM IST
  • ರಾಜ್ಯದ 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಭತ್ಯೆ
  • ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 2021ರ ಮೇ ಮತ್ತು ಜೂನ್‌ ತಿಂಗಳ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆ
  • ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚವನ್ನು (ಕುಕಿಂಗ್‌ ಕಾಸ್ಟ್‌) ನಗದು ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ

ಬೆಂಗಳೂರು (ಜು.15):  ರಾಜ್ಯದ 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 2021ರ ಮೇ ಮತ್ತು ಜೂನ್‌ ತಿಂಗಳ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚವನ್ನು (ಕುಕಿಂಗ್‌ ಕಾಸ್ಟ್‌) ನಗದು ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ನಗದನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆಗೆ ತೀರ್ಮಾನಿಸಿದ್ದು, ಸಂಬಂಧಿಸಿದ ಎಲ್ಲ ಮಕ್ಕಳ ಬ್ಯಾಂಕ್‌ ಖಾತೆಗಳ ಮಾಹಿತಿ ಸಂಗ್ರಹಿಸಿ ನೀಡುವಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್‌ ಸೂಚನೆ ನೀಡಿದ್ದಾರೆ.

Tap to resize

Latest Videos

SSLC ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿ ಮಾಹಿತಿಗೆ ಎಸ್‌ಎಂಎಸ್‌..!

ಕಳೆದ ವರ್ಷ ಕೋವಿಡ್‌ ಕಾರಣದಿಂದ ಶಾಲೆಗಳು ಭೌತಿಕವಾಗಿ ನಡೆಯದ ಕಾರಣ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತವಾಗಿತ್ತು. ಇದಕ್ಕೆ ಪರ್ಯಾಯವಾಗಿ ಆಹಾರ ಧಾನ್ಯಗಳನ್ನು ಮಕ್ಕಳ ಮನೆಬಾಗಿಲಿಗೇ ಇಲಾಖೆ ತಲುಪಿಸಿತ್ತು. ಅದೇ ರೀತಿ ಪ್ರತೀ ವರ್ಷ ಬೇಸಿಗೆ ರಜೆ ಅವಧಿಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲಾಗಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್

ಆದರೆ, ಈ ಬಾರಿ ಕೇಂದ್ರ ಸರ್ಕಾರದ ಕೋವಿಡ್‌ ಸಂದರ್ಭದಲ್ಲಿ ಪ್ರತಿ ಕುಟುಂಬಗಳಿಗೂ ಹೆಚ್ಚುವರಿ ಪಡಿತರ ನೀಡಿದ್ದರಿಂದ ಬೇಸಿಗೆ ಅವಧಿಯ ಬಿಸಿಯೂಟ ನೀಡಬೇಕಿಲ್ಲ ಎಂದು ಆದೇಶಿಸಿದ್ದು, ಕೇವಲ ಆಹಾರ ತಯಾರಿಕಾ ವೆಚ್ಚ (ಕುಕಿಂಗ್‌ ಕಾಸ್ಟ್‌) ನೀಡಲು ಆದೇಶಿಸಿತ್ತು. ಅದರಂತೆ, 1ರಿಂದ 5ನೇ ತರಗತಿ ವರೆಗಿನ ಪ್ರತಿ ಮಗುವಿಗೆ ದಿನಕ್ಕೆ 5.70 ರು., 6ರಿಂದ 8ನೇ ತರಗತಿ ಮಕ್ಕಳಿಗೆ 6.40 ರು.ನಂತೆ ಒಟ್ಟು ಮೇ ಮತ್ತು ಜೂನ್‌ ತಿಂಗಳಿಗೆ ಸುಮಾರು 300 ರು.ನಿಂದ 400 ರು.ನಷ್ಟುಆಹಾರ ತಯಾರಿಕಾ ಪರಿವರ್ತನಾ ವೆಚ್ಚವನ್ನು ನೀಡಲಾಗುವುದು. ಇದಕ್ಕಾಗಿ 1ರಿಂದ 8ನೇ ತರಗತಿ ವರೆಗಿನ ಎಲ್ಲ ಮಕ್ಕಳ ಬ್ಯಾಂಕ್‌ ಖಾತೆಗಳ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!