ಚುನಾವಣೆ ಘೋಷಣೆಯಾಗುವ ಮುನ್ನವೇ ಸರ್ಕಾರಿ ಶಾಲೆಯ ಶಿಕ್ಷಕರು ಸಂಹಿತೆಯನ್ನು ಮೀರಿ ರಾಜಕೀಯ ಪಕ್ಷದ ಪರವಾಗಿ ಪೌರೋಹಿತ್ಯ ವಹಿಸುತ್ತಿರುವುದು ಸಾರ್ವಜನಿಕರು ಮತ್ತು ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ತಾವು ಹಾಕಿದ್ದ ರಾಜಕೀಯ ಪಕ್ಷದ ಪರವಾಗಿನ ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ.
ಕೊಪ್ಪಳ (ಮಾ.3) : ಚುನಾವಣೆ ಘೋಷಣೆಯಾಗುವ ಮುನ್ನವೇ ಸರ್ಕಾರಿ ಶಾಲೆಯ ಶಿಕ್ಷಕರು ಸಂಹಿತೆಯನ್ನು ಮೀರಿ ರಾಜಕೀಯ ಪಕ್ಷದ ಪರವಾಗಿ ಪೌರೋಹಿತ್ಯ ವಹಿಸುತ್ತಿರುವುದು ಸಾರ್ವಜನಿಕರು ಮತ್ತು ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ತಾವು ಹಾಕಿದ್ದ ರಾಜಕೀಯ ಪಕ್ಷದ ಪರವಾಗಿನ ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ.
ಕನಕಗಿರಿ(Kanakagiri)ಯಲ್ಲಿ ಶುರುವಾದ ದೂರು ಪ್ರಕ್ರಿಯೆ ಈಗ ಜಿಲ್ಲಾದ್ಯಂತ ವ್ಯಾಪಿಸಿದೆ. ಹಳೆಯ ಪೋಸ್ಟ್‌ಗಳನ್ನು ತೆಗೆದು ದೂರು ನೀಡುವ ಪ್ರಕ್ರಿಯೆಯೂ ಶುರುವಾಗಿದೆ. ಒಂದು ಪಕ್ಷದವರು ಇಂಥವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇ ತಡ ಮತ್ತೊಂದು ಪಕ್ಷದವರು ಮತ್ತೊಂದು ದೂರು ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ(Department of Public Education)ಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
undefined
Pulwama attack ವ್ಯವಸ್ಥಿತ ಪಿತೂರಿ ಎಂದ ಮುಖ್ಯ ಶಿಕ್ಷಕ; ಬಿಜೆಪಿ ಕೆಂಡಾಮಂಡಲ
ಪುಲ್ವಾಮ ದಾಳಿ(Pulwama attack)ಯ ಕುರಿತು ಪೋಸ್ಟ್ ಮಾಡಿದ್ದ ಶಿಕ್ಷಕನನ್ನು ಈಗಾಗಲೇ ಅಮಾನತು ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ ಪರವಾಗಿ ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಪೋಸ್ಟ್ ಮಾಡಿದ ಆಧಾರದ ಮೇಲೆ ಭಾನಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸೋಮಶೇಖರ ಹರ್ತಿ(Somashekhar harti) ವಿರುದ್ಧ ಕ್ರಮಕೈಗೊಳ್ಳುವುದಕ್ಕಾಗಿ ಡಿಡಿಪಿಐಗೆ ಸ್ವತಃ ಬಿಇಒ ಅವರು ಪತ್ರ ಬರೆದಿದ್ದಾರೆ. ಈ ನಡುವೆ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಸುನೀಲ ಹೆಸರೂರು ಅವರು ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ನಡುವೆ ಡಿಎಸ್‌ಎಸ್ ಮುಖಂಡ ಮಲ್ಲಪ್ಪ ಪೂಜಾರ ಅವರು ಸಿಇಒ ಅವರಿಗೆ ಎರಡು ಪ್ರತ್ಯೇಕ ದೂರನ್ನು ದಾಖಲೆ ಸಮೇತ ನೀಡಿ, ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಬಹದ್ದೂರುಬಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರನಗೌಡ ಅವರು ಪಶ್ಚಿಮ ಕ್ಲಸ್ಟರ್ ಗ್ರೂಪ್‌ನಲ್ಲಿ ಬಿಜೆಪಿ ಪರವಾಗಿ ಪೋಸ್ಟ್ ಹಾಕಿದ್ದಾರೆ. ಹಾಗೆಯೇ ಸಂಸದರ ಆಪ್ತ ಕಾರ್ಯದರ್ಶಿಯಾಗಿರುವ ಪ್ರಥಮ ದರ್ಜೆ ಸಹಾಯಕ ಅಯ್ಯಣ್ಣ ಮರದೂರು ಅವರು ಅನೇಕ ಬಿಜೆಪಿ ಪರ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಸ್ಕ್ರೀನ್‌ಶಾಟ್‌ಗಳೊಂದಿಗೆ ದೂರು ಸಲ್ಲಿಸಿದ್ದಾರೆ.
ಬೆಳಕಿಗೆ ಬಂದಿರುವ ಪ್ರಕರಣಗಳು:
ಇವು ಕೇವಲ ಬೆಳಕಿಗೆ ಬಂದಿರುವ ಪ್ರಕರಣಗಳಾಗಿವೆ. ಇದಲ್ಲದೆಯೇ ಅನೇಕರು ನಿತ್ಯವೂ ರಾಜಕೀಯ ಪಕ್ಷದ ಪೌರೋಹಿತ್ಯ ವಹಿಸಿ ಪೋಸ್ಟ್ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇದೆಲ್ಲವೂ ಈಗ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಹೀಗೆ ಸಾಲು ಸಾಲು ದೂರುಗಳು ದಾಖಲಾಗುತ್ತಿದ್ದಂತೆ ಅನೇಕರು ತಮ್ಮ ಪೋಸ್ಟ್‌ಗಳನ್ನು ಡಿಲಿಟ್ ಮಾಡುತ್ತಿದ್ದಾರೆ. ಕೆಲವರಂತು ತಮ್ಮ ಫೇಸ್‌ಬುಕ್ ಖಾತೆಯನ್ನು ಲಾಕ್ ಮಾಡಿದ್ದಾರೆ.
ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸೇ ಇಲ್ಲ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು
ಹದ್ದಿನ ಕಣ್ಣು:
ಈಗಾಗಲೇ ಜಿಲ್ಲಾಡಳಿವೂ ಇದರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಂಥ ಪೋಸ್ಟ್‌ಗಳು ಸಮೇತ ಸಲ್ಲಿಕೆಯಾಗುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳಲಿದೆ.