4-5 ಗ್ರಾ.ಪಂ.ಗೊಂದು ಸರ್ಕಾರಿ ಶಾಲೆಗೆ ಚಿಂತನೆ: ಸಚಿವ ನಾಗೇಶ್‌

Kannadaprabha News   | Asianet News
Published : Oct 29, 2021, 10:50 AM IST
4-5 ಗ್ರಾ.ಪಂ.ಗೊಂದು ಸರ್ಕಾರಿ ಶಾಲೆಗೆ ಚಿಂತನೆ: ಸಚಿವ ನಾಗೇಶ್‌

ಸಾರಾಂಶ

*   ಗ್ರಾಮಸಭೆಯಲ್ಲಿ ಎಲ್ಲರೂ ಒಪ್ಪಿದರೆ ಬೆಳಲಗೆರೆಯಿಂದಲೇ ಚಾಲನೆ *   ರಾಜ್ಯದ ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈ ಚಿಂತನೆ *   ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎನ್‌ಇಪಿ  

ದಾವಣಗೆರೆ(ಅ.29):  ರಾಜ್ಯದಲ್ಲಿ(Karnataka) ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ನಾಲ್ಕೈದು ಗ್ರಾಪಂಗಳ ವ್ಯಾಪ್ತಿಯನ್ನು ಸೇರಿಸಿಕೊಂಡು ಒಂದೇ ಕಡೆ ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ಆಲೋಚನೆ ಸರ್ಕಾರಕ್ಕಿದೆ. ಗ್ರಾಮಸಭೆಯಲ್ಲಿ ಜನರೆಲ್ಲ ಸೇರಿ ಒಪ್ಪಿಗೆ ಸೂಚಿಸಿದರಷ್ಟೇ ಮುಂದಿನ ಶೈಕ್ಷಣಿಕ ಸಾಲಿನಿಂದ ಅಂತಹ ಶಾಲೆ ಸ್ಥಾಪಿಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಹೇಳಿದ್ದಾರೆ. 

ಚನ್ನಗಿರಿ ತಾ. ಬೆಳಲಗೆರೆ ಗ್ರಾಮದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ(Education Department), ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗ್ರಾಪಂನಿಂದ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ(Government School) ಶತಮಾನೋತ್ಸವ ಕಟ್ಟಡ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು. ಬೆಳಲಗೆರೆ ಗ್ರಾಮಸ್ಥರು ಒಪ್ಪಿದರೆ, ಇಲ್ಲಿಂದಲೇ ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುತ್ತೇವೆ. ಒಂದೇ ಕಡೆ ಉತ್ತಮ ಶಾಲೆ(School) ಆರಂಭಿಸಿ, ಅದನ್ನು ಮಾದರಿ ಶಾಲೆಯಾಗಿಸುತ್ತೇವೆ ಎಂದು ಘೋಷಿಸಿದರು. ಇದೇ ವೇಳೆ, ತುಂಬಾ ದೂರದ ಗ್ರಾಮಗಳ ಮಕ್ಕಳು(Children) ಶಾಲೆಗೆ ಬಂದು, ಹೋಗಲು ವಾಹನ ವ್ಯವಸ್ಥೆ ಮಾಡುವ ಆಲೋಚನೆಯೂ ಸರ್ಕಾರಕ್ಕಿದೆ ಎಂದೂ ತಿಳಿಸಿದರು.

ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ; ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರು

ಶಿಕ್ಷಕರ ನೇಮಕ ಮಾಡಿದ್ದು ಅವರ ಸಂಸಾರ ಅನುಕೂಲಕ್ಕಲ್ಲ: ನಾಗೇಶ ಕಿಡಿ

ಶಿಕ್ಷಕರನ್ನು(Teachers) ನೇಮಕ(Recruitment) ಮಾಡಿರುವುದು ಮಕ್ಕಳಿಗೆ ಪಾಠ(Class) ಮಾಡಲಿಕ್ಕಾಗಿಯೇ ಹೊರತು, ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಶಿಕ್ಷಕರ ಧೋರಣೆಗೆ ಹರಿಹಾಯ್ದಿದ್ದಾರೆ. 3 ವರ್ಷದಿಂದ ಶಿಕ್ಷಕರ ವರ್ಗಾವಣೆ(Transfer of Teachers) ಪ್ರಕ್ರಿಯೆಯೇ ನಿಂತಿತ್ತು. ಎರಡು ದಿನದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರುವಾಗಿದೆ. ಬಹುತೇಕ ಎಲ್ಲಾ ಶಿಕ್ಷಕರೂ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವೇ ಕೆಲ ಶಿಕ್ಷಕರ ವೈಯಕ್ತಿಕ ಸಮಸ್ಯೆಗಳನ್ನು ಸಾಮೂಹಿಕ ಸಮಸ್ಯೆಯೆಂಬಂತೆ ಬಿಂಬಿಸಲಾಗದು. ಅಂತಹ ಶಿಕ್ಷಕರು ಕೆಲಸಕ್ಕೆ ಸೇರುವಾಗ ಜಿಲ್ಲಾವಾರು ಆಯ್ಕೆ ಅಂತ ಗೊತ್ತಿರಲಿಲ್ಲವೇ ಎಂದು ಕಿಡಿಕಾರಿದರು. ಶಿಕ್ಷಕರ ಸಮಸ್ಯೆಗಿಂತಲೂ ಮಕ್ಕಳ ಸಮಸ್ಯೆಯನ್ನು ನಾವು ಮೊದಲು ಬಗೆಹರಿಸಬೇಕಿದೆ. ಆ ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಪರಿಹರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎನ್‌ಇಪಿ

ಬರುವ ಶೈಕ್ಷಣಿಕ ವರ್ಷದಿಂದಲೇ ಪ್ರಾಥಮಿಕ ಶಿಕ್ಷಣ ಹಂತದಲ್ಲೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP) ಅಳವಡಿಸಲು ರಾಜ್ಯ ಸರ್ಕಾರ(Government of Karnataka) ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಪ್ರಾಥಮಿಕ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸುವ ಬಗ್ಗೆ ಮದನಗೋಪಾಲ್‌ ನೇತೃತ್ವದ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಿದ್ದು, ಶಿಕ್ಷಣ ತಜ್ಞರು, 2-3 ಸ್ವಯಂ ಸೇವಾ ಸಂಸ್ಥೆಗಳು ಟಾಸ್ಕ್‌ ಫೋರ್ಸ್‌ನಲ್ಲಿರಲಿವೆ. ಪಠ್ಯಕ್ರಮ, ತರಬೇತಿ ಇತರೆ ವಿಷಯಗಳ ಬಗ್ಗೆ ಕಾರ್ಯಪಡೆ ಸಮಿತಿ ಚರ್ಚಿಸಲಿದೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ