"ಕನ್ನಡ ಪಾಠ ಶಾಲೆ ದುಬೈ"ಗೆ ಕರ್ನಾಟಕ ಸರ್ಕಾರದ ಮನ್ನಣೆ..!

By Suvarna NewsFirst Published Apr 17, 2024, 11:49 AM IST
Highlights

ಕನ್ನಡ ಪಾಠ ಶಾಲೆ ದುಬೈನ ಆಯೋಜಕರ ನಿಯೋಗವು ಏಪ್ರಿಲ್ 10 ರಂದು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿತ್ತು. ಈ  ವೇಳೆ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿದ್ದು, ತಮ್ಮ ನಿಸ್ವಾರ್ಥ ಕನ್ನಡ ಸೇವೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರಾವೆಗಳ ಸಮೇತವಾಗಿ ನಿರೂಪಿಸಿದ ಫಲವಾಗಿ ಮನ್ನಣೆ ದೊರೆತಿದೆ. 

ದುಬೈ(ಏ.17):  2014 ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷಾ ಬೋಧನೆಯನ್ನು ಉಚಿತವಾಗಿ ಮಾಡುತ್ತಾ ಬಂದಿರುವ ಕನ್ನಡ ಮಿತ್ರರು ಯುಎಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ಪಾತ್ರ ನೀಡಿ ವಿದೇಶದಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡಿದೆ.

ಕನ್ನಡ ಪಾಠ ಶಾಲೆ ದುಬೈನ ಆಯೋಜಕರ ನಿಯೋಗವು ಏಪ್ರಿಲ್ 10 ರಂದು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿತ್ತು. ಈ  ವೇಳೆ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿದ್ದು, ತಮ್ಮ ನಿಸ್ವಾರ್ಥ ಕನ್ನಡ ಸೇವೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರಾವೆಗಳ ಸಮೇತವಾಗಿ ನಿರೂಪಿಸಿದ ಫಲವಾಗಿ ಮನ್ನಣೆ ದೊರೆತಿದೆ. 

ಕೇಂದ್ರೀಯ ಪಠ್ಯದಿಂದ ಬಾಬ್ರಿ ಧ್ವಂಸ, ಗೋದ್ರಾ ಹತ್ಯಾಕಾಂಡಕ್ಕೆ ಕೊಕ್‌..!

ಕನ್ನಡ ಪಾಠ ಶಾಲೆ ದುಬೈ ಬಗ್ಗೆ ಸಂಪೂರ್ಣ ಅರಿವಿರುವ  ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯೆಕ್ಷೆ ಡಾ ಆರತಿ ಕೃಷ್ಣ ರವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಈ ಬಗ್ಗೆ ವಿವರಿಸಿದ್ದು ಅಧಿಕೃತ ಮನ್ನಣೆಗೆ ಸಹಕಾರಿಯಾಗಿದೆ ಎಂದು ಕನ್ನಡ ಪಾಠ ಶಾಲೆ ದುಬೈನ ಅಧ್ಯಕ್ಷ. ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.

ಕನ್ನಡ ಮಿತ್ರರು ಯುಎಇ ನಿಯೋಗ ಸದಸ್ಯರಾದ ಸಿದ್ದಲಿಂಗೇಶ್ ರೇವಪ್ಪ, ಸುನಿಲ್ ಗವಾಸ್ಕರ್, ನಾಗರಾಜ್ ರಾವ್, ಚಂದ್ರಶೇಖರ ಸಂಕೋಲೆ ಮತ್ತು ಕೊಟ್ರೇಶ್ ಯಾರ್ಲಾಗಟ್ಟಿ ತಮ್ಮ ಶ್ರಮ ಫಲಕೊಟ್ಟ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

click me!