ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸಿ: ಶಾಲೆಗಳಿಗೆ ಸರ್ಕಾರದ ಸೂಚನೆ

By Kannadaprabha News  |  First Published Aug 18, 2022, 12:53 PM IST

ಬೆಂಗಳೂರಿನ ನಗರದ ಕೆಲ ಶಾಲೆಗಳಲ್ಲಿ ಸಾಮೂಹಿಕ ಗೀತೆ ವೇಳೆ ರಾಷ್ಟ್ರಗೀತೆ ಹಾಡಿಸುತ್ತಿಲ್ಲ ಎಂದು ದೂರುಗಳು ಬಂದಿವೆ. ಅಂತಹ ಶಾಲೆಗಳಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿ ಕಡ್ಡಾಯವಾಗಿ ರಾಷ್ಟ್ರಗೀತೆ ಗಾಯನಕ್ಕೆ ಸೂಚನೆ ನೀಡಿದ ಸರ್ಕಾರ 


ಬೆಂಗಳೂರು(ಆ.18):  ಸಾಮೂಹಿಕ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ ಹಾಡಿಸುವುದು ಕಡ್ಡಾಯವಿದ್ದರೂ ಬೆಂಗಳೂರಿನ ಕೆಲ ಶಾಲೆಗಳು ಈ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಗಾಯನ ಕಡ್ಡಾಯ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಮತ್ತೆ ಹೊರಡಿಸಿದೆ.

ನಗರದ ಕೆಲ ಶಾಲೆಗಳಲ್ಲಿ ಸಾಮೂಹಿಕ ಗೀತೆ ವೇಳೆ ರಾಷ್ಟ್ರಗೀತೆ ಹಾಡಿಸುತ್ತಿಲ್ಲ ಎಂದು ದೂರುಗಳು ಬಂದಿವೆ. ಅಂತಹ ಶಾಲೆಗಳಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿ ಕಡ್ಡಾಯವಾಗಿ ರಾಷ್ಟ್ರಗೀತೆ ಗಾಯನಕ್ಕೆ ಸೂಚನೆ ನೀಡಿದೆ.

Tap to resize

Latest Videos

Uttar Pradesh ಮದರಸಾಗಳಲ್ಲಿ ಇನ್ನು ಮುಂದೆ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ!

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದು ಕಡ್ಡಾಯ ಎಂಬ ಸ್ಪಷ್ಟನಿಯಮವಿದೆ. ಆದರೂ, ಕೆಲ ಶಾಲೆಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿದಾಗ ನಿಯಮ ಉಲ್ಲಂಘನೆ ಸಾಬೀತಾಗಿದೆ. ಆ ಶಾಲೆಗಳು ಮತ್ತೆ ನಿಯಮ ಉಲ್ಲಂಘಿಸಿದರೆ ಕ್ರಮ ವಹಿಸಬೇಕಾಗುತ್ತದೆ. ಸಾಮೂಹಿಕ ಪ್ರಾರ್ಥನೆಗೆ ಸ್ಥಳಾವಕಾಶದ ಕೊರತೆ ಇದ್ದರೆ ತರಗತಿ ಒಳಗೇ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಬೇಕು ಎಂದು ಸೂಚಿಸಿದೆ.
 

click me!