Caution Against Ed-tech Companies: ಆನ್‌ಲೈನ್ ಶಿಕ್ಷಣ ಆ್ಯಪ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರಕಾರ

By Suvarna News  |  First Published Dec 23, 2021, 8:40 PM IST
  •  ಶಿಕ್ಷಣದಲ್ಲಿ ತಂತ್ರಜ್ಞಾನದ  ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ ಎಚ್ಚರಿಕೆ ನೀಡಿದ ಕೇಂದ್ರ
  • ಉಚಿತ ಸೇವೆಗಳ ಸೋಗಿನಲ್ಲಿ ಮೋಸ ಮಾಡುತ್ತಿವೆ ಆನ್‌ಲೈನ್ ಶಿಕ್ಷಣ ಆ್ಯಪ್‌  ಕಂಪೆನಿ
  • ಚಂದಾದಾರರಾದರೆ ಸಂಪೂರ್ಣ ಮಾಹಿತಿ ಟ್ರ್ಯಾಕ್ ಆಗುವ ಸಾಧ್ಯತೆ

ನವದೆಹಲಿ(ಡಿ.23): ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನದ  ಬಳಕೆ ವ್ಯಾಪಕ ಪ್ರಭಾವ ಬೀರುತ್ತಿದೆ.  ಅನೇಕ ಎಡ್-ಟೆಕ್‌ ( Ed-tech) ಕಂಪನಿಗಳು ಆನ್‌ಲೈನ್ (online)ನಲ್ಲಿ ಕೋರ್ಸ್‌ಗಳು, ಟ್ಯುಟೋರಿಯಲ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಇತ್ಯಾದಿಗಳನ್ನು ನೀಡಲು ಪ್ರಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಪೋಷಕರು ,ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲರೂ ಆನ್‌ಲೈನ್ ಕಂಟೆಂಟ್ ಮತ್ತು ಕೋಚಿಂಗ್ ಅನ್ನು ಎಡ್-ಟೆಕ್‌ ಕಂಪೆನಿಗಳಿಂದ ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕೆಂದು ಕೇಂದ್ರ ಸರಕಾರಕಾರವು ಗುರುವಾರ ನಾಗರಿಕರಿಗೆ ಸಲಹೆಯನ್ನು ನೀಡಿದೆ.

ಮುಖ್ಯವಾಗಿ ಕೆಲವು ಕಂಪನಿಗಳು ಭರವಸೆ ನೀಡುವ ಉಚಿತ ಸೇವೆಗಳ ಕೊಡುಗೆಯನ್ನು ಬಹಳ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಕೆಲವು ಎಡ್-ಟೆಕ್ ಕಂಪನಿಗಳು ಉಚಿತ ಸೇವೆಗಳನ್ನು ನೀಡುವ ಸೋಗಿನಲ್ಲಿ ಬಡ ಮತ್ತು ದುರ್ಬಲ ಕುಂಟುಬಗಳನ್ನು ಗುರಿಯಾಗಿಸಿ ಆನ್‌ಲೈನ್  ಮೂಲಕ ದೇಣಿಗೆ ವರ್ಗಾವಣೆ ಆದೇಶಕ್ಕೆ ಸಹಿ ಹಾಕಿಸಿಕೊಳ್ಳುತ್ತಿರುವ ಇಲ್ಲವೇ ಹಣ ವರ್ಗಾವಣೆ ಆಗುವಂತೆ Auto-debit ಕ್ರಿಯೆಯನ್ನು ಸಕ್ರಿಯಗೊಳಿಸುತ್ತಿರುವ ಅಂಶಗಳು ಬೆಳಕಿಗೆ ಬರುತ್ತಿದೆ ಎಂದು ಸರಕಾರ ಎಚ್ಚರಿಕೆ ನೀಡಿದೆ.

Latest Videos

undefined

Reliance Foundation scholarship: ವಿದ್ಯಾರ್ಥಿ ವೇತನಕ್ಕೆ Reliance ಫೌಂಡೇಶನ್ ಅರ್ಜಿ ಆಹ್ವಾನ

ಯಾವುದನ್ನು ಮಾಡಬೇಕು?
1. ಚಂದಾದಾರರಾಗಲು ಸ್ವಯಂಚಾಲಿತ ಡೆಬಿಟ್ (Auto-debit) ಆಯ್ಕೆಯನ್ನು ಆರಿಸಿಕೊಳ್ಳುವುದೇ ಬೇಡ (ಕೆಲವು  Ed-tech ಕಂಪನಿಗಳು ಉಚಿತ-ಪ್ರೀಮಿಯಂ ಅನ್ನು ಆಫರ್ ನೀಡುತ್ತವೆ. ಮೊದಲ ನೋಟದಲ್ಲಿ ಹೆಚ್ಚಿನ ಕಂಪೆನಿಗಳು ನೀಡುವ ಈ ಆಫರ್ ಉಚಿತವೆಂದು ಕಾಣುತ್ತದೆ. ಆದರೆ ನಿರಂತರ ಕಲಿಕೆಯ ಪ್ರವೇಶವನ್ನು ಪಡೆಯಲು,  ಚಂದಾದಾರರಾಗಲು ಹಣ ಪಾವತಿ ಮಾಡಲೇಬೇಕಾಗುತ್ತದೆ. ಇನ್ನು ಮುಂದೆ ಉಚಿತ ಸೇವೆಗಳು ಇಲ್ಲ ಎಂದು ತಿಳಿದು ವ್ಯಕ್ತಿಯು Auto-debitಗೆ ಚಂದಾದಾರಿಕೆಯನ್ನು ಕೊಟ್ಟಿರುತ್ತಾನೆ.)
2. ಕಂಪನಿಗಳ ಉಚಿತ ಸೇವೆ ಚಂದಾದಾರಿಕೆಯನ್ನು ಒಪ್ಪಿಕೊಂಡು ಅಂಗೀಕರಿಸುವುದಕ್ಕೂ ಮುನ್ನ ಮೊದಲಿಗೆ ಷರತ್ತು ಮತ್ತು ನಿಯಮಗಳನ್ನು ತಪ್ಪದೆ ಓದಿ. ಇಲ್ಲವಾದರೆ ನಿಮ್ಮ  IP ವಿಳಾಸ (IP address) ಅಥವಾ ವೈಯಕ್ತಿಕ ಡೇಟಾ (personal data) ಟ್ರ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ.
3. ಶೈಕ್ಷಣಿಕ ಸಾಧನಗಳ ಖರೀದಿಗೆ ತೆರಿಗೆ ಇನ್ವಾಯ್ಸ್‌  ಹೇಳಿಕೆಯನ್ನು ಕಂಟೆಂಟ್/ಅಪ್ಲಿಕೇಶನ್ ಖರೀದಿ/ಪೆಂಡ್ರೈವ್ ಮೂಲಕ ಕೇಳಿ.
4.ನೀವು ಚಂದಾದಾರರಾಗಲು ಬಯಸುವ ಎಡ್-ಟೆಕ್ ಕಂಪನಿಯ ಹಿನ್ನೆಲೆಯನ್ನು ವಿವರವಾಗಿ ಪರಿಶೀಲನೆ ಮಾಡಿಕೊಳ್ಳುವುದನ್ನು ಮರೆಯಬೇಡಿ.
5.ಎಡ್-ಟೆಕ್ ಕಂಪನಿಗಳು ನೀಡಿರುವ ವಿಷಯದ ಗುಣಮಟ್ಟವನ್ನು ಪರಿಶೀಲಿಸಿ. ಮತ್ತು ಇದು ಪಠ್ಯಕ್ರಮ ಮತ್ತು ನಿಮ್ಮ ಅಧ್ಯಯನದ ವ್ಯಾಪ್ತಿಗೆ ಅನುಗುಣವಾಗಿದೆಯೇ? ಇಲ್ಲವೇ? ಮತ್ತು ನಿಮ್ಮ ಮಕ್ಕಳು ಇದನ್ನು ಸುಲಭವಾಗಿ ಗ್ರಹಿಸಬಲ್ಲರೇ ಎಂದು ಖಚಿತಪಡಿಸಿಕೊಳ್ಳಿ.
6.ಎಡ್-ಟೆಕ್ (EdTech) ಕಂಪನಿಯಲ್ಲಿ ನಿಮ್ಮ ಮಕ್ಕಳ ಕಲಿಕೆಗಾಗಿ ಯಾವುದೇ ಮೊತ್ತವನ್ನು ಹೂಡಿಕೆ ಮಾಡುವ ಮೊದಲು ಪಾವತಿ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ  ಅನುಮಾನಗಳು/ಪ್ರಶ್ನೆಗಳು ಇದ್ದರೆ ಕೇಳಿ ತಿಳಿದುಕೊಳ್ಳಿ.
7.ನಿಮ್ಮ ಡಿವೈಸ್‌, ಅಪ್ಲಿಕೇಶನ್ ಅಥವಾ ಬ್ರೌಸರ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಟೂಲ್ ಗಳನ್ನು ಸಕ್ರಿಯಗೊಳಿಸಿ. ಏಕೆಂದರೆ ಇದು ಕೆಲವು ನಿರ್ದಿಷ್ಟ ವಿಷಯಕ್ಕೆ ಪ್ರವೇಶವನ್ನು ನಿರ್ಬಂಧಿಸಲು ಮತ್ತು ಅಪ್ಲಿಕೇಶನ್ ಖರೀದಿಯ ಮೇಲೆ ಬೀಳುವ ಖರ್ಚನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.
8.ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳಲ್ಲಿನ ಕೆಲವು ಫೀಚರ್ ಗಳಿಂದ ಹೆಚ್ಚು ಖರ್ಚಾಗುತ್ತದೆ ಎಂದು ನಿಮ್ಮ ಮಕ್ಕಳಿಗೆ ತಿಳಿ ಹೇಳಿ. ಮಾತ್ರವಲ್ಲ ಎಡ್-ಟೆಕ್ ಕಂಪನಿ ಆ್ಯಪ್‌ಗಳಲ್ಲಿನ ಸಂಭವನೀಯ ಮಾರ್ಕೆಟಿಂಗ್ ತಂತ್ರಗಳು ಮತ್ತು ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಪ್ಪದೆ ತಿಳಿಸಿ ಕೊಡಿ
9. ಕಂಪೆನಿಯ ಬಗ್ಗೆ ಆನ್‌ಲೈನ್‌ನಲ್ಲಿ ಇರುವ ವಿಮರ್ಶೆಗಳನ್ನು ರೇಟಿಂಗ್ ಗಳನ್ನು ಪರಿಶೀಲನೆ ಮಾಡಿ. ಏನೇ ಕುಂದುಕೊರತೆಗಳು ಇದ್ದರೆ ಇತರರಿಗೆ ಪ್ರಯೋಜನಕಾರಿಯಾಗಬಹುದಾದ ನಿಮ್ಮ ಸಲಹೆಗಳು ಮತ್ತು ವಿಮರ್ಶೆಗಳನ್ನು ಬರೆಯಿರಿ.
10. ಸ್ಪ್ಯಾಮ್ ಕರೆಗಳ ಸಾಕ್ಷ್ಯವನ್ನು ರೆಕಾರ್ಡ್ ಮಾಡಿ (ಸಂಪೂರ್ಣ ಒಪ್ಪಿಗೆಯಿಲ್ಲದೆ ಯಾವುದೇ ಶಿಕ್ಷಣ ಪ್ಯಾಕೇಜ್‌ಗಳಿಗೆ ಬಲವಂತವಾಗಿ ಸೈನ್‌ಅಪ್ ಮಾಡುವಂತೆ ಮಾಡುವುದು ಇತ್ಯಾದಿ)
11.ಯಾವುದೇ ಎಡ್-ಟೆಕ್ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೊದಲು ಶಿಕ್ಷಣ ಸಚಿವಾಲಯದ PRAGYATA ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾದ ಮಕ್ಕಳ ಸುರಕ್ಷತಾ ಮಾರ್ಗಸೂಚಿಗಳನ್ನು  ತಪ್ಪದೆ ಓದಿಕೊಳ್ಳಿ

BCWD PhD Students Scholarship 2021-22: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ PhD ವ್ಯಾಸಂಗ

ಯಾವುದನ್ನು ಮಾಡಬಾರದು?
1.ಎಡ್-ಟೆಕ್ ಕಂಪನಿಗಳ ಜಾಹೀರಾತುಗಳನ್ನು ಕುರುಡಾಗಿ ನಂಬಬೇಡಿ.
2.ನಿಮಗೆ ತಿಳಿದಿಲ್ಲದ ಯಾವುದೇ ಸಾಲಕ್ಕೆ ತಪ್ಪಿಯೂ ಚಂದಾದಾರರಾಗಬೇಡಿ.
3. ದೃಢೀಕರಣವನ್ನು ಪರಿಶೀಲಿಸದೆ ಯಾವುದೇ ಮೊಬೈಲ್ ಎಡ್-ಟೆಕ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಳ್ಳಬೇಡಿ.
4. ಆ್ಯಪ್‌ಗಳಲ್ಲಿ ಚಂದಾದಾರರಾಗುವಾಗ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ನೋಂದಣಿಯನ್ನು ತಪ್ಪಿಸಿ. ಪ್ರತಿ ವಹಿವಾಟಿನ ಮೇಲಿನ ವೆಚ್ಚದ ಮೇಲೆ ಮಿತಿ  ಇರಲಿ.
5.ಇಮೇಲ್‌ಗಳು, ಸಂಪರ್ಕ ಸಂಖ್ಯೆಗಳು, ಕಾರ್ಡ್ ವಿವರಗಳು, ವಿಳಾಸಗಳು ಇತ್ಯಾದಿಗಳಂತಹ ನಿಮ್ಮ ಡೇಟಾವನ್ನು ಆನ್‌ಲೈನ್‌ನಲ್ಲಿ ಸೇರಿಸುವುದನ್ನು ತಪ್ಪಿಸಿ ಏಕೆಂದರೆ ಡೇಟಾವನ್ನು ಮಾರಾಟ ಮಾಡಬಹುದು ಇಲ್ಲವೆ ಹಗರಣಗಳಿಗೆ ಬಳಸಬಹುದು.
6.ಯಾವುದೇ ವೈಯಕ್ತಿಕ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಬೇಡಿ.  ಯಾವುದೇ ಆ್ಯಪ್‌ ಗಳಲ್ಲಿ ಪರಿಶೀಲಿಸದೇ ವೀಡಿಯೊ ಕರೆಗಳನ್ನು  ಸ್ವೀಕರಿಸುವುದಾಗಲಿ. ವಿಡಿಯೋ ಪ್ಲೇ ಮಾಡುವುದಾಗಲಿ ಮಾಡಬೇಡಿ. ಈ ಬಗ್ಗೆ ಎಚ್ಚರಿಕೆ ವಹಿಸಿ. ನಿಮ್ಮ ಮಗುವಿನ ಸುರಕ್ಷತೆಯನ್ನು ಅತ್ಯಂತ ಆದ್ಯತೆಯಲ್ಲಿ ಇರಿಸಿ.
7.ಸುಳ್ಳು ಭರವಸೆಗಳನ್ನು ನಂಬಿ ಪರಿಶೀಲನೆ ನಡೆಸದೆ ಕೋರ್ಸ್‌ಗಳಿಗೆ ಚಂದಾದಾರರಾಗಬೇಡಿ.
8.ಪರಿಶೀಲನೆ ನಡೆಸದೆ EdTech (Educational Technology) ಕಂಪನಿಗಳು ಹಂಚಿಕೊಂಡಿರುವ "ಯಶಸ್ಸಿನ ಕಥೆಗಳನ್ನು" ನಂಬಬೇಡಿ ಏಕೆಂದರೆ ಅವುಗಳು ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದ ಬಲೆಯಾಗಿರಬಹುದು.
9.ಪೋಷಕರ ಒಪ್ಪಿಗೆಯಿಲ್ಲದೆ ಖರೀದಿಗೆ ಅನುಮತಿ ನೀಡಬೇಡಿ. ಆ್ಯಪ್‌ಗಳಲ್ಲಿ ಖರೀದಿಯನ್ನು  ನಿರಾಕರಿಸಿ. RBI ಮಾರ್ಗಸೂಚಿಗಳ ಪ್ರಕಾರ OTP ಆಧಾರಿತ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
10.ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು OTP ಸಂಖ್ಯೆಯನ್ನು ಯಾವುದೇ ಮಾರ್ಕೆಟಿಂಗ್ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಬೇಡಿ. ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಿ. 
11.ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ನಿಮಗೆ ತಿಳಿದಿರದ ಮೂಲಗಳ ಯಾವುದೇ  attachments  ಅಥವಾ ಪರದೆ ಮೇಲೆ ಕಾಣಿಸುವ  ಪಾಪ್-ಅಪ್ ಗಳನ್ನು ಕ್ಲಿಕ್ ಮಾಡಬೇಡಿ.

click me!